ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

57. ಮಹಾತ್ಮನ ಸೇವೆಯು ನನಗೆ ಲಭ್ಯವಾಯಿತು. ಇವನ ಅಸಾಧಾರಣವಾದ ದಯೆಯಿಂದ ನನ್ನ ಅಪರಾಧಗಳನ್ನು ಕ್ಷಮಿಸುವ ಸಂಕಲ್ಪವು ನಿನಗೂ ಉಂಟಾ ಯಿತು, ಇದಕ್ಕಾಗಿ ನಾನು ಟೆಲಿಮಾಕಸ್ಸನಿಗೆ ಎಷ್ಟು ಕೃತಜ್ಞನಾಗಿದ್ದಾಗ್ಯೂ, ಅದು ಅಲ್ಪವಾಗಿಯೇ ಇರುವುದು, ಇವನ ಮಹಿಮೆಯೇ ಹೀಗಿರುವಾಗ್ಯ, ಹಿರಿ ಯನಾಗಿಯೂ, ಇವನಿಗೆ ಗುರುವಾಗಿಯೂ ಇರುವ ಮೆಂಟರನ ಮಹಿಮಯು ಹೇಗಿರುವುದೋ ಅದನ್ನು ಊಹಿಸಬಹುದೇ ಹೊರತು, ಹೇಳುವುದಕ್ಕಾಗು ವುದಿಲ್ಲ, ಅವನು ಬುದ್ದಿಯಲ್ಲಿ ಬೃಹಸ್ಪತಿಯನ್ನೂ ಕೂಡ ಮಿಾರಿಸಿರಬಹುದೆಂದು ತೋರುತ್ತದೆ. ಅವನನ್ನು ಈಗಲೇ ಕರೆಸುವೆನು. ಅವನ ಹಿತೋಪದೇಶ ಸುಖ ವನ್ನು ನಿನ್ನ ಜೊತೆಯಲ್ಲಿ ನಾನೂ ಅನುಭವಿಸುವೆನು. ಇವರಿಬ್ಬರಿಗೂ ಬೇಕಾದ ಸಹಾಯಗಳನ್ನು ಮಾಡಿ, ಅವರ ದೇಶಕ್ಕೆ ಅವರು ತಲಪುವಂತೆ, ಟೆಲಿಮಾಕ ಸೃನು ಮಾತಾಪಿತೃಗಳ ಸಾನ್ನಿಧ್ಯವನ್ನು ಹೊಂದುವ ಸುಖವನ್ನು ಪಡೆಯುವಂತೆ ಯ, ಅವರ ಶತ್ರುಗಳೆಲ್ಲಾ ಮೂಲೋತ್ಪಾಟನ ಮಾಡಲ್ಪಡುವಂತೆಯೂ ಮಾ ಡೋಣ, ಈ ಕೆಲಸಗಳನ್ನೆಲ್ಲಾ ನಿರ್ವಹಿಸುವುದಕ್ಕೆ ಆಣ್ಣೆಯಾದರೆ, ನಾನೇ ಹೋಗಿ ಬರುವೆನು, ಈ ಟೆಲಮಾಕಸ್ಸನು ನನಗೆ ಮಾಡಿರುವ ಉಪಕಾರಕ್ಕೆ ಯಥಾಶಕ್ತಿ ಪ್ರತ್ಯುಪಕಾರವನ್ನು ಮಾಡುವುದಕ್ಕೆ ಅವಕಾಶವನ್ನು ಕೊಟ್ಟರೆ, ನಾನು ಬಹಳ ಕೃತಜ್ಞನಾಗಿರುತ್ತೇನೆ.” ಈ ರೀತಿಯಲ್ಲಿ ಮೆಟ್ರೋ ನಿಸ್ಸನು ಹೇಳಿದ್ದನ್ನು ಕೇಳಿ, ನಸಾಟ್ರಿಸ್ಟನು ಬಹಳ ಸಂತುಷ್ಟನಾದನು. ಮಿಂಟರನನ್ನು ಕರೆಸುವುದಕ್ಕೆ ದೂತರು ಕಳುಹಿಸಲ್ಪಟ್ಟರು. ಸಸಾಟಿಸ್ಸನು ಪುತ್ರನಿರ್ವಿಶೇಷವಾಗಿ ನನ್ನನ್ನು ಕಾಣುತ್ತಾ, ಬಹಳ ಸುಖದಿಂದ ಇದ್ದನು. ಎರಡು ಮೂರು ದಿವಸಗಳಲ್ಲಯೇ ನನಗೆ ಪಿತೃ ನಿರ್ವಿಶೇಷನಾದ ಮೆಂಟರು ಒಂದನು, ಸಸಾಟ್ರನೂ, ಮಟೋಫಿಸ್ಟನೂ, ನಾನೂ ಅವನನ್ನು ಎದುರುಗೊಂಡು, ಅರಮನೆಗೆ ಕರೆದುಕೊಂಡು ಬಂದು, ಅತ್ಯಂತ ಸಂಭ್ರಮ ದಿಂದ ಆದರಿಸಿದೆವು, ಕಶಲಪ್ರಶ್ನೆಗಳು ನಡೆದ ತರುವಾಯ, ಸಸಾಟಿಸನು. ವಾಸ್ತವಾಂಶವು ಗೊತ್ತಾಗುವುದಕ್ಕೆ ಸಂಭವಿಸಿದ ವಿದ್ಯಮಾನಗಳನ್ನೂ, ತಾನು ಮಬೋಘಸ್ಸಿಗೆ ಮಾಡಿದ್ದ ಶಿಕ್ಷೆಯ ವಿಷಯವನ್ನೂ, ಟಿಲಮಾಕಸ್ಸನ ಉಪದೇಶ ದಿಂದ ಅವನ ಅಪರಾಧವನ್ನು ಕ್ಷಮಿಸಿ, ಅವನು ಪೂರ್ವದಲ್ಲಿದ್ದ ಅಧಿಕಾರದಲ್ಲೇ ಇಟ್ಟಿದ್ದನ್ನೂ, ಆತನು ತಾನು ಮಾಡಿದ ಅಪರಾಧಿಗಳಿಗೋಸ್ಕರ ಸಂತಾಪ ಪಡು ತಳಿರುವುದನ್ನೂ ತಿಳಿಸಿದನು, ನಾನೂ ಕೂಡ ಸಸಾಟ್ರಿಸ್ಟನು ಹೇಳಿದ್ದನ್ನೆಲ್ಲಾ ಅನುದಿಸಿ, ಮನೋಘಸ್ಸನು ಬಹಳ ಗುಣಶಾಲಿಯೆಂದು ಹೇಳಿದನು