ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

15 ಯುವುದೋ ಅದಕ್ಕೆ ಅನುರೂಪವಾದ ಅವಸ್ಥೆಯು ಬರುವುದು, ನಿನ್ನನ್ನು ಕೇವಲ ಧರ್ಮಿಷ್ಟನನ್ನಾಗಿ ಮಾಡಬೇಕೆಂದು ನಾನು ಸಂಕಲ್ಪ ಮಾಡಿದ್ದೆನು, ಈ ಸಂಕಲ್ಪವು ನೆರವೇರುವುದಕ್ಕೆ ಅವಕಾಶವಾಗಲಿಲ್ಲ. ನಿಮ್ಮ ತಾಯಿಗೆ ನಿನ್ನನ್ನು ಒಪ್ಪಿಸಿರುವೆನು. ರಾಜಯೋಗ್ಯವಾದ ಪದವಿಗೆ ಆನುರೂಪವಾದ ಶಿಕ್ಷ, ಣವನ್ನು ಕೊಡುವ ಶಕ್ತಿಯನ್ನು ದೇವರು ಆಕೆಗೆ ದಯಪಾಲಿಸುವನೆಂದು ನಾನು ಕೋರುತ್ತೇನೆ. ಆದು ಹೇಗಾದರೂ ಇರಲಿ, ನನ್ನ ಹಿತೋಪದೇಶವನ್ನು ತಿಳಿದು ಕೊಳ್ಳುವುದಕ್ಕೆ ಬೇಕಾದಷ್ಟು ವಯಸ್ಸು ನಿನಗೆ ಇನ್ನೂ ಬಂದಿಲ್ಲ, ಆದಾಗ್ಯೂ ಒಂದೆರಡು ಮಾತುಗಳನ್ನು ಹೇಳುವುದು ನನಗೆ ಕರ್ತವ್ಯವಾದದ್ದು, ಸ್ತುತಿಸ ತಕ್ಕವರೆಲ್ಲರೂ ಮಿತ್ರರೆಂದು ತಿಳಿದುಕೊಳ್ಳಬೇಡ ನಿ೦ದಿಸತಕ್ಕ ವರೆಲ್ಲರ ಶತ್ರುಗ ಟೆಂದು ತಿಳಿದುಕೊಳ್ಳಬೇಡ. ಮನೋವಾಕ್ಕರ್ಮಗಳಲ್ಲಿ ಪರಿಶುದ್ಧನಾಗಿರು. ಎಷ್ಟು ಕಷ್ಟಗಳು ಬಂದಾಗ್ಯೂ, ಸತ್ಯವನ್ನೂ, ಧರ್ಮವನ್ನೂ ಬಿಡಬೇಡ, ರುಜು ಮಾರ್ಗವನ್ನು ಅವಲಂಬಿಸು, ದಯೆಯುಳ್ಳವನಾಗಿರು. ಪ್ರತಿಫಲವನ್ನು ಅವೇ ೬ ಸದೆ, ಸಲ್ವರಿಗೂ ಉಪಕಾರ ಮಾಡುವುದನ್ನು ಕJತುಕೊ, ರಹಸ್ಯವನ್ನು ರಕ್ಷಿಸಿಕೊ, ಅವ್ರತವನ್ನು ಎಂದಿಗೂ ಆಡಬೇಡ, ಸುಳ್ಳು ಹೇಳತಕ್ಕವರು ಮನುಷ್ಯರಾಗಿರುವುದಕ್ಕೆ ಅನರ್ಹರು. ರಾಜರಾಗಿರುವುದಕ್ಕೆ ಅನರ್ಹರೆಂದು ಹೇಳಬೇಕಾದದ್ದೆ ಇಲ್ಲ, ಸಾಮಾನ್ಯ ಜನಗಳು ಸುಳ್ಳು ಹೇಳಿದರೂ, ಮಾಡ ಬಾರದ್ದನ್ನು ಮಾಡಿದರೂ ಅದಕ್ಕೆ ಗಮನ ಕೊಡತಕ್ಕವರು ವಿರಳರಾಗಿರುವರು. ಪ್ರಭುಪದವಿಗೆ ಬರತಕ್ಕವನು ಅಧವಾ ಆ ಪದವಿಯಲ್ಲಿರತಕ್ಕವನು ಸುಳ್ಳು ಹೇಳಿ ದರೆ, ಅದು ಏಕಾಂತವಾಗಿರುವುದಿಲ್ಲ, ಲೋಕಾಂತವಾಗುವುದರಲ್ಲಿ ಸಂದೇಹ ವಿಲ್ಲ, ನೀನು ಸುಳ್ಳನೆಂದು ಪ್ರಭುವಿಗೆ ಯಾರೂ ಹೇಳುವುದಿಲ್ಲ. ಭತ್ಯರೂ ಕೂಡ ಸುಳ್ಳು ಹೇಳತಕ್ಕ ಪ್ರಭುವಿನಲ್ಲಿ ನಂಬಿಕೆಯನ್ನಿಡುವುದಿಲ್ಲ. ವಾಚಾಳನಾಗಿ ರುವುದು ಸುಲಭ, ಮೌನಿಯಾಗಿರುವುದು ಬಹಳ ಕಷ್ಟ, ಮುನಿಗಳಲ್ಲಿಯೂ ಅನೇಕರು ಎಷ್ಟು ಮಟ್ಟಿಗೆ ಮನವನ್ನು ಅವಲಂಬಿಸಬೇಕೋ ಅಷ್ಟು ಮಟ್ಟಿಗೆ ಅವಲಂಬಿಸದೆ ಅನರ್ಧಕ್ಕೆ ಗುರಿಯಾಗಿರುವರು. ಇದರ ರಹಸ್ಯಗಳನ್ನು ತಿಳಿದುಕೊಳ್ಳುವ ವಯಸ್ಸು ನಿನಗೆ ಬಂದಿಲ್ಲ, ಆದುದರಿಂದ ಹೆಚ್ಚಾದ ರಾಜಧರಗ ಇನ್ನು ನಿನಗೆ ಹೇಳಿ ಪ್ರಯೋಜನವಿಲ್ಲ, ಸತ್ಯವೂ, ಧರ್ಮವೂ, ರಹಸ್ಯ ರಕ್ಷಣೆ ಯ ಲೋಕಹಿತೈಷಿಗಳಾದ ಪ್ರಭುಗಳಿಗೆ ವಜ್ರಕವಚಗಳು, ಇವುಗಳನ್ನು ರಕ್ಷಿ ಸಿಕೊಂಡರೆ, ನೀನು ಪ್ರಜೆಗಳಿಗೆ ಚಿಂತಾಮಣಿಯಾಗಿಯೂ, ಕಲ್ಪವೃಕ್ಷವಾಗಿಯೂ ಪರಿಣಮಿಸುವೆ, ಅದರಿಂದ ಧನ್ಯತೆಯು ನಿನಗೆ ಉಂಟಾಗುವುದು. ದೇವರು ಈ ಗುಣಾತಿಶಯಗಳನ್ನು ನಿನಗೆ ಕೊಟ್ಟು ರಕ್ಷಿಸಲೆಂದು ನಾನು ಪ್ರಾರ್ಥಿಸು