ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8ಆ ಶಾ ಕಾಲಹರಣ ಮಾಡುತ್ತಿದ್ದೆನು, ವಿಚಾರಪರತೆಯ ಅರಿಷ್ಟ ನಿವಾರಣೆಗೂ, ಇಷ್ಟ ಪ್ರಾಪ್ತಿಗೂ ಕೇವಲ ಸಾಧಕವಾದುದು. ಹೀಗೆಯೇ ವಿಚಾರ ಮಾಡುತ್ತಾ, ಅರಣ್ಯದಲ್ಲಿ ಸಂಚಾರ ಮಾಡುತ್ತಿರು ವಾಗ, ನನ್ನ ಎದುರಿಗೆ ಒಬ್ಬ ಮುದುಕನು ಒಂದು ಪುಸ್ತಕವನ್ನು ಹಿಡಿದುಕೊಂಡು, ನನಗೆ ಅಭಿಮುಖವಾಗಿ ಬಂದನು. ಅವನ ನೆತ್ತಿಯಲ್ಲಿ ತ್ರಿವಳಿಗಳಿದ್ದವು, ತಲೆಯ ಮೇಲೆ ಮಧ್ಯ ನೆತ್ತಿಯವರೆಗೂ ಕೂದಲು ಇರಲಿಲ್ಲ. ಒರೆಯಿಟ್ಟ ಬೆಳ್ಳಿಯಂತೆ ಥಳಥಳಿಸುತ್ತಲಿರುವ ಕೂದಲುಗಳುಳ್ಳ ಗಡವು ನಡುವಿನ ವರೆಗೂ ಜೋಲಾಡು ತಿದ್ದಿತು, ವೃದ್ಧನ ರಾಗೂ, ಇವನು ಆಜಾನುಬಾಹುವಾಗಿದ್ದನು, ವಯಸ್ಸಾ ಗಿದ್ದಾಗ್ಯೂ, ಮುಖದಲ್ಲಿ ಗುಲಾಬಿ ರಂಗು ಛಳಥಳಿಸುತ್ತಿತ್ತು, ಅವನ ಕಣ್ಣುಗಳು ನಕ್ಷತ್ರಗಳಂತೆ ಪ್ರಜ್ವಲಿಸುತ್ತಿದ್ದವು, ಅವನು ಮಾತನಾಡುವುದಕ್ಕೆ ಉಪಕ್ರಮಿ ಸಲು, ಪ್ರತಿ ಒಂದು ಶಬ್ದ ವೂ ಮೂರ್ತಿಮತ್ಕಾದ ಮಾಧುರದಂತೆ ಇತ್ತು. ಅವನ ವಾಗೋರಣೆಯು ಚಿತ್ರವನ್ನು ಆಕರ್ಷಿಸುತ್ತಿತ್ತು, ಅವನನ್ನು ನೋಡಿದ ಕೂಡಲೆ, ಅನಿರ್ವಚನೀಯವಾದ ಭಕ್ತಿಯೂ ಪ್ರೀತಿಯ ನನಗೆ ಉಂಟಾಯಿತು. ಅವನ ಹೆಸರು ಟರ್ಮಾಸಿಲಿಸ್ ಎಂಬುದೆಂದು ಗೊತ್ತಾಯಿತು. ಈಜಿಪ್ಟ್ ದೇಶದಲ್ಲಿ ಪ್ರಸಿದ್ದವಾದ ದೇವಾಲಯವೊಂದಿರುವುದು, ಅಲ್ಲಿ ಅಪಾಲೊ ಎಂಬ ದೇವ ತಯು ಇರುವುದು, ಇವನು ಆ ದೇವತೆಯು ಅರ್ಚಕನೆಂದು ಗೊತ್ತಾಯಿತು. ಇವನ ಕೈನಲ್ಲಿದ್ದ ಪುಸ್ತಕವು ಆ ದೇವರ ಕೀರ್ತನೆಗಳನ್ನು ಒಳಗೊಂಡಿತ್ತು. ಆ ಅರ್ಚಕನು ನನ್ನನ್ನು ನೋಡಿ, ಪುತ್ರನಿರ್ವಿಶೇಷವಾದ ಪ್ರೀತಿಯಿಂದ ನನ್ನನ್ನು ನಾ ತನಾಡಿಸಿದನು. ಭೂತಭವಿಷದ್ವರ್ತಮಾನಗಳಿಗೆ ಸಂಬಂಧಪಟ್ಟ ಅನೇಕ ವಿಷ ಯಗಳನ್ನು ಇವನು ನನಗೆ ತಿಳಿಸಿದನು, ಈತನು ಹೇಳಿದ ವಿಷಯಗಳೆಲ್ಲಾ ಅತ್ಯಂತ ಮನೋಹರವಾಗಿದ್ದವು, ಭವಿಷ್ಯತ್ನಿಷಯಗಳನ್ನು ಹೇಳುವುದರಲ್ಲಿ ಇವನು ಅಸಾಧಾರಣವಾದ ದೀರ್ಘದೃಷ್ಟಿಯನ್ನು ತೋರಿಸಿದನು, ವಯೋವೃ ದ್ಧನಾಗಿದ್ದಾಗ್ಯೂ, ಜ್ಞಾನವಿಷಯದಲ್ಲಿ ಇವನು ಕುಮಾರಾವಸ್ಥೆಯಲ್ಲಿಯೇ ಇದ್ದನು. ಪ್ರಪಂಚವ್ಯವಹಾರಗಳು ಯಾರಿಗೆ ಸಮಗ್ರವಾಗಿ ತಿಳಿಯದೋ ಅವರಿಗೆ ಲೋಕಾ ನುಭವವನ್ನು ಉಂಟುಮಾಡಿ, ದುರ್ವಗ್ರಪ್ರವರ್ತನಗಳಿಂದ ಉಂಟಾಗತಕ್ಕ ಅನ ರ್ಥಗಳನ್ನು ತೋರಿಸಿ, ಅವರು ಸನ್ಮಾರ್ಗಪ್ರವರ್ತಕರಾಗುವಂತೆ ಮಾಡುವುದು ಅನುಭವಶಾಲಿಗಳಾದ ಹಿರಿಯರ ಕರ್ತವ್ಯವೆಂದು ಈತನು ತಿಳಿದುಕೊಂಡಿದ್ದನು. 11 ಈತನು ನನ್ನಲ್ಲಿ ತುಂಬಾ ಕೃಪೆಯನ್ನು ತೋರಿಸಿದನು, ನನ್ನ ಮನೋವಿ ಕಾರಗಳನ್ನು ಹೋಗಲಾಡಿಸುವುದಕ್ಕೆ ತಕ್ಕ ಪುಸ್ತಕಗಳನ್ನು ನನಗೆ ಕೊಟ್ಟನು. ನನ್ನನ್ನು ಮಗ ಎಂಬದಾಗಿ ಕರೆಯುತ್ತಿದ್ದನು. ನಾನು ಅವನನ್ನು ತಂದೆ ಎಂಬ