ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

79 ಸುಳ್ಳು ಹೇಳುವುದು ಮಹಾ ಪಾತಕವೆಂಬದಾಗಿಯೂ, ಸುಳ್ಳು ಹೇಳತಕ್ಕೆ ವಸು ಪ್ರಭುವಾಗಿರುವುದಕ್ಕೆ ಅರ್ಹನಲ್ಲವೆಂಬದಾಗಿಯೂ, ನನ್ನ ತಂದೆಯು ಹೇಳುತ್ತಿದ್ದನು. ಇದನ್ನು ಕೇಳಿದ ಕೂಡಲೆ, ಸುಳ್ಳನ್ನು ಹೇಳುವುದಿಲ್ಲವೆಂದು ನಾನು ನಿಷ್ಕರ್ಷೆ ಮಾಡಿದೆನು, ಈ ನಿಷ್ಕರ್ಷೆಯನ್ನು ಅನುಷ್ಠಾನಕ್ಕೆ ತಂದುಕೊಳ್ಳು ವಾಗ್ಗೆ ಬಹಳ ಕಷ್ಟವಾಯಿತು, ಅನುಷ್ಠಾನ ಸಮಯ ಬಂದಾಗ ಮುನಿಗಳೂ ಕೂಡ ಅಪಂಡಿತರಾಗುವರೆಂದು ಹೇಳುವುದನ್ನು ನಾನು ಕೇಳಿ ಇದ್ದೆನು, ಅದು ನಿಜವೆಂದು ಗೊತ್ತಾಗುವ ಸಂದರ್ಭಗಳು ಉಂಟಾದವು, ನಮ್ಮ ತಂದೆಯ ದೇಶಾಟನಕ್ಕೆ ಹಣ ದೆನು, ರಾಜಧಾರವು ಮಂತ್ರಿಗಳಿಗೆ ವಹಿಸಲ್ಪಟ್ಟಿತು. ನಮ್ಮ ತಾಯಿ ಬ ಗಳ ರೂಪವತಿಯಾಗಿದ್ದಳು. =ಂದರಕ್ಕೆ ಅನುರೂಪವಾದ ಪಾತಿವ್ರತ್ಯವು ಇವಳಲ್ಲಿದ್ದ ತು, ನಮ್ಮ ತಾಯಿಯು ಸಾಮಾನ್ಯ ಸ್ತ್ರೀಯೆಂದು ಭಾ ವಿಸಿ, ಅನೇಕ ಪ್ರಭುಗಳು ನಮ್ಮ ರಾಜಧಾನಿಗೆ ಬಂದರು, ನಾನೂ, ಮಂತ್ರಿಗಳೂ ಅವರ ಪದವಿಗೆ ಅನುರೂಪವಾದ ಮರಾದೆಗಳನ್ನು ಮಾಡಿ ಸತ್ಕರಿಸಿದೆವು. ಈ ದುಗಾತ್ಮರು ನಮ್ಮ ತಾಯಿಯನ್ನು ಕುರಿತು ಹೇಳಿದ್ದೆ ನೆಂದರೆ :- - ಎಲ್ ಬೆಸಿಲೋಪಳ, - “ ನಿನ್ನ ಗಂಡನು ದೆ?ಶಾಟನಕ್ಕೆ ಹೋಗಿ ಬಹಳ ದಿನಗಳಾದವು, ಆತನ ಯೋಗಕ್ಷೇಮ ವಿಷಯವನ್ನು ನಾವು ವಿಚಾರಿಸಿದೆವು. ಆತನು ಮೃತಪಟ್ಟಂತೆ ತಿಳಿಯಬರುತ್ತದೆ, ನಮ್ಮಲ್ಲಿ ನಿನಗೆ ಇಷ್ಟವಾದವರನ್ನು ವರಿಸು ನಿನ್ನನೂ, ನಿನ್ನ ಮಗನನ್ನೂ ನಾವು ರಕ್ಷಿಸುತ್ತೇವೆ. ಎಂದು ಹೇಳಿದರು. ೧ ದೌರಾತ್ಮ ವು ನನಗೆ ಅಪ್ರತಿಹತವಾದ ಕೋಪವನ್ನು ಉಂಟುಮಾಡಿತು. ತಕ್ಷಣದಲ್ಲಿಯೇ ಅವರ ಶಿರಡೆ ದವನ್ನು ಮಾಡಬೇಕೆಂದು ಕತ್ತಿಯನ್ನು ತರುವದಕ್ಕೆ ಹೋದೆನು, ನನ್ನ ತಾಯಿಯು ಇದನ್ನು ತಿಳಿದು ಕೊಂಡು, ನನ್ನನ್ನು ಕರೆದು ಹೇಳಿದ್ದೇ ನಂದರ - ಮಗುವೇ ! ದುಡುಕಬೇಡ. ಇದು ನಮಗೆ ವಿರ್ಸ ಕಾ ೨, ಇದು ಪರಾಕ್ರಮಕ್ಕೆ ಕಾಲವಲ್ಲ, ಉಪಾಯದಿಂದ ನಮಗೆ ಬಂದಿರುವ ಸತ್ಯನ್ನು ತಪ್ಪಿಸಿಕೊಳ್ಳಬೇಕು, ಅದು ಅಸಾಧ್ಯವಾದರ, ಆಗ ಶಸ್ತಪರಿಗ್ರಹ ಮಾಡಬೇಕು, ಭಯಪಡಬೇಡ, ಈ ದುಷ್ಟ ರು ಕಾಮಾಂ ಧರಾಗಿದ್ದಾರ, ಇವರನ್ನು ಇವರ ಅಧರ್ಮವೇ ಮೂಲೋತ್ಪಾಟನ ಮಾಡು ವುದು, ಪತಿವ್ರತೆಯರ ಕಣ್ಣೀರು ಒಂದು ತೊಟ್ಟು ನೆಲಕ್ಕೆ ಬಿದ್ದರೆ, ಅದು ಪ್ರಳ ಯಕಾಲದ ಅಗ್ನಿ ದಂತೆ ದುರಾತ್ಮರ ವಂಶವನ್ನೇ ಸುಟ್ಟು ಬೂದಿಮಾಡುವು ದೆಂಬುದು ನಿನಗೆ ತಿ “ಯದೆ ? ಈ ಪುಂಡರು ಬಲಿಷ್ಠರಾಗಿದ್ದಾರೆ. ಸೈನ್ಯ ಸಮೇ ತರಾಗಿ ಬಂದಿದ್ದಾರೆ, ನಾನು ಹೆಂಗಸು, ನೀನು ಹುಡುಗ, ಯಜಮಾನರು ದೂರದೇಶದಲ್ಲಿರುವರು, ಮಂತ್ರಿಗಳು ಶೂರರು, ಆದಾಗ್ಯೂ, ಮೊದಲನೇ