ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವುದಿಲ್ಲವೇ ? ಈ ಪ್ರಪಂಚವೇ ಅನಾಯಕವಾದದ್ದೇ ? ದುರ್ಮಾರ್ಗಪ್ರವರ್ತಕರು ಒಳ್ಳೆ ಸ್ಥಿತಿಯಲ್ಲಿರುವುದನ್ನೂ, ಸನ್ಮಾರ್ಗಪ್ರವರ್ತಕರು ಕೆಟ್ಟ ಸ್ಥಿತಿಯಲ್ಲಿರುವುದ ನ್ಯೂ ಬಲವಾದ ಪ್ರಾಣಿಗಳು ಬಲವಿಲ್ಲದ ಪ್ರಾಣಿಗಳನ್ನು ಸಂಹರಿಸುವುದನ್ನೂ, ಸತ್ಯವಂತರೂ, ಧರ್ಮಿಷ್ಠ ರೂ ಕಷ್ಟಕ್ಕೆ ಗುರಿಯಾಗುವುದನ್ನೂ, ಪಾಪಿಷ್ಠರು ಪ್ರಬಲ ರಾಗುವುದನ್ನೂ ನೋಡಿದರೆ, ಈ ಪ್ರಪಂಚವು ಅನಾಯಕವಾದ್ದೆಂಬದಾಗಿಯ! ದೇವರೂ, ಸ್ವರ್ಗವೂ ಸುಳ್ಳೆಂಬದಾಗಿಯೂ, ವೇದಶಾಸ್ತ್ರ ಪುರಾಣೇತಿಹಾಸಗಳೆಲ್ಲಾ ಉನ್ಮತ್ತರಿಂದ ಬರೆಯಲ್ಪಟ್ಟ ಗ್ರಂಥಗಳೆಂಬದಾಗಿಯೂ ಪಾಪಕ್ಕೆ ಇರತಕ್ಕೆ ಪ್ರಾಶ ಇವು ಪುಣ್ಯಕ್ಕೆ ಇರುವುದಿಲ್ಲವೆಂಬದಾಗಿಯೂ, ಇಂಥಾ ಪಾಪಮಯವಾದ ಪ್ರಪಂಚದಲ್ಲಿ ಇರುವುದಕ್ಕಿಂತಲೂ ದೇಹವನ್ನು ಬಿಡುವುದು ಉತ್ತಮವೆಂಬದಾ ಗಿಯೂ ಯೋಚಿಸುತ್ತಾ, ಒಂದೊಂದು ನಿಮಿಷವನ್ನು ಒಂದೊಂದು ಯುಗದಂತೆ ನಾನು ಈ ಬೋನಿನಲ್ಲಿ ಕಾಲವನ್ನು ಕಳೆಯುತ್ತಿದ್ದೆನು.” ಆಗ ಪುನಃ ಒಂದು ಅಶರೀರವಾಕ್ಕು ಆಯಿತು, ಅದರಿಂದ ನನ್ನ ಶೈತ್ರಪಥಕ್ಕೆ ಬಿದ್ದದ್ದೇನೆಂದರೆ :- “ ಎಲೈ ಟೆಲಿಮಾಕಸ್ಸನೆ-ನಿನ್ನ ಮನೋಭಾವವು ಪರೀಕ್ಷಿಸಲ್ಪಡುತ್ತಿರು ವುದು, ಸಂಪತ್ತು ಬಂದಾಗ ಹಿಗ್ಗ ತಕ್ಕ ವರೂ, ವಿಪತ್ತು ಬಂದಾಗ ತಗ್ಗ ತಕ್ಕ ವರೂ ಲೋಕದಲ್ಲಿ ಬೇಕಾದ ಹಾಗೆ ಇರುವರು. ಅಂಥಾವರು ಪ್ರಭುತ್ವ ಮಾಡು ವುದಕ್ಕೆ ಅರ್ಹರಲ್ಲ. ಏಪತ್ತು ಬಂದ ಕಾಲದಲ್ಲಿ ಯಾರು ಹೆದರುವುದಿಲ್ಲವೋ, ಸಮಸ್ತ ಶುಭಾಶುಭಗಳೂ ಕರ್ಮಕ್ಕನುಸಾರವಾಗಿ ಬರುವುದನ್ನು ತಿಳಿದುಕೊಂಡು, ಬಂದ ಸಂಪತ್ತು ವಿಪತ್ತುಗಳನ್ನು ಯಾರು ಹರ್ಷ ವಿವಾದಗಳಿಲ್ಲದೆ ಅನುಭವಿಸು ವರೋ ಅವರು ಪ್ರಜಾರಂಜನೆಯನ್ನು ಮಾಡುವುದಕ್ಕೆ ದಕ್ಷ ರು. ನಿರಾಸೆಗೆ ಗುರಿ ಯಾಗಬೇಡ, ಈಗ ದೂರವನ್ನು ಅವಲಂಬಿಸು, ನಿನಗೆ ಮಂಗಳವಾಗುವುದು.” ಎಂಬವಾಕ್ಕು ಕೇಳಬಂದಿತು. ದಶದಿಕ್ಕು ಗಳಿಗೂ ನನ್ನ ದೃಷ್ಟಿಯನ್ನು ಪ್ರಸರಿಸಿ ನೋಡಿದೆನು. ಎಲ್ಲಿಯ ಯಾರೂ ಇರಲಿಲ್ಲ, ಇದು ಜಗದೀಶ್ವರನ ಲೀಲೆಯೆಂದು ಗೊತ್ತು ಮಾಡಿಕೊಂಡೆನು. ಇದೂ ಒಂದು ಅಶರೀರ ವಾಕ್ಕೆ೦ದು ತೋರಿತು. ನಾನು ಭ್ರಾಂತಿಯಿಂದ ಮೋಹ ಪರವಶನಾಗಿದ್ದೆನು. ಹೀಗಿರುವಾಗ್ಗೆ ಹಟತ್ತಾಗಿ ಲೇಶವೂ ನಿರೀಕ್ಷಣೆಯಿಲ್ಲದೆ ನಾನು ಇರುವ ತೀರಕ್ಕೆ ಬರುತ್ತಿದ್ದ ಅನೇಕ ಹಡಗುಗಳ ಧ್ವಜಸ್ತಂಭಗಳು ನನ್ನ ನೇತ್ರದ ಥಕ್ಕೆ ಬಿದ್ದವು. ಈ ಹಡಗುಗಳು ಆದ್ದಂತಗಳಿಲ್ಲದ ಕಾಡು ಗಿಡಗಳಂತೆ ಕಾಣ ಬಂದವು, ಅನುಕೂಲವಾದ ವಾಯುವಿನ ಸಹಾಯದಿಂದ ಹಡಗುಗಳೂ, ಬಹು ಜನಗಳಿಂದ ನಡೆಸಲ್ಪಡುತ್ತಿದ್ದ ದೋಣಿಗಳೂ ಇವುಗಳೆಲ್ಲಾ ನಾನು ಇರತಕ್ಕ ತೀರಕ್ಕೆ ಬಂದವು, ಎಲ್ಲೆಲ್ಲಿಯೂ ಗಲಿಬಿಲಿ ಶಬ್ದವು ಉಪಕ್ರಮವಾಗಿ ದಶದಿಕ್ಕು