ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

69 ವಿನಿಯೋಗಿಸತಕ್ಕವರಿಗೆ ಈ ವಿಷಯಗಳು ಸ್ಪಷ್ಟವಾಗಿ ಗೊತ್ತಾಗುವುವು. ಅತ್ರ ತಿಹತವಾದ ಶಕ್ತಿಯುಳ್ಳವರೂ ಕೂಡ, ದುರ್ವಿಷಯಗಳಲ್ಲಿ ಆಸಕ್ತರಾಗಿ, ಇಂದ್ರಿ ಯಪರವಶರಾಗಿ ಯಾವ ಕಷ್ಟವನ್ನು ತಾ ನೇ ಪಡಲಿಲ್ಲ ? ಸಕಲ ಸಂಪತ್ತುಗಳೊ ಡನೆ ದೇಹವನ್ನು ಕೂಡ ಕಳೆದುಕೊಂಡಿರುವುದಿಲ್ಲವೇ ? ಜಿತೇಂದ್ರಿಯರಾಗಿ ಆರ್ಜಿಸಿದ ಸಕಲ ಸಂಪತ್ತುಗಳನ್ನೂ ರಾವಣಾದಿಗಳಂತೆ ಅಜಿತೇಂದ್ರಿಯರಾಗಿ ಎಷ್ಟು ಜನಗಳು ಕಳೆದುಕೊಂಡಿಲ್ಲ' ಮನೋವಾಕ್ಕರ್ಮಗಳಲ್ಲಿ ನಿರ್ದುಷ್ಟರಾ ಗಿಯೂ, ಧರ್ಮಮಾರ್ಗಕಸರಾಯಣರಾಗಿಯೂ ಇದ್ದ ಶ್ರೀ ಮನೇ ಮೊದ ಲಾದವರಿಗೆ ಎಷ್ಟು ವಿಪತ್ತುಗಳು ಬಂದಾಗ್ಯೂ, ಆ ವಿಪತ್ತುಗಳೆಲ್ಲಾ ಉಷ್ಣವಲ ಯದ ಸೂರನ ಎದುರಿಗೆ ಕರಗಿಹೋಗುವ ಮಂಜಿನಂತೆ ಅದೃಶ್ಯವಾಗಲಿಲ್ಲವೇ ? ಇದನ್ನು ಸರಿಯಾಗಿ ತಿಳಿದುಕೊಳ್ಳದೆ, ಕೇವಲ ಮೂಢನಾಗಿ, ಈ ಬಂದೀಖಾನೆಯು ನನಗೆ ಅವಮಾನಕರವಾದ್ದೆಂದೂ, ಇದನ್ನು ಅನುಭವಿಸುವುದಕ್ಕಿಂತ ಸಾಯುವುದು ಮೇಲೆಂದೂ ನಾನು ಭಾವಿಸಿದ್ದೆ ನು, ಇದು ಶುದ್ಧ ತಪ್ಪು, ಇದು ಬಂದೀಖಾನೆ ಯಲ್ಲ, ಅದು ಜ್ಞಾನಮಂಟಪ, ಪ್ರಪಂಚದ ಸೃಷ್ಟಿಸ್ಥಿತಿಪ್ರಳಯಗಳ ಕಾರಣ ಗಳು ಇಲ್ಲಿ ಮನಸ್ಸಿಗೆ ಗೋಚರವಾಗುವ ಹಾಗೆ ಪ್ರಾಸಾದಗಳಲ್ಲಿಯ, ಅರಮನೆ ಗಳಲ್ಲಿಯೂ, ಹಂಸತೂಲಿಕಾ ತಲ್ಪಗಳ ಮೇಲೆಯೂ ಗೊತ್ತಾವುದೆ ? ಎಂದಿಗೂ ಗೊತ್ತಾಗುವುದಿಲ್ಲ. ಚಕ್ರವರ್ತಿ ಸದವಿಯು ನನಗೆ ಬೇಡ, ಇಥಾಕಾದ ಪ್ರಭು ತ್ವವೂ ನನಗೆ ಬೇಡ, ಅಸ್ಪೃಶ್ವರಗಳೂ ನನಗೆ ಬೇಡ, ಅಪ್ರತಿಹತವಾದ ಅಧಿಕಾ ರವೂ ನನಗೆ ಬೇಡ, ತಪೋವನಕ್ಕೆ ಸದ್ಯ ವಾದ ಈ ಜ್ಞಾನಮಂಟಪವೇ ನನಗೆ ಸ್ವರ್ಗಪ್ರಾಯವಾಗಿರುವುದು, ಸಿಂಹಾಸನವನ್ನು ಅಲಂಕರಿಸಿರುವಾಗ, ನಮಗೆ ಚತುರ್ಭುಜಗಳಿರುವಂತೆಯ, ನಾವೇ ಅವತಾರ ಪುರುಷರೆಂಬದಾ ಗಿಯೂ, ಸಕಲ ಪುರುಷಾರ್ಥಗಳೂ ನಮ್ಮ ಹಸ್ತಗತವಾಗಿರುವುವೆಂಬದಾಗಿಯೂ, ಇಚ್ಛಾಮಾತ್ರ ದಿಂದ ಬೇಕಾದ ಕೆಲಸಗಳನ್ನು ನಾವು ಮಾಡಬಹುದೆಂಬದಾಗಿದ, ನಾವೇ ಜಗದೀಶ್ವರನ ಪ್ರತಿನಿಧಿಗಳೆಂಬದಾಗಿಯೂ ತಿಳಿದುಕೊಂಡು, ಅಜ್ಞಾನಸಾಗರದಲ್ಲಿ ಮುಳುಗಿ ತೇಲುತ್ತಲಿರುತ್ತೇವೆ. ದೈವಯೋಗದಿಂದ ಈ ಬೋನಿನ ರೂಪವಾದ ಜ್ಞಾನಮಂಟಪವು ನನಗೆ ಲಭ್ಯವಾಯಿತು ಇದಕ್ಕಾಗಿ ಜಗದೀಶ್ವರನಿಗೆ ನಾನು ತುಂಬಾ ಕೃತಜ್ಞನಾಗಿರುವೆನು, ನನ್ನನ್ನು ಈ ಬೋನಿಗೆ ಕೂಡಿದವರು ನನಗೆ ಶಿಕ್ಷೆ ಯನ್ನು ಮಾಡಿದಂತೆ ತಿಳಿದುಕೊಂಡಿರುವರು, ಅವರು ಮಾಡಿರುವ ಶಿಕ್ಷೆಯು ನನ್ನ ಭಾಗಕ್ಕೆ ಉಪಕಾರವಾಗಿ ಪರಿಣಮಿಸಿತು. ಅದಕ್ಕಾಗಿ ನಾನು ಅವರಿಗೆ ತುಂಬಾ ಕೃತಜ್ಞನಾಗಿರುವೆನು. ಒಂದು ವೇಳೆ ನನಗೆ ಸ್ವಾತಂತ್ರವು ಬಂದರೆ, ಈ ಬೋನಿನಲ್ಲಿ ಕೂಡಲ್ಪಟ್ಟಿದ್ದರಿಂದ ನನಗುಂಟಾದ ಜ್ಞಾನವು ಉತ್ತರೋತ್ತರ ಈ