ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋಡಿದರೆ, ಮಹದಾಶ್ಚರವಾಗುವುದು, ಯಕ್ಷಪ್ರಶ್ನೆಯಲ್ಲಿ ಪ್ರಪಂಚದಲ್ಲಿ ಕಳ್ಳ ಶ್ಯವಾದ್ದು ಏನು ಎಂದು ಪ್ರಶ್ನೆಯು ಹಾಕಲ್ಪಟ್ಟಾಗ, ಧರ್ಮರಾಯನು ಅಜಯ್ಯ ಹನಿ ಭೂತಾನಿ ಪ್ರವಿಶಂತಿ ಯಮಾಲಯಂ | ಶೇಪಾಕಿಸ್ಥಾವರ ಮಿಚ್ಛಂತಿ ಕಿದೂ ಶ್ಯ ಮತಃಪರಂ || ” ಎಂಬದಾಗಿ ಹೇಳಿದನೆಂದು ತಿಳಿಯಬರುತ್ತದೆ. ಈ ಕ್ಷಣ ಭಂಗುರವಾದ ಮಾಯಾಮಯವಾದ ಪ್ರಪಂಚದಲ್ಲಿ ನಡೆಯತಕ್ಕ ಸೃಷ್ಟಿಸ್ತಿತಿತ್ರಳಯ ರೂಪವಾದ ಕರ್ಮಗಳನ್ನು ನೋಡಿದರೆ, ಯಾರಿಗೆ ತಾನೆ ಆಶ್ಚ ಶ್ಯವಾಗುವುದಿಲ್ಲ? ಎಲ್ಲರಿಗೂ ಅವರವರ ಮನೊವಾಕ್ಕರ್ಮಗಳಿಗನುರೂಪವಾದ ಫಲವು `ಆನು ವುದು, ಅದನ್ನು ತಪ್ಪಿಸುವುದಕ್ಕೆ ಬ್ರಹ್ಮಾದಿಗಳಿಂದಲೂ ಸಾಧ್ಯವಲ್ಲ. ** ನಾನು ಕೆಟ್ಟ ಕರ್ಮಗಳನ್ನು ಮಾಡಿ ಇಲ್ಲ. ನಾನು ಶುಭಕರ್ಮಗಳನ್ನೇ ಮಾಡಿ ಇಡನೆ. ನನಗೆ ಎತಕ್ಕೆ ಈ ಕಷ್ಟಗಳು ಬಂದವು ? ?” ಎಂದು ಅಲ್ಪಜ್ಞರಾದವರು ಎಂದುಕೊ ಳ್ಳುವರು. ನಾನು ಎಂದರೆ ಅರ್ಧವೆನು ? ಬೀಜವೃಕ್ಷಗಳ ಸ್ವರೂಪವನ್ನು ಶಂ ಶೀಲಿಸಿ ನೋಡು, ಬೀಜವು ವೃಕ್ಷಕ್ಕೆ ಕಾರಣ, ನೃಕ್ಷವು ಬೀಜಕ್ಕೆ ಕಾರಣ. ಈ ಬೀಜವೃಕ್ಷಗಳಿಗೆ ಮೊದಲು ಯಾವುದು ? ಕೊನೆಯಾವುದು ? ಅದರಂತೆಯೇ ಸಕಲ ಚರಾಚರ ವಸ್ತುಗಳಿಗೂ ಮಿತಿಯಿಲ್ಲದಷ್ಟು ಜನ್ಮಾಂತರಗಳು ಬರುವುದಿ ಲ್ಲವೇ ? ಒಂದು ಜನ್ಮದಲ್ಲಿ ನಾನು ಎಂದುಕೊಂಡರೆ, ನಾನು ಎಂಬ ಶಬ್ದಕ್ಕೆ ಹಿಂದಿನ ಜನ್ಮವಿರುವುದಿಲ್ಲವೇ ? ಪ್ರತಿ ಒಂದು ಜನ್ಮದಲ್ಲಿಯೂ ಅನೇಕ ಕರ್ಮಗಳು ಮಾಡಲ್ಪಡುವುದಿಲ್ಲವೇ ? ಆ ಕರ್ಮಗಳಿಗೆ ಅನುರೂಪವಾದ ಘವು ಆ ಜನರಲ್ಲಿ ಅನುಭವಿಸಲ್ಪಡುವುದೂ ಉಂಟು, ಹಾಗೆ ಅನುಭವಿಸಲ್ಪಡುವುದಕ್ಕೆ ಮುಂಚೆಯೇ ಪೂರೈಸಲ್ಪಟ್ಟರೆ, ಸಂಚಿತವಾದ ಕರ್ಮಫಲವು ಜನ್ಮಾಂತರದಲ್ಲಿ ಅನುಭವಿಸಲ್ಲದ ಬೇಕಾಗುವುದು. ಫಲವೃಕ್ಷಗಳನ್ನೂ, ಧಾನ್ಯಗಳನ್ನೂ ಬಿತ್ತತಕ್ಕ ವರು ಒಳ್ಳೆ 'ಬಿಡಿ ಗಳನ್ನು ನೋಡಿ ಹಾಕುವರು, ಅವುಗಳಿ೦ದ ಒಳ್ಳೆ ವೃಕ್ಷಗಳೂ, ಒಳ್ಳೆ ಫಲಗಳೂ, ಒಳ್ಳೇ ಪೈರೂ, ಅಗುವವು, ವ್ಯವಸಾಯ, ಗೊಬ್ಬರ, ಮಳೆ ಮೊದಲಾದವು ಗಳು ಒದಗಿದರೆ, ಸೊಸಿಯೂ, ವೃಕ್ಷಗಳೂ, ಫಲಗಳೂ ನಿರಿಕ್ಷಿಸಲ್ಪಡುವುವು. ಕೆಟ್ಟು ಹೋದ ಬೀಜಗಳನ್ನು ಹಾಕಿದರೆ, ಎಷ್ಟು ಸಾಗುವಳಿ ಮಾಡಲ್ಪಟ್ಟಾಗ್ಯೂ, ಎಂಥಾ ಗೊಬ್ಬರಗಳು ಹಾಕಲ್ಪಟ್ಟಾಗ್ಯೂ, ಬಿಸಿಲು, ಮಳೆ, ಗಾಳಿಗಳು ಎಷ್ಟು ಆನು ಕೂಲವಾಗಿದ್ದಾಗ್ಯೂ ಪೈರು ಆಗುವುದೇ ? ವೃಕ್ಷವು ಬೆಳೆಯುವುದೆ ? ಫಲವಾದು ವುದೇ ? ವಿಚಾರ ಮಾಡಿದರೆ, ಆತ್ಮರವಾಗಿ ತೋರತಕ್ಕೆ ಜಗದೀಶ್ವರನ .ಬೀಚೆಗೆ ಭಲ್ಲಿ ಯಾವುದೂ ಆತ್ಮರವಾಗಿರುವುದಿಲ್ಲ, ಕರ್ಮಗಳಿಗನುಸಾರವಾಗಿ ಜ್ಞಾ ನಡೆಯುವುವೆಂದು ಗೊತ್ತಾಗುತ್ತದೆ. .ಆದಾಗ್ಯೂ, ಪಾಮರರಾದವರಿಗೆ ಎಲ್ಲಾ