ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

58 ಮೆಟೋಫಿಸ್ಸನೂ ಕೂಡ ತನ್ನ ಅಪರಾಧಗಳನ್ನೆಲ್ಲಾ ನಿರೂಪಿಸಿ, ಕ್ಷಮಾಪಣೆ ಯನ್ನು ಬೇಡಿದನು, ಈ ಮಾತುಗಳನ್ನೆಲ್ಲಾ ಕೇಳಿ, ಮೆಟೋಫಿಸ್ಸನನ್ನು ಕುರಿತು ಮೆಂಟಕ ಮೆಂಟರು ಹೇಳಿದ್ದೇನೆಂದರೆ :- “ ಎಲೈ ಮೆಟೋಫಿಸ್ಸನೇ,-ಈ ಪ್ರಪಂಚವು ಜ್ಞಾನಾಜ್ಞಾನಮಯವಾಗಿ ರುವುದು, ನನಗೆ ತಿಳಿದ ವಿಷಯಗಳು ಏಕದೇಶವಾಗಿರುವುದು, ತಿಳಿಯದ ವಿಷಯಗಳು ಮಹಾಮೇರುವಿನಂತೆ ಇರುವುವು, ಅಜ್ಞಾನದಿಂದ ಅಪರಾಧಗಳು ನಡೆಯಬಹುದು, ಅಂಥಾ ಅಪರಾಧಗಳು ಅಪರಾಧಗಳಲ್ಲ. ಮನಃಪೂರ್ತಿಯಾಗಿ ಯಾವ ಅಪರಾಧಗಳು ನಡೆಯುವುವೋ ಅದಕ್ಕೆ ನಾವು ಉತ್ತರವಾದಿಗಳು, ಅಜ್ಞಾ ನದಿಂದ ನಾವು ಮಾಡತಕ್ಕ ಕೆಲಸಗಳಿಗೆ ದೇವರು ನಮ್ಮನ್ನು ಉತ್ತರವಾದಿಗಳ ಸ್ನಾಗಿ ಮಾಡುವುದಿಲ್ಲ, ಅವುಗಳಿಗೋಸ್ಕರ ನಮಗೆ ಶಿಕ್ಷೆಯು ಆಗುವುದಿಲ್ಲ, ಮನಃಪೂರ್ವಕವಾಗಿ ಮಾಡಿದ ಅಪರಾಧಗಳಿಗೆ ಉಪಕ್ರಮದಲ್ಲಿ ಶಿಕ್ಷೆಯು ತಪ್ಪಿ ದಾಗ್ಯೂ, ಪರಿಣಾಮದಲ್ಲಿ ಶಿಕ್ಷೆಯು ಎಂದಿಗೂ ತಪ್ಪುವುದಿಲ್ಲ, ಪ್ರಾಜ್ಞನಾದ ನಿನಗೆ ಹೇಳತಕ್ಕದ್ದು ಅಪ್ರಕೃತ. ನೀನು ಅಜ್ಞಾನದಿಂದ ನಿಷಿರ್ಯರೆಂದು ತಿಳಿದುಕೊಂಡು, ದಾಸತ್ವಕ್ಕೆ ನಮ್ಮನ್ನು ಗುರಿಮಾಡಿ ವಿಕ್ರಯಿಸಿದರೆ, ಆ ಅಪರಾ ಧವು ನಿನ್ನದಲ್ಲ, ನಾವು ನಿನೀಷಿರ್ಯರಲ್ಲವೆಂದು ನಿನಗೆ ನಂಬಿಕೆಯು ಉಂಟಾ ಗುವಂತೆ ಮಾಡದೆ ಇದ್ದು ದು ನಮ್ಮ ತಪ್ಪು, ಇದಕ್ಕಾಗಿ ನೀನು ವೃ ಸನಪಡ ಬೇಡ, ನಿನ್ನ ಸಂತಾಪವೆಲ್ಲಾ ನಿಜವಾಗಿದ್ದರೆ, ದೇವರು ನಿನಗೆ ಮಂಗಳವನ್ನು ಮಾಡುವನು. ಸಕಲ ಫಲಗಳೂ ಕರ್ಮಾಯತ್ನವಾಗಿರುವುವು. ನಿನಗೆ ನಿನ್ನ ಕರ್ಮಗಳಿಗನುರೂಪವಾದ ಫಲವು ಆಗಿಯೇ ಆಗುವುದು, ಈ ಫಲವು ಸನ್ನಂಗ ಭರೂಪವಾಗಿರಲೆಂದು ನಾನು ಕೋರುತ್ತೇನೆ.' ಈ ರೀತಿಯಲ್ಲಿ ಮೆಂಟರನು ಹೇಳಿ, ಮೆಟೊಫನ್ಸನ ಮುಖವನ್ನು ನೋಡಿ ದನು, ಮಹಾತ್ಮರಿಗೆ ಮನೋಭಾವವು ಮುಖವನ್ನು ನೋಡಿದ ಕೂಡಲೇ ಗೊತ್ತಾಗುವುದೇನಾಶ್ರವಲ್ಲ, ಅಪರಾಧಿಗಳನ್ನು ಗೊತ್ತುಮಾಡುವ ಡಿಟೆಕ್ಟಿವ್ ಶಾಸ್ತ್ರವು ಸುಳ್ಳಲ್ಲ. ಮನೋವಿಕಾರಗಳು, ಅಂಥಾ ವಿಕಾರಗಳಿಗೆ ಗುರಿಯಾದವನ ಕಣ್ಣು ಗಳಲ್ಲಿ ಕನ್ನಡಿಯಲ್ಲಿ ಹೇಗೋ ಹಾಗೆ ಕಾಣುವುವು. ಪ್ರಭುಗಳು ದುಷ್ಟನಿಗ್ರಹ ಶಿಷ್ಟ ಪರಿಪಾಲನವೇ ಕರ್ತವ್ಯವಾಗಿ ಉಳ್ಳವರು, ಪರಿಪಾಲಿಸಲ್ಪಟ್ಟವರು ಪ್ರೀತಿ ಸುವರು, ನಿಗ್ರಹಿಸಲ್ಪಟ್ಟವರಲ್ಲಿ ಅನೇಕರು ದ್ವೇಷಿಸುವರು, ಇದಕ್ಕೋಸ್ಕರವೇ ಪ್ರಧುತ್ವವು ಪುಪ್ಪದಿಂದ ಶೋಭಿತವಾದ ಹಂಸತೂಲಿಕಾತಲ್ಪಗಳಲ್ಲವೆಂದು ಪ್ರಾಜ್ಞ ಹೇಳುವರು, ಇದರಿಂದಲೇ ಪ್ರಭುಗಳಿಗೆ ಆತ್ಮರಕ್ಷಣೆಗೋಸ್ಕರ ಬಿಚ್ಚಕ ಕಜರಿ ಕೊಕದನಗಳು ಸರ್ 7ಢರುನನ, ಪ್ರಕರಿಕೆ ಭಕ್ಟ್