ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

60 ಕೋಪಾಗ್ನಿಯು ನಮಗೆ ಕೇಡನ್ನು ಮಾಡಬಹುದು, ಆದರೆ, ಅದರಿಂದ ಅವನಿಗೆ ಮಂಗಳವು ಆಗುವುದಿಲ್ಲ. ಬಂದ ವಿಪತ್ತುಗಳನ್ನು ಅನುಭವಿಸುವುದಕ್ಕೆ ನಾವು ಸಿದ್ದರಾಗಿಬೇಕು.” ಈ ರೀತಿಯಲ್ಲಿ ಮೆಂಟರನು ಹೇಳಿದನು. ಇದನ್ನು ಕೇಳಿ, ನನಗೆ ತುಂಬಾ ವಿವಾದವಾಯಿತು. ದಿಕ್ಕು ತೋರಲಿಲ್ಲ. ಕಳವಳ ಉಂಟಾಯಿತು ನಮ್ಮ ಕಷ್ಟಕ್ಕೆ ಪಾರವಿಲ್ಲದೆ ಹೋಗುವುದೋ ಏನೋ ಎಂಬ ಭಯವು ಉಂಟಾಯಿತು. ಈ ಭಯದಲ್ಲಿ ಮಲಗುವುದಕ್ಕೆ ಹೊರಟೆನು. ಅನೇಕ ವಿಧವಾದ ದುಸ್ವಪ್ನಗಳು ಆದವು, ಬೆಳಗಾಗುವುದರೊಳಗಾಗಿ ಸಸಾಟಿ (ನು ಕಾಲಾಧೀನನಾದನೆಂದು ವರ್ತಮಾನ ಹುಟ್ಟಿತು. ಅವನ ಅಕಾಲ ಮರಣಕ್ಕೆ ಅರಮನೆಯಲ್ಲಿ ವಾಸವಾಗಿರ ತಕ್ಕವರಲ್ಲಿ ಯಾರೋ ಕಾರಣಭೂತರೆಂಬದಾಗಿ ಗುಮಾನಿಯೂ ಕೂಡ ಎಲ್ಲಾ ಕಡೆಗಳಲ್ಲಿಯೂ ಹರಡಿಕೊಂಡಿತು. ಈ ವರ್ತಮಾನವನ್ನು ಕೇಳಿದ ಕೂಡಲೆ, ನನ ಗೆ ಅಪರಿಹಾರವಾದ ವ್ಯಸನವು ಉಂಟಾಯಿತು. ಮೆಂಟರನ ಭಯವು ಈ ರೂಪ ವಾಗಿ ಪರಿಣಮಿಸಿತು. ಮೆಟೊಫಿಸ್ಸನು ಇಷ್ಟು ದುರಾತ್ಮನೆಂದು ನಾನು ಭಾವಿ ಸಿರಲಿಲ್ಲ, ಸಸಾಟ್ರಿಸ್ ಎಂಬುವನಿಗೆ ಬಾಕರಿಸ್ ಎಂಬ ಒಬ್ಬ ಮಗನಿದ್ದನು. ಅವನು ನಿರಕ್ಷರಕುಕ್ಷಿಯಾಗಿದ್ದನು ಅವನಿಗೆ ಭೂತದಯೆಯು ಇರಲಿಲ್ಲ, ಇವರು ಕ್ಷೇಮಚಿಂತಕರು, ಇವರು ಶತ್ರುಗಳು ಎಂಬ ತಿಳುವಳಿಕೆಯು ಅವನಿಗೆ ಇರಲಿಲ್ಲ ಅಪ್ರತಿಹತವಾದ ವಿಷಯಾಸಕ್ತಿಗೆ ಇವನು ದಾಸಾನುದಾಸನಾಗಿದ್ದನು, ಅಷಮ ದಗಳಿಂದಲೂ ಇವನು ಪೀಡಿತನಾಗಿದ್ದು, ಲೋಕವೆಲ್ಲಾ ತನ್ನ ಸೌಖ್ಯ ಸ್ಕರ ಇರುವುದೆಂಬ ಭಾವನೆಯು ಇವನಿಗೆ ಪರಿಪೂರ್ಣವಾಗಿತ್ತು, ಸದಾ ವಿಷಯ ಸುಖಗಳಲ್ಲಿ ಇವನು ಮಗ್ನನಾಗಿರುತ್ತಿದ್ದನು, ಹೊನ್ನು, ಹೆಣ್ಣು, ಮಣ್ಣುಗಳಲ್ಲಿ ಇವನು ಕೇವಲ ಆಸಕ್ತನಾಗಿದ್ದನು ಇಂದ್ರ, ಚಂದ್ರ, ದೇವೇಂದ್ರನೆಂದು ಇವ ನನ್ನು ಹೊಗಳತಕ್ಕ ಸ್ತುತಿಪಾಠಕರೂ, ಪಾಠಕಿಯರೂ ಇವನನ್ನು ಆವರಿಸಿ ಕೊಂಡಿದ್ದ ರು, ವಾಸ್ತವಾಂಶವನ್ನು ಹೇಳತಕ್ಕವರು ಇವನ ಬಳಿಗೆ ಹೋಗುವು ದಕ್ಕೂ ಅವಕಾಶವನ್ನು ಹೊಂದುತ್ತಿರಲಿಲ್ಲ, ನಿರಂಕುಶಪ್ರವರ್ತಕರಲ್ಲಿ ಇವನು ಅಗ್ರಗಣ್ಯನಾಗಿದ್ದನು, ಸಸಾಟ್ರಿಸ್ಟನ ವಿಷಯದಲ್ಲಿ ಇದ್ದ ಪ್ರೀತಿಯನ್ನು ಪ್ರಜೆಗಳು ಇವನಲ್ಲಿಯೂ ಇಟ್ಟಿದ್ದರು, ಆದರೆ, ಈ ಪ್ರೀತಿಗೆ ಅವನು ಅರ್ಹನಾಗಿರಲಿಲ್ಲ. ಮೆಟೋಪಿಸ್ಸನು ತನ್ನ ಇಂದ್ರಜಾಲ ಮಹೇಂದ್ರಜಾಲ ವಿದ್ಯೆಗಳಿಂದ ಸಸಾಟ್ರಿಸ್ ನಿಗೆ ಅಕಾಲ ಮರಣ ಉಂಟಾಗುವಂತೆ ಮಾಡಿದ್ದಲ್ಲದೆ, ಅದಕ್ಕೆ ನಾನೂ, ಮೆಂಟ ರನೂ ಕಾರಣಭೂತರೆಂದು ಬಾಕರಿಸ್ಸನಿಗೆ ನಂಬಕೆಯನ್ನುಂಟುಮಾಡಿ, ನಮ್ಮನ್ನು ತಕ್ಷಣದಲ್ಲಿಯೇ ದಸ್ತಗಿರಿ ಮಾಡಿಸಿ, ಜೈಲಿನಲ್ಲಿ ಇರಿಸಿದನು, ಸಿಂಕ್ಷ, ಹುಲಿ,