ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

46 ರೂಪದಲ್ಲಿಯ ಅವತರಿಸಿ, ಹೇಗೆ ಲೋಕವನ್ನು ಉದ್ಧರಿಸಿರುವರೋ ಅದನ್ನೂ ತಿಳಿಸಿದನು. ಅ ಪಾಲೋ ಎಂಬ ದೆ೦ವರು ಕುರುಬನ ಅವತಾರವನ್ನು ಧರಿಸಿ, ಕುರಿಗಳನ್ನು ಹಿಸುವುದಕ್ಕೆ ಬಂಗಾಗ, ಕುರುಬರು ಮಾತ್ರವೆ: ಅಲ್ಲದೆ, ತಿರ ಗ್ಟಂತುಗಳೆಲ್ಲಾ ಈತನ ಸೇವೆಯನ್ನು ಮಾಡುವುದರಲ್ಲಿ ಹೇಗೆ ಬದ್ಧಾ ದರಗಳಾದ ವೋ, ಯಾಂತಿ ನ್ಯಾಯಪ್ರರ್ತ ಓರ್ಯಚೋಪಿ ಸಹಾಯತಾಂ ಎಂಬ ಶ್ರೀ ರಾಮರ ವಿಷಯವಾಗಿ ಹೆ೦೭ ಲ್ಪಟ್ಟ ವಾಕ್ಕು, ಈ ಕುರುಬನ ಸಂಬಂಧದಲ್ಲಿ ಹೇಗೆ ಅನ್ವರ್ಥವಾಯಿತೋ, ಕುರುಬರೂ, ಕುರುಬಗಿತ್ತಿಯರೂ ಈತನ ಸೇವೆಯಲ್ಲಿ ನಿರತರಾಗಿ, ಅರಣ ಕೂಡ ಹೆ'ಗೆ ಚಕ್ರಾಧಿಪತ್ಯವಾಗಿ ಪರಿಣಮಿಸಿತೋ, ಅರಣ್ಯ ಲಕ್ಷ್ಮಿಯು ಈತನ ಸೇವೆಯಲ್ಲಿ ಹೇಗೆ ಅಕೃತ್ರಿಮವಾದ ಪ್ರೀತಿಯುಳ್ಳವಳಾದಳೋ, ಅರಣ್ಯ ನಿವಾಸಿಗಳೆಲ್ಲಾ ನಿಸರ್ಗವಾದ ಭಕ್ತಿಯುಳ್ಳ ಪ್ರಜೆಗಳಾಗಿ ಹೇಗೆ ಪರಿಣ ಮಿಸಿದರೆ ಇವುಗಳನ್ನೆಲ್ಲಾ ನನಗೆ ಹೇಳಿ, ಮನುಷ್ಯನಿಗೆ ಸೌಜನ್ಯವೂ, ಭೂತದ ಯೆಯೂ, ಪರೋಪಕಾರ ಬುದ್ದಿಯೂ, ಆತ್ಮಯಜ್ಞವೂ, ಯಶಸ್ಸಿಗೆ ಕಾರಣವೆಂಬ ದಾಗಿಯೂ, ಈ ಗುಣಾತಿಶಯಗಳಿಲ್ಲದವರು ಚಕ್ರವರ್ತಿಗಳಾಗಿದ್ದಾಗ್ಯೂ, ಪ್ರಜೆಗಳ ಅಕೃತ್ರಿಮವಾದ ಪ್ರೀತಿಗೆ ಪಾತ್ರರಾಗುವುದಿಲ್ಲವೆಂಬದಾಗಿಯೂ, ಪ್ರಜೆಗಳ ಪ್ರೀತಿಗೆ ಪಾತ್ರರಾಗದೆ, ಭಯದಿಂಗ, ದರ್ಪ೦ದಲೂ ರಾಜ್ಯಭಾರ ಮಾಡಿ, ಕಾಲ ದೇಶವರ್ತಮಾನಗಳಲ್ಲಿ ವೈಷಮ್ಯಗಳು ಬಂದಾಗ, ತಮ್ಮ ಪದವಿಯನ್ನು ಕಳೆ ದುಕೊಂಡು, ಬಹಳ » 'ನಸ್ತಿತಿಗೆ ಬರುವರೆಂಬದಾಗಿಯೂ, ಅನೇಕ ಸಂದರ್ಭಗ ಳಲ್ಲಿ ಇವರು ನಾಮಾವಶೇಷರಾಗುವುದೂ ಉಂಟೆಂಬದಾಗಿಯೂ ಹೇಳಿದನು. ನಾನು ಒಂದಾನೊಂದು ದಿನ ಕುರುಬರಿಂದಲೂ, ಕುರಿಗಳಿಂದಲೂ ಸುತ್ತು ವರಿಯಲ್ಪಟ್ಟು, ಕುರಿಗಳನ್ನು ಕಾಯುತ್ತಿದ್ದಾಗ, ಒಂದು ಸಿಕ್ಕ ವು ಕುರಿಯ ಮಂದೆಗೆ ನುಗ್ಗಿ, ಅವುಗಳಲ್ಲಿ ಕೆಲವನ್ನು ಕೊಂದು, ರಕ್ತಪಾನ ಮಾಡಿ, ಪ್ರಯತ್ನ ಮಾಡಿತು. ನಾನು ನಿರಾಯುಧನಾಗಿದ್ದಾಗ್ಯೂ, ಕುರಿಗಳನ್ನು ರಕ್ಷಿಸು ವುದಕ್ಕೆ ಆ ಸಿಂಹದ ಕಡೆಗೆ ನುಗ್ಗಿ ದೆನು, ನನ್ನನ್ನು ನೋಡಿದ ಕೂಡಲೆ, ಅದು ಹಲ್ಲುಗಳನ್ನು ಕಡಿಯುತ್ತಾ, ಮುಂಗಾಲುಗಳನ್ನು ಎತ್ತಿ, ನನ್ನ ಮೇಲೆ ಬೀಳುವುದಕ್ಕೆ ಸನ್ನಾಹ ಮಾಡಿತು, ಇದರ ಕಣ್ಣುಗಳು ಬೆಳಗುವ ಬೆಂಕಿಯಂತಿದ್ದವು. ನನ್ನ ಮೇಲೆ ಬಿಳಬೇಕೆಂದು ಅದು ಸನ್ನಾಹ ಮಾಡಿಕೊಳ್ಳುವುದಕ್ಕೆ ಮುಂಚೆಯೇ, ನಾನು ಅದರ ಮೇಲೆ ಬಿದ್ದು, ಕೆಳಕ್ಕೆ ಕೆಡವಿ, ಮುಷ್ಟಿಯಿಂದ ಅದನ್ನು ಹೊಡೆ ದೆನು, ಅದು ಚೇತರಿಸಿಕೊಂಡು, ನನ್ನ ಮೇಲೆ ಬಿದ್ದಿತು. ನಾನು ಪುನಃಪುನಃ ಅದನ್ನು ಕೆಡವಿ ಕೊನೆಗೆ ಅದರ ಕತ್ತನ್ನು ಕಿವುಚಿ, ಅದನ್ನು ಕೊಂದುಹಾಕಿದೆನು. ಈ ವರ್ತಮಾನವು ಮೊದಲು ಕುರುಬರಲ್ಲಿ ಪ್ರಚಾರಕ್ಕೆ ಬಂದಿತು, ತರುವಾಯ