ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

59 ಸದಾ ಜಾಣರಾದ, ಡಿಟೆಕ್ಟಿವ್ ವಿದ್ಯಾವಿಶಾರದರಾದ ಜನಗಳು ಇಡಲ್ಪಟ್ಟಿರುವರು. ಮುಖವನ್ನು ನೋಡಿ, ಜನಗಳ ಮನೋಗತವನ್ನು ತಿಳಿದುಕೊಳ್ಳುವುದು ಕಷ್ಟ ವಾದ ವಿದ್ಯೆಯಲ್ಲ, ಹರ್ಷಸಂತಾಪಗಳನ್ನು ತೋರಿಸುವುದಕ್ಕೆ ಮುಖವು ಆದರ್ಶ ಪ್ರಾಯವಾಗಿರುವುದು, ಒಬ್ಬ ಪ್ರಭುವಿನ ಭೇಟಿಗೆ ಒಬ್ಬ ಮನುಷ್ಯನು ಜಾಜ್ಯ ಲ್ಯಮಾನವಾದ ಉಡಿಗೆ ತೊಡಿಗೆಗಳನ್ನು ಹಾಕಿಕೊಂಡು, ಪರಿವಾರ ಸಮೇತನಾಗಿ ಬಂದನು. ಭೇಟಿಗೆ ಬಂದಿದ ಸಾವಿರಾರು ಜನಗಳ ಮಧ್ಯದಲ್ಲಿ ಆತನು ಕೂಟ ದ್ದನು. ಆ ಪ್ರಭುವು ಭೇಟಿ ಕೊಡುವುದಕ್ಕೆ ಬರುವಾಗೈ, ಡಿಟೆಕ್ಟಿವ್ ಅಧಿಕಾರಿಯು ಭೇಟಿಗೆ ಬಂದಿರತಕ್ಕ ವರ ಮುಖಗಳನ್ನು ಇ೯ಸ್ಪೆರ್ಕ್ಟ (ಪರೀಕ್ಷೆ ಮಾಡಿಕೊಂಡು ಹೋದನು, ದರ್ಬಾರು ಹಾಲ್‌ನಿಂದ ಹೊರಕ್ಕೆ ಹೋಗಿ, ಆಯುಧಪಾಣಿಗಳಾದ ಪೊಲೀಸಿನವರನ್ನು ಕರೆದುಕೊಂಡು ಬಂದು, ಆ ಮನುಷ್ಯನನ್ನು ದಸ್ತಗಿರಿ ಮಾಡಿ ಸಿದನು, ಪ್ರಭುವು ಬಂದು ವಿಚಾರಣೆ ಮಾಡಿದನು. ಡಿಟೆಕ್ಟಿವ್ ಅಧಿಕಾರಿಯು ಇವನ ಜೇಬನ್ನು ಶೋಧಿಸಿ ಎಂದು ಹೇಳಿದನು, ಬಾರುಮಾಡಲ್ಪಟ್ಟ ರಿವಾಲ್ವರು ಒಂದು ಅವನ ಜೇಬಿನಲ್ಲಿ ಇದ್ದಿತು. ಇದಕ್ಕೆ ಕಾರಣವೇನೆಂದು ಪ್ರಭುವು ಕೇಳಲು, ( ಈ ಡಿಟೆಕ್ಟಿವ್ ಆಫೀಸರು ನಿನ್ನ ಭಾಗದ ದೇವರು. ಅವನು ನಿನ್ನನ್ನು ರಕ್ಷಿಸಿ ರುವನು. ಛೇಟಿಯ ಕಾಲದಲ್ಲಿ ನಿನ್ನನ್ನು ಕೊಲ್ಲಬೇಕೆಂಬ ಸಂಕಲ್ಪದಿಂದ ನಾನು ಬಂದೆನು, ನನ್ನ ಮಿತ್ರನಾದ ಪರಂತಪನಿಗೆ ಗಡೀಪಾರು ರೂಪವಾದ ಶಿಕ್ಷೆಯನ್ನು ನೀನು ಮಾಡಿರುವೆ. ಅದಕ್ಕಾಗಿ ನಿನ್ನನ್ನು ಸಂಹರಿಸುವುದಕ್ಕೆ ನಾನು ಬಂದೆನು, ನಿನಗೆ ಆಯಸ್ಸು ಇನ್ನೂ ಹೆಚ್ಚಾಗಿರುವುದು, ನನಗೆ ಆಯಸ್ಸು ಮುಗಿದಿರಬೇಕು, ಹಾಗಿಲ್ಲದಿದ್ದರೆ, ನಾನು ಮಾಡಿದ ಏರ್ಪಾಡುಗಳೆಲ್ಲಾ ಈ ಡಿಟೆಕ್ಟರ್ ಅಧಿಕಾರಿಗೆ ತಿಳಿಯುವುದಕ್ಕೆ ಎಂದಿಗೂ ಅವಕಾಶವಾಗುತ್ತಿರಲಿಲ್ಲ. ಈಗ ನಿನ್ನ ಮನಸ್ಸಿಗೆ ಬಂದ ಶಿಕ್ಷೆಯನ್ನು ಮಾಡು ” ಎಂದು ಹೇಳಿದನು, ಮೆಟೋಫಿಸ್ಸನ ಮುಖ ವನ್ನು ಮೆಂಟನು ನೋಡುತ್ತಿದ್ದಾಗ, ಈ ಕಥೆಯು ನನ್ನ ಸ್ಮೃತಿಪಥಕ್ಕೆ ಬಂದಿತು. ದರ್ಬಾರು ಬರಖಾಸ್ತಾದ ಕೂಡಲೆ, ನಾನು ಮೆಂಟರನ ಬಳಿಗೆ ಹೋಗಿ, ಮೆಟ್ರೋ ನಿಸ್ಸನ ಸ್ವಭಾವವು ಹೇಗಿರಬಹುದೆಂದು ಕೇಳಿದೆನು. ಅದಕ್ಕೆ. « ಮೆಟೋಫಿಸ್ಸನ ಮನೋಭಾವವು ಸರಿಯಾಗಿಲ್ಲ, ಅವನ ಮಾತುಗಳು ಅವ ನ ಮನೋಭಾವದಂತೆ ಇರುವುದಿಲ್ಲ. ಭೂಗರ್ಭದಲ್ಲಿ ಉಂಟಾಗುವ ಪ್ರಚ್ಛನ್ನವಾದ ಔಷ್ಟ್ರದಿಂದ ಲೋಹಾದಿಗಳೆಲ್ಲಾ ಕರಗಿ ಹೇಗೆ ಪರ್ವತಾಗ್ರಗಳಿಂದ 'ಉಮ್ಮುಖ ವಾಗುತ್ತವೋ ಹಾಗೆ ಇವನ ಮನೋಭಾವವು ಇರುವುದು, ಅನಿರ್ವಚನೀಯ ವಾದ ಹೇಷ್ಯವೇನೋ ಇರುವುದು, ನಮಗೂ, ಸಸಾಟ್ರ ಸ್ಥಗೂ ಏನೋ ವಿಪತ್ತು ಉಂಟಾಗಬಹುದು, ಬಂದದ್ದನ್ನೆಲ್ಲಾ ಅನುಭವಿಸಿಯೇ ತೀರಬೇಕು, ಇವನ