ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

48 ಆತ್ಮತೃಗಳಾಗಿಯೇ ತೋರುವುವು, ಈ ವಿಷಯಗಳನ್ನೆಲ್ಲಾ ಪರಾಲೋಚಿಸದೆ, ನೀನು ಪ್ರವರ್ತಿಸಿದುದು ತಪ್ಪು, ಯುಕ್ತಾಯುಕ್ತ ವಿಹೀನರಾದ ಸಾಮಾನ್ಯ ಜನ ಗಳ ಮಕ್ಕಳು ಸುಖ ಬಂದಾಗ ಸಂತೋಷದಿಂದಿಗುವರು. ಕಷ್ಟ ಬಂದಾಗ ಯುಕ್ತಾಯುಕ್ತ ಜ್ಞಾನವನ್ನು ಕಳೆದುಕೊಂಡು, ಉನ್ಮತ್ತರಾಗಿ ಸಾಯುವುದೂ ಕೂಡ ಉಂಟು, ದುಷ್ಟನಿಗ್ರಹ ಶಿಷ್ಟ ಪರಿಪಾಲನೆಗೋಸ್ಕರ ಜನ್ಮವನ್ನೆತ್ತಿ, ಅಧ ರ್ಮಿಷ್ಟರಾದ ಪ್ರೊಜನರನ್ನು ನಿಗ್ರಹಿಸಿ, ಲೋಕೈಕವೀರನೆಂಬದಾಗಿಯೂ, ವಿವೇಕನಿಧಿಯೆಂಬದಾಗಿಯೂ ಪ್ರಸಿದ್ದ ನಾದ ಯೂಲಿಸೆಸ್ಸನ ಮಗನಾಗಿ, ಈ ಆತ್ಮಹತ್ಯೋದ್ಯೋಗದಲ್ಲಿ ನಿನಗೆ ಬುದ್ಧಿಯು ಬಂದದ್ದನ್ನು ನೋಡಿದರೆ ನನಗೆ ಆಶ್ಚ ಧ್ಯವಾಗುತ್ತದೆ. ಈ ಉದ್ಯೋಗದಿಂದ ನೀನು ಜಗದೀಶ್ವರನಲ್ಲಿ ತುಂಬಾ ಅವಮಾ ನವನ್ನು ಪಡೆದಿರುವೆ, ಅವನು ಧರ್ಮಿಷ್ಠ ರನ್ನು ರಕ್ಷಿಸುವುದರಲ್ಲಿ ಪರಾಲ್ಮುಖ ನೆಂದು ನೀನು ತಿಳಿದುಕೊಂಡದ್ದು ಶುದ್ಧ ತಪ್ಪು, ದೇವರಿಗೆ ನಿಮ್ಮ ತಂದೆಯಲ್ಲಿ ಎಷ್ಟು ಪ್ರೀತಿಯಿರುವುದೋ, ನಿನ್ನಲ್ಲಿ ಅಷ್ಟು ಪ್ರೀತಿಯಿರುವುದು, ಚಿನ್ನವು ಶುದ್ಧವಾಗಿರುವುದೋ ಇಲ್ಲವೋ ಎಂದು ಪರೀಕ್ಷಿಸಬೇಕಾದರೆ, ಅದನ್ನು ಕರಗಿಸು ವರು, ಕಲ್ಮಷಗಳೇನಾದರೂ ಇದ್ದರೆ, ಹಾಗೆ ಕರಗಿಸುವುದರಿಂದ, ಅದು ವಿಸ ರ್ಬಿಸಲ್ಪಡಬಹುದು, ನಿಮ್ಮ ತಂದೆಯ ಪದವಿಗೆ ನಿನ್ನನ್ನು ಅರ್ಹನನ್ನಾಗಿ ಮಾಡು ವುದಕ್ಕೋಸ್ಕರ ಈ ಕಷ್ಟ ದೆಸೆಗೆ ಸೀನು ತರಲ್ಪಟ್ಟಿರುವೆ. ಧೈರವನ್ನು ತಂದುಕೊ, ಯೂಲಿಸೆಸ್ಸನ ಮಗನೆಂಬುದಕ್ಕೆ ಅರ್ಹನಾಗು, ಕುರುಬನಾಗಿರುವುದು ಹೀನ ತೃತಿಯೆಂದು ನೀನು ಭಾವಿಸಿರುವುದು ತಪ್ಪ, ಕುರುಬರು ಮನುಷ್ಟರಲ್ಲವೇ ? ಮನೋವಾಕ್ಕರ್ಮಗಳಲ್ಲಿ ಪರಿಶುದ್ಧನಾಗಿದ್ದು ಕೊಂಡು ಇರತಕ್ಕವನು ಕುರುಬನಾ ದರೇನು ? ಝಾಡಮಾಲಿಯಾದರೇನು ? ಚಕ್ರವರ್ತಿಯಾದರೆನು ? ಮನೋ ನಾಕ್ಕರ್ಮಗಳಲ್ಲಿ ಅಪರಿಶುದ್ಧನಾಗಿದ್ದು ಕೊಂಡು, ಚಕ್ರವರ್ತಿ ಪದವಿಯಲ್ಲಿ ಇದ್ದಾ ಗ್ಯೂ, ಅವನಿಗಿಂತಲೂ ಗುಜುಮಾರ್ಗಾವಲಂಬಿಯದ ಕುರುಬನೂ, ಝಾಡಮಾ ಲಿಯೂ ಮೇಲಲ್ಲವೇ ? ಜನಗಳ ಯೋಗ್ಯತೆಯನ್ನು ಅವರ ಪಾಪಪುಣ್ಯಗಳಿಂದ ಅಳೆಯಬೇಕೇ ಹೊರತು, ಅವರ ಸಂಪತ್ತುಗಳಿಂದ ಅಳೆಯುವುದಕ್ಕೆ ಆಗುತ್ತೆ ದೆಯೇ ? ಅಜ್ಞಾನಿಗಳಾದವರು ಒಂದು ವೇಳೆ ಹೀಗೆ ಅಳೆದಾಗ್ಯೂ, ಯಮಧ ರ್ಮರಾಯನು ಎಂದಿಗೂ ಹಾಗೆ ಅಳೆಯುವುದಿಲ್ಲ, ಪುಣ್ಯವಂತರಿಗೆ 'ಬರತಕ್ಕೆ ಫಲವನ್ನು ಜಗದೀಶ್ವರನು ಪಾಪಿಷ್ಠರಿಗೆ ಎಂದಿಗೂ ಲಭ್ಯವಾಗುವಂತೆ ಮಾಡುವು ದಿಲ್ಲ, ಸಕಲರೂ ಅವರವರ ಕರ್ಮಕ್ಕನುಸಾರವಾದ ಶುಭಾಶುಭ ಫಲಗಳನ್ನು ಆನುಭವಿಸಿಯೇ ಅನುಭವಿಸುವರು. ಇದನ್ನು ತಿಳಿದುಕೊಳ್ಳದೆ, ವಾಮರನಂತೆ ತಡೆಯಲೇಟ ಯಾವ ಕಾಲದಲ್ಲಿ ಉಳವ ಸ್ಥಿತಿಯು ಬರುವುದೊ ಅದನ್ನು ಆಗ