ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

35ಮಂದೆಯನ್ನು ಮರೆತು, ಒಂದು ಗುಹೆಯ ಬಾಗಲಲ್ಲಿ ದೇಹವನ್ನು ಬಿಡಬೇಕೆಂಬ ಸಂಕಲ್ಪದಿಂದ ಬಿದ್ದು ಇದ್ದೆನು. ಇಂಥಾ ನಿರಾಸೆಯಲ್ಲಿರುವಾಗ, ಸದರಿ ಪರ್ವ ತವು ಕಂಪಿಸುವುದಕ್ಕೆ ಉಪಕ್ರಮವಾಯಿತು. ಪರ್ವತಾಗ್ರದಲ್ಲಿ ಇದ್ದ ಓಕ್ ಗಿಡ ಗಳೂ, ಪೈ೯ ಗಿಡಗಳೂ ಬಗ್ಗಿ ದವು. ಗಾಳಿಯು ನಿಂತು ಹೋಯಿತು, ಅಗಾ ಧವಾದ ಒಂದು ಅಶರೀರವಾಕ್ಕು ಕೇಳಬಂತು.” ಈ ಆಕಾಶವಾಣಿಯು ಹೇಳಿ ದ್ದೇನಂದರೆ :- ” “ ಎಲೈ ವಿವೇಕಶಾಲಿಯಾದ ಯಲಿಸೆಸ್ಸನ ಮಗನೆ, ಟೆಲಿಮಾಕ ಸೃನೆ, ಆತ್ಮ ಹತ್ಯೆ ಮಾಡಿಕೊಳ್ಳಬೇಕೆಂಬ ಸಂಕಲ್ಪವನ್ನು ಬಿಡು, ಶಾಂತಿಯನ್ನು ಹೊಂದು, ಕಷ್ಟವನ್ನರಿಯದವರು ಸುಖವನ್ನು ಅನುಭವಿಸುವುದಕ್ಕೆ ಪಾತ್ರರಲ್ಲ. ಬಿಸಲಿನಲ್ಲಿ ಶ್ರಮಪಟ್ಟವರಿಗೆ ನೆರಳಿನ ಮಹಿಮೆಯು ಗೊತ್ತಾಗುವಂತೆ ಸದಾ ನೆರಳಿ ನಲ್ಲಿರತಕ್ಕವರಿಗೆ ನೆರಳಿನ ಮಹಿಮೆ ಯು ಗೊತ್ತಾಗುವುದೇ ? ದಾಸಾನುದಾಸನಾಗಿ ಅಹೋರಾತ್ರಿಗಳಲ್ಲಿಯೂ ಕಷ್ಟ ಪಟ್ಟವನ್ನು ಪ್ರಭುತ್ವಕ್ಕೆ ಬಂದರೆ, ಜನಗಳ ಕಷ್ಟ ಸು ಖಗಳನ್ನು ತಿಳಿದುಕೊಂಡು, ಹೇಗೆ ಪ್ರಜಾರಂಜನೆಯನ್ನು ಮಾಡಬಲ್ಲನೋ ಹಾಗೆ ಸದಾ ಸಂಪತ್ತಿನಲ್ಲಿ ಇದ್ದುಕೊಂಡು, ಕಷ್ಟದ ಮಹಿಮೆಯನ್ನೇ ತಿಳಿಯದವರು ಪ್ರಚಾರಂಜನೆಯನ್ನು ಮಾಡುವುದು ಸಾಧ್ಯವೇ ? ಆಗರ್ಭ ಶ್ರೀಮಂತರು ಶ್ರೀ ಮಂತರಾಗುವುದಕ್ಕೆ ಯೋಗ್ಯರೇ ಹೊರತು, ಅವರು ಶ್ರೀಮಂತ ಪದವಿಯಿಂದ ಚ್ಯುತರಾದರೆ, ನಿಮಿಷಾರ್ಧವೂ ಬದುಕಲಾರರು, ಕೋಟ್ಯಂತರ ಪ್ರಭುಗಳು ಸಂಪಕ್ಷಿಯು ಪರಾಣ್ಮುಖಳಾದ ಕೂಡಲೆ, ಪತನದ ಕಷ್ಟವನ್ನು ಅನುಭವಿಸ ಲಾರದೆ, ದೇಹತ್ಯಾಗವನ್ನು ಮಾಡಿರುವರು, ಯಲಿಸ್ಟನ ಮಗನಾಗಿ, ಕಷ್ಟ ವನ್ನು ಅನುಭವಿಸುವುದಕ್ಕೆ ಹಿಂತೆಗೆಯುವುದು ನಿನಗೆ ಧರ್ಮವೇ? ಲೋಕ ವೀರನಾಗಿಯೂ, ಅನನ್ಯಸಾಧಾರಣವಾದ ಪ್ರಜಾರಾಜಕತೆಯಲ್ಲಿ ದಕ್ಷನಾಗಿಯೂ ಇರುವ ಯೂನಿಸೆಸ್ಸನು ನಿನ್ನ ಹಡಿತನವನ್ನು ನೋಡಿದರೆ, ಬಹಳ ಸಂಕಟಸು ವನು, ಕಷ್ಟವನ್ನು ಅನುಭವಿಸುವುದಕ್ಕೆ ಮಹಾತ್ಮರಾದವರು ಹೆದರಬಹುದೇ ? ಈ ಕಷ್ಟವನ್ನು ತಪ್ಪಿಸಿಕೊಳ್ಳುವುದಕ್ಕೋಸ್ಕರ ಆತ್ಮಹತ್ಯನನ್ನು ಮಾಡಿಕೊಳ್ಳದೇ ಕೆಂದು ನೀನು ಮಾಡಿರುವ ಸಂಕಲ್ಪವು ಬಹಳ ನೀಚವಾದದ್ದು , , ಈ ಸಂಕ ವೆನ್ನು ಬಿಡು. ಈ ದುರದೃಷ್ಟವೆಲ್ಲಾ ನಿನ್ನ ಕ್ಷೇಮಾರ್ಥವಾಗಿ ಬಂದಿರುವುದೆಂದು ತಿಳಿದುಕೊ, ಜನಗಳಿಗೆ,ಎಂಥಾ ಕಷ್ಟನಿಷು ರಗಳು ಬರುತ್ತವೋ ಅವುಗಳನ್ನು ಸ್ವಯಂ ಅನುಭವಿಸಿ ತಿಳಿದುಕೊಳ್ಳದೆ ಇರತಕ್ಕವರು ಪ್ರಭುತ್ವಕ್ಕೆ ಅನರ್ಹರು ಕಷ್ಟಗಳು ಬಂದಾಗ ತಗ್ಗು ವುದು ಅಧಮರ ಸ್ವಭಾವ, ಯೂಲಿಸೆಸ್ಸನ ಮಗನು ಹೇಡಿತನವನ್ನು ತೋರಿಸಬಾರದು, ಕಷ್ಟವನ್ನು ಜಯಿಸುವುದರಲ್ಲಿ ನಿನ್ನ ಶಕ್ತಿ ಯನ್ನು ತೋರಿಸು, ಇಥಾಕಾ ಪಟ್ಟಣಕ್ಕೆ ನೀನು ವಾಪಸು ಹೋಗುವ ಸಂಭ