ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

39 ದಾಗಿ ಕರೆಯುತ್ತಿದ್ದೆನು. ಮಂಟರನ ಸಹವಾಸವು ತಪ್ಪಿದಾರಭ್ಯ ನಾನು ಅನಾ ಥನಾಗಿದ್ದೆನು, ನನ್ನನ್ನು ಸನಾಥನನ್ನಾಗಿ ಮಾಡಬೇಕೆಂದು ದೇವರು ಇವನ ಸಹಾಯವನ್ನು ನನಗೆ ದಯಪಾಲಿಸಿರ ಬೇಕೆಂದು ನನಗೆ ತೋರಿತು, ಇವನು ಆರ್ಫಿಯಸ್ ರ್ಲೈಸ್‌ರಂತೆ ದೇವತಾಂಶ ಸಂಭೂತನಾಗಿರಬೇಕೆಂದು ತೋರು ತಿತ್ತು, ಆಗಾಗ್ಗೆ ಹಿತೋಪದೇಶಗರ್ಭಿತಗಳಾದ ಅನೇಕ ಶ್ಲೋಕಗಳನ್ನು ಹೇಳುತ್ತಿದ್ದು, ಕಾಲೋಚಿತವಾದ ಹಿತೋಪದೇಶಗಳು ಸಂದರ್ಭಾನುಸಾರ ವಾಗಿ ಹೇಳ್ಳಡುತ್ತಲಿದ್ದುದರಿಂದ, ಸದರಿ ಶ್ಲೋಕಗಳು ಸ್ವಕಪೋಲಕಲ್ಪಿತಗಳೋ ಅಥವಾ ಇವನು ವ್ಯಾಸಂಗ ಮಾಡಿರತಕ್ಕ ಗ್ರಂಧಗಳಿಂದ ಸಂಗ್ರಹಿಸಲ್ಪಟ್ಟವು ಗಳೊ ಗೊತ್ತಾಗತ್ತಲಿರಲಿಲ್ಲ, ಅದು ಹೇಗಾದರೂ ಇರಲಿ, ವಿವೇಕಗರ್ಭಿತ ಗಳಾದ ವಚನಗಳು ಗುಗಾಪ್ರವಾಹದಂತೆ ಅವನಿಂದ ಹೊರಡುತ್ತಿದ್ದವು. ಇಷ್ಟು ಮಾತ್ರವೇ ಅಲ್ಲ, ವೀಣೆಯನ್ನು ನುಡಿಸುವುದರಲ್ಲಿಯೂ, ಗಾನವನ್ನು ಮಾಡುವು ದರಲ್ಲಿಯೂ ಅವನಿಗೆ ಅಸದೃಶವಾದ ಶಕ್ತಿಯು ಇತ್ತು, ಇವನು ಗಾನಮಾಡು ವುದಕ್ಕೆ ಉಪಕ್ರಮಿಸಿದರೆ, ಮನುಷ್ಯರು ಮಾತ್ರವೇ ಅಲ್ಲದೆ, ಕರಡಿ, ಸಿಂಹ ಹುಲಿ ಮೊದಲಾದ ಭಯಂಕರವಾದ ತಿರಗ್ಲಂತುಗಳೂ ಕೂಡ ನಾಯಿಗಳಂತ ಬಾಲವನ್ನು ಅಲ್ಲಾಡಿಸಿಕೊಂಡು, ಇವನ ಸುತ್ತಲೂ ಕುಳಿತುಕೊಂಡು, ಇವನ ಕಾಲುಗಳನ್ನು ನೆಕ್ಕುತ್ತಾ ಸರನ ತಾನಂದ ಸುಖವನ್ನು ಅನುಭವಿಸುತ್ತಿದ್ದವು. ಯಕ್ಷರೂ, ಗಂಧರ್ವರೂ, ಕಿನ್ನರರೂ ಇವನನ್ನು ಆವರಿಸಿಕೊಂಡು, ಗಾನಸುಖ ವನ್ನು ಅನುಭವಿಸುತ್ತಾ, ತಾಳವನ್ನು ಅನುಸರಿಸಿ ನರ್ತನ ಮಾಡುತ್ತಿದ್ದ ರು. ಇವನ ಗಾನದ ಮಹಿ ಯಿಂದ ಸ್ಥಾವರಗಳಾದ ಪರ್ವತಗಳೂ, ಸಮುದ್ರಗಳೂ ವೃಕ್ಷಗಳೂ, ಭಂಡೆಗಳೂ ಕೂಡ ಆನಂದದಿಂದ ಉಬ್ಬು ನತಿ ತೋರುತ್ತಿದ್ದವು. ಇವನ ಗಾನಗಳೆಲ್ಲಾ ಭಕ್ತಿರಸಪ್ರಧಾನಗಳಾಗಿದ್ದವು, ಸೃಷ್ಟಿ ಸ್ಥಿತಿಪ್ರಳಯಗಳಿಗೆ ಕರ್ತನಾದ ಶ್ರೀ ಪರಬ್ರಹ್ಮನ ಅಪಾರವಾದ ಮಹಿಮೆಯನ್ನೂ, ಅವನ ಭಕ್ತರಲ್ಲಿ ಅಗ್ರಗಣ್ಯರಾದ ಮಹಾನುಭಾವರುಗಳ ಗುಣಾತಿಶಯಗಳನ್ನೂ, ಅವನು ಮಾಡಿದ ಅವತಾರಗಳಲ್ಲಿ ತೋರುವ ವಿವೇಕಾತಿ ಶಯವನ್ನೂ ಸಕ್ಕಂದನ ವನಿತಾದಿಗಳಿಂದ ಉಂಟಾಗತಕ್ಕ ಪಾರ್ಥಿವ ಸುಖಕ್ಕಿಂತಲೂ ಈ ಅಖಂಡ ಬ್ರಹ್ಮಾಂಡದಲ್ಲಿ ತೋರು ವ ಜಗದೀಶ್ವರನ ಮಹಿಮೆಯನ್ನು ತಿಳಿದುಕೊಳ್ಳತಕ್ಕ ದೈವಿಕ ಸುಖವು ಎಷ್ಟು ಉತ್ತಮವಾದದ್ದೂ ಅದನ್ನೂ ಇವನ ಗಾನವು ಪ್ರಕಾಶ ಪಡಿಸುತ್ತಿದ್ದಿತು, ನಿಲು ವಂಗಿಯನ್ನು ಹಾಕಿಕೊಂಡು, ಮಗೂ ಬಾ, ಎಂಬದಾಗಿ ಪಿತೃ ನಿರ್ವಿಶೇಷವಾದ ಪ್ರೀತಿಯಿಂದ ಕರೆದು, ನನ್ನನ್ನು ಕೂಡಿಸಿಕೊಂಡು, ಹಿತೋಪದೇಶಗಳನ್ನು ಮಾರು ಶ್ರಟ; ದೇವತಾಚುಗprಳಗwಾದ ಶ್ಲೋಕಗಳನ್ನು ಹೇಳುತ್ತ, ಸಹ