ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

63 ಲನ್ನು ಪ್ರವೇಶಿಸಿದರು. ಸ್ವಲ್ಪ ಹೊತ್ತಿನಲ್ಲಿ ಷರ್‌ಖಾನನ ಸೈನ್ಯದವರು, ಅವರಿ ಬೃರೂ ಆ .ಗುಡಿಸಲಿಗೆ ಬಂದರೆಂದು ವರ್ತಮಾನವನ್ನು ಕೇಳಿ, ಅಲ್ಲಿಗೆ ಬಂದರು. ಅವರು ಬರುವಾಗೈ ಬೈರಾಮಖಾನನ ಕೃತ್ಯನು ಅವನಿಗೆ ಹೇಳಿದ್ದೇನೆಂದರೆ :-

  • ಚಿಕ್ಕ ವಯಸ್ಸಿನಿಂದ ನನ್ನನ್ನು ನೀನು ಪುತ್ರನಿರ್ವಿಶೇಷವಾಗಿ ಸಾಕಿದೆ.: ಇದಕ್ಕೆ ಪ್ರತಿಫಲವನ್ನುಂಟುಮಾಡುವ ಕಾಲವು ಈಗ ಬಂದಿದೆ, ನಿನ್ನ ಉಡಿಗ ತೊಡಿಗೆಗಳನ್ನು ನನಗೆ ಕೊಡು, ಈ ಕುರುಬನ ಉಡಿಗೆಗಳನ್ನು ನೀನು .ಹಾಕಿ ಕೂ, ಶತ್ರುಗಳ ಮೇಲೆ ಬಿದ್ದು, ಸಾಧ್ಯವಾದಷ್ಟು ಜನಗಳನ್ನು ಕೊಂದು ಬದು ಕುವುದಕ್ಕೆ ಅವಕಾಶವಿಲ್ಲದೆ ಹೋದರೆ, ನಾನು ದೇಹವನ್ನು ಬಿಡುವೆನು, ಈ ಮನೆಗೆ ಹಿಂದೆ ಒಂದು ಬಾಗಿಲು ಇರುವುದು, ಕುರುಬನ ವೇಷದಿಂದ ನೀನು ಹೊರಟು ಹೋಗು, ಜೀವವನ್ನು ರಕ್ಷಿಸಿಕೊಂಡಿದ್ದರೆ, ಚಕ್ರಾಧಿಪತ್ಯವನ್ನೂ ಕೂಡ ನೀನು ಆಳಬಲ್ಲೆ. ನನ್ನಲ್ಲಿ ದಯೆಯನ್ನು ಇಟ್ಟು ಈ ಸಲಹೆಗೆ ಒಪ್ಪ? ಎಂದು ಹೇಳಿದನು,

« ನನಗೆ ಚಕ್ರಾಧಿಪತ್ಯವೂ ಬೇಡ, ಈ ಅಖಂಡ ಬ್ರಹ್ಮಾಂಡದ ಆಧಿಪತ್ಯ ವನ್ನು ನನಗೆ ಕೊಟ್ಟಾಗ್ಯೂ, ಅದಕ್ಕೆ ಪ್ರತಿಯಾಗಿ ನಿನ್ನ ಪ್ರಾಣಕ್ಕೆ ಅಪಾಯ ತರು ವುದು ನನಗೆ ಇಷ್ಟವಿಲ್ಲ. ಹುಟ್ಟಿದ ಮೇಲೆ ಸಾಯತಕ್ಕದ್ದು ತಪ್ಪುವುದಿಲ್ಲ ನೃತೃನನ್ನು ಬಲಿಕೊಟ್ಟು, ನಾನು ಎಷ್ಟು ಯುಗಗಳು ಬದುಕುವೆನು ? ಇದಕ್ಕೆ ನಾನು ಎಂದಿಗೂ ಒಪ್ಪುವುದಿಲ್ಲ, ನಮ್ಮಿಬ್ಬರಿಗೂ ವಿಪತ್ತು ಬಂದಿದೆ. ಇಬ್ಬರೂ ಅದನ್ನು ಅನುಭವಿಸೋಣ, ಜಗದೀಶ್ವರನ ಇಷ್ಟವಿದ್ದಂತೆ ನಡೆಯಲಿ.” ಎಂದು ಬೈರಾಮಖಾನನು ಹೇಳಿದನು. ಈ ರೀತಿಯಲ್ಲಿ ಅವನು ಮಾಡಿದ ಸಂಕಲ್ಪವನ್ನು ನೋಡಿ, ಈ ಕೃತ್ಯನು ಒಂದು ಬಟ್ಟೆಯ ಚಂಡನ್ನು ಮಾಡಿ, ಬೈರಾಮಖಾನನ ಬಾಯಿಗೆ ತುರುಕಿ, ಕೈಕಾ ಲುಗಳನ್ನು ಕಟ್ಟಿ ಹಾಕಿ, ಅವನನ್ನು ಆ ಗುಡಿಸಲಿನ ಒಂದು ಮೂಲೆಯಲ್ಲಿ ಕೆಡವಿ; ಅವನ ಪೋಷಕ್ಕನ್ನು ತೆಗೆದುಕೊಂಡು, ತಾನು ಹಾಕಿಕೊಂಡು ಸಿದ್ದವಾಗುವುದಕ್ಕೆ ಸರಿಯಾಗಿ ಪರ್‌ಖಾನನ ಸೈನ್ಯದವರು ಆ ಗುಡಿಸಲಿನ ಬಾಗಿಲನ್ನು ಕಿತ್ತುಹಾಕಿ, ಒಳಕ್ಕೆನು ಗೈದರು. ಈ ಕೃತ್ಯನಿಗೂ, ಆವರಿಗೂ ಭಯಂಕರವಾದ ಯುದ್ದತ ಆಯಿತು, ಅವರಲ್ಲಿ ಅನೇಕರನ್ನು ಇವನು ಕೊಂದನು. ಕೊನೆಗೆ ಅವರಲ್ಲಿ ಕೆಲವರು ಇವನ ಶಿರಚ್ಛೇದನವನ್ನು ಮಾಡಿ, ಇವನೇ ಬೈರಾಂಖಾನನೆಂದು ತಿಳಿದುಕೊಂಡು, ಸದರಿ ಶಿರಸ್ಸನ್ನು ತೆಗೆದುಕೊಂಡು ಷರ್‌ಖಾನನ ಬಳಿಗೆ ಹೊರಟು ಹೋದರು,