ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

34 'ನೀನು ಏನು ಮಾಡಿದೆ' ಎಂಬದಾಗಿ ಕೆಲಿಪ್ಪೋ ಕೇಳಿದಳು, ಅದಕ್ಕೆ ಟೆಲಿಮಾಕ ಸ್ಥನು ಹೇಳಿದ್ದೇ ನಂದರೆ :- - “ ಸಿಸಿಲಿಯಲ್ಲಿದ್ದಾಗ, ದಾಸತ್ವಕ್ಕಿಂತಲೂ ಮರಣವು ಲೇಸೆಂದು ನಾನು ಭಾವಿಸಿದ್ದೆನು, ಈಗ ವಿಧಿಯಿಲ್ಲದೆ ದಾಸನಾಗಬೇಕಾಯಿತು, ಕುರಿಕಾಯುವು ದಕ್ಕೆ ಹೋಗಬೇಕಾಯಿತು. ಈ ವೃತ್ತಿಯಿಂದ ವಿಮೋಚನೆಯು ದೂರವಾ ಯಿತು, ಮೆಂಟರನು ಇಥಿಯೋಪಿಯಾಕ್ಕೆ ಕಳುಹಿಸಲ್ಪಟ್ಟನು, ಈ ದುರಾತ್ಮ ನಾದ ಮೆಟೋಫಿಸ್ಸನು ಸಸಾಟ್ರಿಸ್ಟನಿಗೆ ನಾವು ಗ್ರೀಕರಲ್ಲವೆಂಬದಾಗಿಯೂ, ಫಿನೀ ಪಿರ್ಯರೆಂಬದಾಗಿಯೂ ಪ್ರತ್ಯಯವನ್ನುಂಟುಮಾಡಿ, ನಮ್ಮನ್ನು ವಿಕ್ರಯ ಮಾಡುವುದಕ್ಕೆ ಪ್ರಭುವಿನ ಆಜ್ಞೆಯನ್ನು ಹೊಂದಿ, ಅದನ್ನು ಜಾರಿಗೆ ತಂದನು. ನಾನು ಕಾಡಿನಲ್ಲಿ ಕುರುಬನಾಗಿರಬೇಕಾಯಿತು. ಈ ಸ್ಥಳವು ಮರಳಿನ ದೊಡ್ಡ ಮೈದಾನದಿಂದ ಕೂಡಿದ್ದಾಗಿತ್ತು, ಪರ್ವತಾಗ್ರದಲ್ಲಿ ಹಿಮವೂ, ತಪ್ಪಲಲ್ಲಿ ಉರಿಯುವ ಬಿಸಲೂ, ಇವೆರಡೂ ಇದ್ದವು, ಅಲ್ಲಲ್ಲಿಯೇ ಬಂಡೆಯ ಸವಿಾಪದಲ್ಲಿ ಹುಲ್ಲಣ, ಕುರ್ಚು ಗಿಡಗಳೂ ಇದ್ದವು. ಪರ್ವತವು ಅನೇಕ ಪ್ರದೇ ಶಗಳಲ್ಲಿ ಕಡಿದಾಗಿಯ, ಭಾರಿ ಬಂಡೆಗಳುಳ್ಳದ್ದಾಗಿಯೂ ಇತ್ತು, ಕಣಿವೆಗಳು ಆಗಾಧವಾಗಿಯೂ, ಸೂರರಶ್ಮಿಯ ಪ್ರವೇಶಕ್ಕೂ ಅವಕಾಶವಿಲ್ಲದವುಗಳಾ ಗಿಯೂ ಇದ್ದವು. ಈ ಭಯಂಕರವಾದ ಸ್ಥಳದಲ್ಲಿ ಕುರುಬರ ಸಹವಾಸ ವಿನಾ ಇನ್ಯಾರ ಸಹಾಯವೂ ನನಗೆ ಇರಲಿಲ್ಲ. ಈ ಕುರುಬರು ಪ್ರಾಯಕವಾಗಿ ಅಸಂ ಸ್ಟಾರಿಗಳಾಗಿಯೂ, ಒರಟರಾಗಿಯೂ ಇದ್ದರು. ಈ ಅವಸ್ಥೆಯಲ್ಲಿ ಇರತಕ್ಕ ದುರದೃಷ್ಟವು ನನಗೆ ಬಂದಿತಲ್ಲಾ ಎಂದು ನಾನು ವ್ಯಸನಾಕ್ರಾಂತನಾಗಿದ್ದೆನು. ಈ ಕುರುಬರಲ್ಲಿ ಟಿಸ್ ಎಂಬ ಒಬ್ಬ ಕುರುಬನಿದ್ದನು. ಇವನು ಬಹಳ ದುರ ಹಂಕಾರಿ. ಅವನು ಮೆಟೊಮೆಸ್ಸನ ಪ್ರಸನ್ನತೆಗೆ ಪಾತ್ರನಾಗಬೇಕೆಂದು ಅವನಿಗೆ ಮುಖೋಲ್ಲಾಸವಾಗುವಂತೆ ಬಹು ಜನಗಳ ಮೇಲೆ ಚಾಡಿಯನ್ನು ಹೇಳುತ್ತಾ ಬಹು ಜನಗಳನ್ನು ಹಿಂಸಿಸುತ್ತಾ ಇದ್ದನು. ಯಾವಾಗೂ ನನ್ನ ಮೇಲೆ ಇಲ್ಲದ ತಪ್ಪುಗಳನ್ನು ಆಪಾದಿಸುತ್ತಾ ಇದ್ದನು. ಅವನ ಆಜ್ಞೆಯೇ ವೇದವಾಕ್ಕೆಂದು, ಹೇಳಿದ ಕೆಲಸವನ್ನೆಲ್ಲಾ ನಾನು ಮಾಡುತ್ತಿದ್ದಾಗ, ನನ್ನಲ್ಲಿ ಇಲ್ಲದ ದೋಷಗ ತನ್ನು ಆರೋಪಿಸುತ್ತಾ, ಅಲ್ಪವಾದ ತಪ್ಪುಗಳನ್ನು ಪರ್ವತಾಕಾರವಾಗಿ ಮಾಡಿ, ಮೆಟೋಫಿಸ್ಸನಿಗೆ ಹೇಳುತ್ತಾ, ದುಸ್ಸಹವಾದ ಶಿಕ್ಷೆಗೆ ಗುರಿಮಾಡುತ್ತಾ, ಅಹೋ ರಾತ್ರಿಗಳಲ್ಲಿಯೂ ನನ್ನ ಶಕ್ತಿಗೆ ವಿಾರಿದ ಕೆಲಸಗಳನ್ನು ಮಾಡಿಸುತ್ತಾ ಇದ್ದನು, ನಿರಾಸೆಯ, ಪ್ರಾಣದಲ್ಲಿ ನಿರಪೇಕ್ಷೆಯ, ಆತ್ಮಹತ್ಯದಲ್ಲಿ ಆಸಕ್ತಿಯೂ ನನಗೆ ಉರಿಯಿತು, ಒಂದು ಹೊರಡು ದಿವಸ ವ್ಯಸನಹಳ್ಳಿ ಮಗ್ನಳಾಗಿ, ನನ್ನ ತುಟಿ