ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರನ್ನು ಮೂಲೋತ್ಪಾಟನ ಮಾಡುವುದು ಯಾರಿಗೆ ತಾನೇ ಸಾಧ್ಯವಾಗಿತ್ತು? ದುಷ್ಟನಿಗ್ರಹವನ್ನು ಮಾಡಬೇಕೆಂದು ಸಂಕಲ್ಪ ಮಾಡಿ, ಅವರ ದೌರಾತ್ಮವೇ ಅವ ರಿಗೆ ಕಾಲಕೂಟ ವಿಷವಾಗುವಂತೆ ಮಾಡಿದ ಮಹಾತ್ಮನ ಮಗನಿಗೆ ಈ ಗುಣಾತಿಶ ಯಗಳು ಇರುವುದೇನಾಶ್ಚರ ! ನನ್ನ ಅದೃಷ್ಟ ಪರಿಪಾಕ: ೦ನನ ಸ: T.ಯನ್ನು ಮಾಡುವ ಸಂಭವವು ನನಗೂ ಲಭ್ಯವಾಯಿತು' ಎಂದು ಮನಸ್ಸಿನಲ್ಲಿ ಎಂದು ಕೊಂಡು, ಆ ಕುರುಬನನ್ನು ಕುರಿತು ಸಸಾಟಿಸ್ಸನು ಹೇಳಿದ್ದೇನೆಂದರೆ :- ಎಲೈ ಕುರುಬರೇ,--ನಿಮ್ಮ ಪುಣ್ಯವಿಶೇಷದಿಂದ ಇದುವರೆಗೂ ಈತನ ಸಹವಾಸವು ನಿಮಗೆ ದೊರೆಯಿತು, ಅವನ ಸಹವಾಸದಿಂದ ಎಷ್ಟು ಮಟ್ಟಿಗೆ ಫಲ ವಾಗಬಹುದೋ ಅಷ್ಟಾಯಿತು. ನನಗಿಂತಲೂ ನೀವು ಪುಣ್ಯಶಾಲಿಗಳು, ನಿಮಗೆ ಉಂಟಾದಷ್ಟು ಇವನ ಸಹವಾಸ ಲಾಭವು ನನಗೆ ಉಂಟಾಗುವುದಿಲ್ಲ. ಈತನು ಕುರುಬನಲ್ಲ. ಶಕ್ತಿಯಲ್ಲಿ ಭೀಮನಿಗೂ, ಬುದ್ದಿಯಲ್ಲಿ ಬೃಹಸ್ಪತಿಗೂ, ಗುಣಾತಿಶ ಯಗಳಲ್ಲಿ ದೇವರಿಗೂ ಸಮಾನನಾದ ಯೂಸೆಸ್ಸೆಂಬ ಮಹಾತ್ಮನ ಚರಿತ್ರೆಯನ್ನು ನೀವು ಕೇಳಿರಬಹುದು. ಪ್ರಾಯಕ್ಕೆ ದೇಶದ ಪ್ರಭುಗಳು ತಮಗೆ ಸಮಾನರಿಲ್ಲ ವೆಂದು ತಿಳಿದುಕೊಂಡು, ಅಧಿಕಾರ ಮದದಿಂದಲೂ, ಐಶ್ವಸ್ಯ ಮದದಿಂದಲೂ ಯುಕ್ತಾಯುಕ್ತ ವಿಹೀನತೆಯನ್ನು ಹೊಂದಿ, ವಿಷಯಾಸಕ್ತರಾಗಿ, ಗ್ರೀಸ್ ದೇಶದ ಪ್ರಭುವಾದ ಮಿನಲಯಾಸ ಎಂಬುವನ , ರ್ಮಪತ್ನಿಯಾದ ಹೆರ್ಲ ಎಂಬುವ ಇನ್ನು ಈ ದೇಶದ ರಾಜಪುತ್ರನೊಬ್ಬನು ಹೇಗೆ ಅಪಹರಿಸಿಕೊಂಡು ಹೋದನೋ, ಅವನ ದೌರಾತ್ಮಕ್ಕೆ ಶಿಕ್ಷೆಯನ್ನು ಮಾಡುವುದಕ್ಕೋಸ್ಕರ ಗ್ರೀಸ್ ದೇಶದ ಪ್ರಭುಗಳೆಲ್ಲರೂ ಒಗ್ಗಟ್ಟಾಗಿ, ಟ್ರಾಯ ದೇಶಕ್ಕೆ ಹೇಗೆ ಮುತ್ತಿಗೆ ಹಾಕಿದರೋ, ಇವರಿಗೆ ಯುದ್ಧವು ಅನೇಕ ವರ್ಷಗಳ ವರಗೂ ಹೇಗೆ ನಡೆಯಿತೋ, ಸರಿ ಣಾಮದಲ್ಲ ಯಲಸೆಸ್ಸನ ರಾಜಮಂತ್ರ ಪ್ರವೀಣತೆಯಿಂದಲೂ, ಯುದ್ದ ವಿದ್ಯಾ ವಿಶಾರದತ್ವದಿಂದಲೂ ದುರಾರ್ಗಪ್ರವರ್ತಕನಾದ ಪ್ಯಾರಿಸ್ ಎಂಬುವನು ತನ್ನ ಪತ್ರಮಿತ್ರಕಳತ್ರಾದಿಗಳೊಡನೆಯೂ, ತನ್ನ ಬಾಂಧವರೊಡನೆಯೂ ಹೇಗೆ ಮೂ ಲೋತ್ಸಟನ ಮಾಡಲ್ಪಟ್ಟನೋ, ಅದನ್ನೆಲ್ಲಾ ನೀವು ಕೇಳಿರಬಹುದು, ಇಂಥಾ ಲೋಕೈಕವೀರನಾದ ಲಿಸೆಸ್ ಎಂಬುವನೇ ಈತನ ತಂದೆ, ಇವನು ಇಥಾಕಾ ಸಂಸ್ಥಾನದ ಪ್ರಭು, ಅವನು ದೇಶಾಟನವನ್ನು ಮಾಡುವುದಕ್ಕೆ ಹೊರ ಟಿರುವನು, ಅವನನ್ನು ಹುಡುಕಿಕೊಂಡು, ಈತನು ನಮ್ಮ ದೇಶಕ್ಕೆ ಬಂದಿರು ವನು, ದುರಾತ್ಮನಾದ ಮೆಟೋಫಿಸ್ಸನು ಇವನು ವಿನೀಷಿರ್ಯ ಎಂದು ನನಗೆ ನಂಬಿಕೆಯನ್ನುಂಟುಮಾಡಿದನು, ಅದನ್ನು ನಾನು ನಂಬಿದೆನು; ಇವಸು