ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

52 ಮುಟ್ಟುಗೋಲು ಹಾಕುವಂತೆ ಆಜ್ಞೆ ಮಾಡಿರುವೆನು.” ಈ ಮಾತನ್ನು ಕೇಳಿದ ಕೂಡಲೆ, ಟೆಲಿಮಾಕಸ್ಸನು ಹೇಳಿದ್ದೇನೆಂದರೆ:- “ ಎಲೈ ಮಹು ಪ್ರಭುವೇ, ನನ್ನಲ್ಲಿ ನಿನಗೆ ನಿಜವಾದ ಪ್ರೀತಿಯ ಇದ್ದರೆ, ಈ ಶಿಕ್ಷೆಯನ್ನು ವಾಪಸು ತೆಗೆದುಕೊ, ಮೆಟೊಸ್ಸನು ಬಂದಿಖಾನೆಯಿಂದ ಖುಲಾಸೆ ಮಾಡಲ್ಪಡಲಿ, ಅವನ ಆಸ್ತಿಯೆಲ್ಲಾ ಅವನಿಗೆ ವಾಪಸು ಕೊಡಲ್ಪ ಡಲಿ, ನಡೆಯತಕ್ಕವರು ಎಡವುವುದುಂಟು. ನನ್ನಲ್ಲಿ ಆತನಿಗೆ ದ್ವೇಷವುಂಟಾ ಗುವುದಕ್ಕೆ ಕಾರಣವಿಲ್ಲ. ಅಜ್ಞಾನದಿಂದ ಅವನು ಹೀಗೆ ಮಾಡಿರಬಹುದು, ಕ್ಷಮೆಯು ದೇವರ ಗುಣ, ನೀನು ಮಹಾತ್ಮನು. ಭತ್ಯರಲ್ಲಿ ತಪ್ಪ ಉಂಟಾ ದರೆ, ಮುಂದೆ ಅವರು ಅಂಥಾ ತಪ್ಪು ಮಾಡದಂತೆ ಹಿತೋಪದೇಶವನ್ನು ಮಾಡಿ, ಅವರು ಧರ್ಮಿಷ್ಟರಾಗುವುದಕ್ಕೆ ಅವಕಾಶವನ್ನು ಕೊಡಬೇಕು ನನ್ನಲ್ಲಿ ಕೃಪೆ ಯನ್ನು ಇಟ್ಟು ಈ ವಿಧವಾದ ಅವಕಾಶವನ್ನು ಕೊಡು.” ಈ ರೀತಿಯಲ್ಲಿ ಟೆಲಿಮಾಕಸ್ಸನು ಹೇಳಲು, ಸಸಾಟಿ ಸೃನಿಗೆ ಪರಮಾಶ್ಚರ ವಾಯಿತು, ಅಪಕಾರ ಮಾಡಿದವರಿಗೆ ಉಪಕಾರ ಮಾಡಬೇಕೆಂದು ಧರ್ಮಶಾ ಸ್ಟ್ಯಗಳು ಹೇಳುವುವು. ಇದು ಯಾರ ಅನುಷ್ಠಾನದಲ್ಲಿಯೂ ಇರುವುದಿಲ್ಲ. ಈ ಕಲಿಯುಗದಲ್ಲಿ ಉಪಕಾರ ಮಾಡಿದವರಿಗೂ ಅಪಾರ ಮಾಡತಕ್ಕ ವ್ಯಕ್ತಿಗಳು ಇರುತ್ತವೆ. ಇವನು ಅಪಕಾರ ಮಾಡಿದಾಗ್ಯೂ, ಅವನಿಗೆ ಉಪಕಾರವನ್ನು ಮುಡಬೇಕೆಂಬ ಇವನ ಅಭಿನಿವೇಶವನ್ನು ನೋಡಿದರೆ, ಯಲಿಸೆಸ್ಸನ ಮಹಾ ತ್ಯಕ್ಕಿಂತಲೂ ಇವನ ಮಹಾತ್ಮ ವು ಹೆಚ್ಚಾದದ್ದೆಂದು ತೋರುತ್ತದೆ. ಜಗದೀ ರನು ದುಷ್ಟನಿಗ್ರಹ ಶಿಷ್ಟ ಪರಿಪಾಲನೆಗೊಸ್ಕರ ಇಂಥಾ ಮಹಾ ವ್ಯಕ್ತಿಗಳನ್ನು ನಿರ್ಮಾಣ ಮಾಡುವುದುಂಟು. ಇವನ ದರ್ಶನದಿಂದ ಧನ್ಯನಾಗುವ ಸಂಭವವು ನನಗೆ ಲಭ್ಯವಾಗಿರುವುದಕ್ಕೋಸ್ಕರ ನಾನು ಎಷ್ಟು ಸಂತೋಷಪಟ್ಟರೂ ಕಡಮೆ ಯಾಗಿರುವುದು ಎಂದು ಮನಸ್ಸಿನಲ್ಲಿ ಎಂದುಕೊಂಡು ತಕ್ಷಣದಲ್ಲಿಯೇ ಬಂದೀ 'ಖಾನೆಯಿಂದ ಮೆಟೋಫಿಸ್ಸನನ್ನು ಕರೆಸಿದನು, ಅವನು ಬಂದೀಖಾನೆಯ ದಂಡನೆ ಗಿಂತ ಅತ್ಯಂತ ಕ್ರೂರವಾದ ದಂಡನೆಯು ಯಾವುದೊ ಮಾಡಲ್ಪಡುವು ಬೆಂಬದಾಗಿಯೂ, ಇದಕ್ಕೆ ಟೆಲಿಮಾಕಸ್ಥನೆ ಕಾರಣಭೂತನಾಗಿರಬೇಕೆಂಬದಾ ಗಿಯೂ ನಿರೀಕ್ಷಿಸಿಕೊಂಡು ಬಂದನು, ಅವನನ್ನು ಕುರಿತು ಸಸಾಟಿಸ್ಟನು ಹೇಳಿದ್ದೇನೆಂದರೆ :- “ ಎಲೈ ಮೆಟೋಫಿಸ್ಸನೇ-ಈ ಟೆಲಿಮಾಕಸ್ಸನನ್ನು ನೋಡು, ಇವನು ಫನೀಷಿರ್ಯ ಅಲ್ಲ, ಯಲಿಸೆಸ್ಸನ ಪುತ್ರನು, ಇವನ ಜೊತೆಯಲ್ಲಿ ವಿಕ್ರಯಿಸ ಇಟ್ಟ ಮೆಂಟರನು ಮಹಾ ಪುರುಷನಾಗಿರಬೇಕು. ಸತ್ಪುರುಷರ ಸಹವಾಸದಲ್ಲಿ