ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

67 ಪದವಿಯಲ್ಲಿದ್ದವನಿಗೆ ಈ ಗತಿಯು ಉಂಟಾಯಿತು. ಮಿಕ್ಕವರ ವಾಡೇನು! ದೇವರು ಯಾರಿಗೆ ಹೆಚ್ಚು ಸಂಸತ್ತನ್ನೂ ಹೆಚ್ಚು ಅಧಿಕಾರವನ್ನೂ, ಲೋಕೋತ್ತರವಾದ ಪದ ವಿಯನ್ನೂ ಕೊಡುವನೋ ಅವರಿಂದ ಹೆಚ್ಚು ಮೆಹನತ್ತನ್ನು ಅಪೇಕ್ಷಿಸುವನೆಂದು ತೋರುತ್ತದೆ. ಈ ಚಕ್ರವರ್ತಿಯು ತನ್ನ ತಂದೆಯಂತೆ ಪ್ರಜಾರಂಜನೆಯಲ್ಲಿ ಆಶ ಕನಾಗಲಿಲ್ಲ. ಅ ವರ ಕ್ಷೇಮವೇ ತನ್ನ ಕ್ಷೇಮವೆಂದೂ, ಅವರ ಲಾಭನಷ್ಟ ಗಳೇ ತನ್ನ ಲಾಭನಷ್ಟಗಳೆಂದೂ ತಿಳಿದುಕೊಂಡು, ಅದನ್ನು ಅನುಷ್ಠಾನಕ್ಕೆ ಶಂಡು ಕೊಳ್ಳಲಿಲ್ಲ. ಚಕ್ರವರ್ತಿ ಪದವಿಯು ರೋಷಗಳನ್ನು ಮುಚ್ಚುವುದೆಂದು ತಿಳಿದು ಕೊಂಡನು. ಐಶ್ವರ ಮದದಿಂದಲೂ ಪ್ರತಿನಿವಿಷ್ಟನಾದನು. ಹಾಗಾಗುವುದ ರಿಂದ, ಪರಿಣಾಮ ಫಲವೇನಾಗುವದೋ ಅದನ್ನು ಯೋಚಿಸಲಿಲ್ಲ, ಯೋಚಿಸುವ ಶಕ್ತಿಯನ್ನೂ ಅವನು ಸಂಪಾದಿಸಿಕೊಳ್ಳಲಿಲ್ಲ, ಉದರ ನಿಮಿತ್ತವಾಗಿ ನೀನೇ ಇಂದ್ರ, ಚಂದ್ರ, ದೇವೇಂದ್ರನೆಂದು ಹೊಗಳತಕ್ಕ ವರ ಮಾತು ನಿಜವೆಂದು ಭಾವಿ ಸಿದನು. ಸತ್ಯಕ್ಕೂ, ಧರ್ಮಕ್ಕೂ ಸಂಪೂರ್ಣವಾದ ಅವಕಾಶವನ್ನು ಕೊಡಲಿಲ್ಲ. ದುಷ್ಟನಿಗ್ರಹ ಶಿಷ್ಯ ಪರಿಪಾಲನವನ್ನು ಸರಿಯಾಗಿ ಮಾಡಲಿಲ್ಲ, ತನ್ನ ಅಧಿಕಾರದ ಚಲಾವಣೆಗೆ ತಾನು ದೇವರಿಗೂ, ಮನುಷ್ಯರಿಗೂ ಉತ್ತರವಾದಿಯೆಂದು ತಿಳಿದು ಕೊಳ್ಳಲಿಲ್ಲ, ದೇಶದಲ್ಲಿ ಕಕ್ಷಿಗಳಿಗೆ ಅವಕಾಶಕೊಟ್ಟನು, ತನ್ನದೇ ಒಂದು ಕಕ್ಷಿಯನ್ನು ಮಾಡಿಕೊಂಡನು. ಪ್ರತಿಕಕ್ಷಿಗಳುಂಟಾಗುವುದಕ್ಕೆ ಅವಕಾಶ ಕೊಟ್ಟನು. ಒಂದು ಕಕ್ಷಿಗೆ ತಾನು ಸೇರಿದ್ದರಿಂದ, ಪ್ರತಿಕ್ಷಿಗಳನ್ನು ಮೂಲೋ ತಟನ ಮಾಡುವುದು ಸುಲಭವೆಂದು ತಿಳಿದುಕೊಂಡನು. ನಮ್ಮನ್ನು ಯಾರಾದರೂ ಸ್ತುತಿಸಿದರೆ, ಹೀಗೆ ಸ್ತುತಿಸುವುದಕ್ಕೆ ಕಾರಣವೇ ನೆಂದು ಪಾಲೋಚಿಸಬೇಕು. ' ಸ್ತುತಿಸತಕ್ಕವರು ಮನಃಪೂರ್ವಕವಾಗಿ ಸ್ತುತಿ ಸುತ್ತಾರೆಯೇ ? ಅಥವಾ ಲಾಭದ ಮೇಲೆ ದೃಷ್ಟಿ ಯಿಟ್ಟು ಸ್ತುತಿಸುತ್ತಾರೆಯೇ?' ಎಂಬುದನ್ನು ಪರಾಲೋಚಿಸಬೇಕು. ಲಾಭದ ಮೇಲೆ ದೃಷ್ಟಿಯಿಟ್ಟು ಸ್ತುತಿಸಿ ದರೆ, ಅವರ ಇಷ್ಟಾರ್ಥವನ್ನು ಸಲ್ಲಿಸುವುದು ಧರ್ಮವೇ ಅಧರ್ಮವೇ ? ಅದರ ಪರಿಣಾಮ ಫಲವು ಹೇಗಾಗುವುದು ? ಎಂದು ಪಾಲೋಚಿಸಬೇಕು, ನಮ್ಮನ್ನು ಯಾರಾದರೂ ನಿಂದಿಸಿದರೆ, ಅವರು ಹೀಗೆ ನಿಂದಿಸುವುದಕ್ಕೆ ಕಾರಣವೇನು ? ಎಂದು ಪರಾಲೋಚಿಸಬೇಕು, ನಮ್ಮಲ್ಲಿ ಇರತಕ್ಕ ದುರ್ಗುಣಗಳು ನಿಂದೆಗೆ ಕಾರಣವಾಗಿದ್ದರೆ ಅವುಗಳನ್ನು ತಿದ್ದಿಕೊಳ್ಳಬೇಕು, ನಾವು ಮಾಡಿದ ದುಷ್ಟನಿಗ್ರಹ ದಿಂದ ದುರಾಗ್ರಹವನ್ನು ಹೊಂದಿ, ನಮ್ಮನ್ನು ನಿಂದಿಸಿದರೆ, ಅಂಥಾ ನಿಂದೆಯ ವಿಷಯದಲ್ಲಿ ಉದಾಸೀನರಾಗಬೇಕು, ವಾಸ್ತವಾಂಶವು ಪ್ರಕಾಶವಾಗುವಂತ ಮಾಡಿಸಬೇಕು. ಈ ವಿಷಯಗಳೆಲ್ಲಾ ಈ ಚಕ್ರವರ್ತಿಗೆ ತಿಳಿಯುವುದಕ್ಕೆ ಅವಕ