ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರುತ್ತದೆ, ಆಗುತ್ತದೆ, ಒಂದು ಕಾಲು ಮತ್ತೊಂದು ಕಾಲದಲ್ಲಿ ಳನ್ನು ಮಾಡುತ್ತಲೂ ಇದ್ದರೆ, ಅದರಿಂದ ನನಗೆ ಉಂಟಾಗುತ್ತಿದ್ದ ಸುಖವು ಅನಿ ರ್ವಚನೀಯವಾಗಿ ಪರಿಣಮಿಸಿತು, ನನ್ನ ತಂದೆಯಾದ ಯೂಲಿಸಿಸ್ಸನು ಈ ವೇಷ ದಲ್ಲಿ ಬಂದಿರುವನೋ ಅಥವಾ ಮೆಂಟರು ಈ ರೀತಿಯಲ್ಲಿ ಬಂದಿರುವನೋ ಅಥವಾ ಜಗದೀಶ್ವರನೇ ಹೀಗೆ ಬುದಿರುವನೋ ” ಎಂಬ ಸಂದೇಹವು ನನಗೆ ಉಂಟಾ ಯಿತು, ಇವನು ನನಗೆ ಹೇಳಿದ್ದೇನುದರೆ :- « ಧೈರವು ಸರ್ವತ್ರ ಸಾಧಕವಾದದ್ದು, ಸಪ್ಪುರುಷರನ್ನು ಜಗದೀಶ್ವರನು ಎಂದಿಗೂ ಬಿಡುವುದಿಲ್ಲ, ಸತ್ಪುರುಷರಿಗೆ ವಿಪತ್ತು ಬರುವುದುಂಟು. ಅವುಗಳು ಬರುವುದಕ್ಕೆ ಕಾರಣವೂ ಉಂಟು. ವಿಸತ್ತುಗಳ ಮಹಿಮೆಯನ್ನು ತಿಳಿಯದವರು ಸಂಪತ್ತನ್ನು ಅನುಭವಿಸುವುದಕ್ಕೆ ಅನರ್ಹರಾಗುವರು, ಕಷ್ಟ ಬಂದಾಗ ಧೋರ ವನ್ನು ಅವಲಂಬಿಸಬೇಕು, ಪಾಮರರಂತೆ ಭಯಭ್ರಾಂತರಾಗುವುದು ತಪ್ಪು. ಪ್ರಪಂಚದ ಸೃಷ್ಟಿ ಸ್ಥಿತಿ ಪ್ರಳಯಗಳನ್ನು ಪರಿಶೀಲಿಸಿ ನೋಡು, ಒಂದು ಕಾಲದಲ್ಲಿ ಪ್ರಪಂಚವು ಬೆಳಕಿನಿಂದ ಸರಿ ಪೂರ್ಣವಾಗುತ್ತದೆ, ಮತ್ತೊಂದು ಕಾಲದಲ್ಲಿ ತಮ ೬ನಿಂದ ವ್ಯಾಪ್ತವಾಗುತ್ತದೆ. ಒಂದು ಕಾಲದಲ್ಲಿ ಶಾಂತಿಯು ಪರಿಪೂರ್ಣವಾಗಿ ರುತ್ತದೆ. ಒಂದು ಕಾಲದಲ್ಲಿ ಗಾಳಿ, ಮಳೆ, ಗುಡುಗು, ಸಿಡಿಲು ಮೊದಲಾದವು ಗಳ ಆರ್ಭಟದಿಂದ ವ್ಯಾಪ್ತವಾಗುತ್ತದೆ. ಒಂದು ಕಡೆ ಶಾಂತಿಯು ಕೋಲಾಹಲ ವಾಗಿರುತ್ತದೆ, ಮತ್ತೊಂದು ಕಡೆ ಭೂಗರ್ಭದಿಂದ ಅಗ್ನಿಜ್ವಾಲೆಯು ಪ್ರಪಂಚವ ನ್ನೆಲ್ಲಾ ಸುಟ್ಟು ಬಿಡುವಂತೆ ಹೊರಡುತ್ತದೆ. ಒಂದು ಕತೆ ಸಮುದ್ರವು ಶಾಂತ ರಾಗಿರುತ್ತದೆ, ಮತ್ತೊಂದು ಕಡೆ ಸಮುದ್ರದ ಅಲೆಗಳು ಪರ್ವತಾಕಾರವಾಗಿ ಎದ್ದು, ಸಮುದ್ರದ ಮೇಲೆ ಪ್ರಯಾಣ ಮಾಡತಕ್ಕವರಿಗೆ ಭಯವನ್ನು ಉಂಟುಮಾ ಕುತ್ತವೆ, ಒಂದು ಕತೆ ಸಾಗರವು ಸರೋವರದಂತೆ ಕಾಣುತ್ತದೆ, ಮತ್ತೊಂದು ಕಡೆ ಮೇಲ್ಸ್ಟಾ ನ ಮೊದಲಾದ ಅನೇಕ ಮೈಲಿಗಳ ವ್ಯಾಸವುಳ್ಳ ಭಯಂಕರ ವಾದ ಸುಳಿಗಳಿಗೆ ಸಿಕ್ಕಿ ನತವ ಗತಕ್ಕ ಗಗಳನ್ನೂ, ಹಡಗುಗಳನ್ನೂ ತೋರಿ ಸುತ್ತವೆ. ಎಲ್ಲಿ ನೋಡಿದಾಗ, ಗೆದ ಹಾಗೆ ಕೀಟಗಳ ಮೊದಲ್ಗೊಂಡು ಆನೆಗಳವರೆಗೂ ಅನೇಕ ವಿಧವಾ ರಾಣಿಗಳ ಉತ್ಪನ್ನವಾಗುತ್ತವೆ. ಎಲ್ಲಿ ನೋಡಿದಾಗ್ಯೂ, ಉತ್ಪನ್ನವಾದ ಪ್ರಾಣಿಗಳ ಸಮುದಾಯವು ಸ್ವರ್ಗಸುಖವನ್ನು ಅನುಭವಿಸುವಂತೆಯ, ನರಕ ಯಾತನೆಗಳನ್ನು ಅನುಭವಿಸುವಂತೆ ಯ ಕಾಣ) ಇವೆ, ಪರಿಶೀಲಿಸಿ ನೋಡಿದರೆ, ಈ ವ್ರ ಸುಚ ವು ಸಕಲ ಭೋಗ್ಯವಸ್ತುಗಳಿಗೂ ಉತ್ಪತ್ತಿ ಸ್ಥಾನವಾಗಿಯ, ಪ್ರಳಯ ಸ್ನವಾಗಿಯ, ಅಧವಾ ಮಹಾರುದ್ರ ಭೂವಿಯಾಗಿಯೂ ಇರುವಂತೆ ಕಾಣುತ್ತದೆ. ಈ ಪ್ರಪಂಚವನ್ನು ನೋಡಿದಾಗ, ಸರ್ವವು ಶಾಶ್ವತವದದ್ದೆಂದು ಭ್ರಮೆಯು ಉಂಟಾಗುವುದನ್ನು ಕಲಿಸಿ