ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

81 ನಮ್ಮ ದೊರೆಯಾದ ಪಿಗ್ಮೇಲಿರ್ಯ ಎಂಬುವನ ಸಹೋದರಿಯೊಬ್ಬಳಿರುವಳು. ಅವಳನ್ನು ಇಡೊ ಎಂಬದಾಗಿ ಕರೆಯುತ್ತಾರೆ. ಅವಳ ಗಂಡನಾದ ಸಿಚಿ ಯಸ್ ಎಂಬುವನನ್ನು ಈ ಪಿಗ್ಮೇಲಿಯನ್ನನು ಕೊಲ್ಲಿಸಿದ೬, ೬ ಆರು ಬಹಳ ವ್ಯ ಸನಂದ ತನ್ನಲ್ಲಿ ವಿಶ್ವಾಸವುಳ್ಳವರೂಡನೆ ಅರಮನೆಏ ಓಡಿಹೋಗಿ ರುವಳು, ಆಫ್ರಿಕಾ ಖಂಡದ ತೀರದಲ್ಲಿ ಕಾರ್ಧೆಟ್ ಎಂಬ ಪಟ್ಟಣಕ್ಕೆ ಶಂಕುಸ್ಥಾ ಪನೆಯನ್ನು ಮಾಡಿರುವಳು, ಧರ್ಮಿಷ್ಟರಾಗಿಯೂ, ಸ್ವಾತಂತ್ರ ದಲ್ಲಿ ಆಸಕ್ತ ರಾಗಿಯೂ ಇರುವ ಅನೇಕ ಮಹಾ ಜನಗಳು ಈಕೆಯನ್ನು ಅನುಸರಿಸಿ ಹೋಗಿ ರುವರು. ಈ ಪಟ್ಟಣವು ದಿನೇದಿನೇ ಸಕಲ ಸಂಪತ್ತುಗಳಿಗೂ ನಿಲಯವಾಗುತ್ತ ಲಿರುವುದು, ಈಕೆಗೂ, ಈಕೆಯ ಪ್ರಜೆಗಳಿಗೂ ಸಿಸರ್ಗವಾದ ಪ್ರೀತಿಯು ಇರು ವುದು, ಪ್ರಜೆಗಳ ಸುಪತ್ತೆತನ್ನ ಸವಕ್ಕೆಂದು ಈಕೆಯು ತಿಳಿದುಕೊಂಡಿರು ವಳು, ಈಕೆಯ ಪ್ರಜೆಗಳು ಸರ್ವಸ್ವವನ್ನೂ ಈಕೆಗೆ ಒಪ್ಪಿಸುವುದಕ್ಕೆ ಸಿದ್ಧರಾಗಿ ರುವರು, ಪ್ರಾಣವನ್ನು ಒಪ್ಪಿಸುವುದಕ್ಕೂ ಕೂಡ ಸಿದ್ಧರಾಗಿರುವರು. ಪಿಗ್ ಮೇಲಿಯನ್ನನಿಗೆ ಈಕೆಯ ಮೇಲೆ ದ್ವೇಷವಿರುವುದು. ಆದರೆ, ಆ ದ್ವೇಷದಿಂದ ಈಕೆಗೆ ಯಾವ ಬಾಧಕವೂ ಆಗುವಂತೆ ತೋರುವುದಿಲ್ಲ. ಈ ದ್ವೇಷದಿಂದ ಇವ ನಿಗೆ ವಿಪತ್ತು ಬರುವ ಸಂಭವವು ಇರುವುದು, ಕವನ ಸ್ವಂತ ಪ್ರಜೆಗಳೇ ಇವ ನಲ್ಲಿ ನಂಬಿಕೆಯುಳ್ಳವರಾಗಿರುವುದಿಲ್ಲ. ಅವರಲ್ಲಿ ಅವನಿಗೂ ಎಶಾ ನವಿರುವುದಿಲ್ಲ. ಭಯದಿಂದ ಅವರು ವಿದೇಯರಾಗಿರುವರು. ಯಾವಾಗ ಇವರು ಒಗ್ಗಟ್ಟಾಗಿ ತನ್ನನ್ನು ಸಂಹರಿಸುವರೋ ? ಎಂಬ ಭಯವು ನಸಿಗೂ ಇರುವುದು, ಹೀಗಿ ದ್ದಾಗ್ಯೂ, ಪ್ರೀತಿಯಿಂದಲ, ವಾರದಿಂದ ಪ್ರತಿಗಳನ್ನು ಸ್ವಾಧೀನ ಮಾಡಿ ಕೊಳ್ಳುವ ಬುದ್ದಿಯು ಇವನಿಗೆ ಉಂಟಾಗಿರುವುಲ್ಲ, ಅವನ ರಾಜ್ಯದಲ್ಲಿ ಐಶ್ವ ರವಂತರಾಗಿರುವುದೇ ಅಪರಾಧವಾಗಿ ಪರಿಣಮಿಸಿರುವುದು, ಇವನು ದುರಾಸೆ ಯುಳ್ಳವನು, ಹೊಟ್ಟೆ ಕಿಚ್ಚು ಇವನಲ್ಲ ಮೂರ್ತಿ ಮತ್ತಾಗಿರುವುದು, ಯಾರ ೪ ಇವನಿಗೆ ನಂಬಿಕೆಯು ಇರುವುದಿಲ್ಲ ಇವನು ಕಿರಾತನ್ವಭಾವವುಳ್ಳವನು. ಐಶ್ವರವಂತರನ್ನು ಇವನು ಹಿಂಸಿಸುತ್ತಾನೆ. ಬಡವರನ್ನು ಹೆದರಿಸುತ್ತಾನೆ. ಇವನಿಗೆ ಐಶ್ವರವಂತರಲ್ಲಿ ಎಷ್ಟು ದ್ವೇಷವು ಇರುವುದೊ, ಸತ್ಯವಂತರಲ್ಲಿ ಅದಕ್ಕಿಂತ ಹೆಚ್ಚಾದ ದ್ವೇಷವು ಇರುವುದು, ಸತ್ಯಸಂಧರಾದವರು ಇವ ನಲ್ಲಿ ಪ್ರೀತಿಯುಳ್ಳವರಾಗಿರುವುದಿಲ್ಲ, ಅವರನ್ನು ಇವನು ದ್ವೇಷಿಸುವುದಕ್ಕೆ ಇದೇ ಮುಖ್ಯ ಕಾರಣ, ಕೆಟ್ಟ ಕೆಲಸಗಳನ್ನು ಮಾಡಬೇಕೆಂದು ಅವನು ಆಜ್ಞೆಯನ್ನು ಮಾಡುತ್ತಾನೆ. ಸಜ್ಜನರು - ಇದು ಸರಿಯಲ್ಲ, ನಿನ್ನ ಪದವಿಗೆ ಇದು ಅನರ್ಹ 11