ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

84 ವನ್ನು ಮಾಡುವುದು ನನಗೆ ಕರ್ತವ್ಯ ಈ ಕರ್ತವ್ಯವನ್ನು ಮಾಡುವುದು ನನ್ನ ಧರ್ಮ, ಈ ಧರ್ಮವನ್ನು ಮನೋವಾಕ್ಕರ್ಮಗಳಲ್ಲಿಯೂ ನಾನು ಮಾಡು ವೆನು. ಅವನಿಂದ ಸಂಬಳವನ್ನು ಹೊಂದಿ, ಅವನಿಗೆ ಎರಡು ಬಗೆಯುವುದು ನನಗೆ ಧರ್ಮವಲ್ಲ, ಪ್ರಮುವಾದವನು ಕೆಟ್ಟವನಾ ದಾಗೂ, ಸೇವಕರು ಅವನನ್ನು ತಿದ್ದ ಬೇಕು, ಅದು ಅಸಾಧ್ಯವಾದರೆ, ಶಾಗೆ ತಿದ್ದುವ ಪ್ರಯತ್ನದಲ್ಲಿ ದೇಹವನ್ನು ಬಿಡಬೇಕು, ಹೀಗೆ ಮಾಡುವುದೇ ನನ್ನ ಕರ್ತವ್ಯ, ಆ ಕರ್ತವ್ಯವನ್ನು ನಾನು ಮಾಡುವುದರಲ್ಲಿ ಬದ್ದ ಸಂಕಲ್ಪನಾಗಿರುತ್ತೇನೆ, ಆದರೆ, ನನಗೆ ಒಂದು ಬಲವಾದ ವ್ಯಾಕುಲವು ಉ .ಟ: ಗಿರುವುದು, ನಿನ್ನ ಪೂರ್ವಾಪರಗಳನ್ನು ಕೇಳಿದಾರಭ್ಯ ನನಗೆ ನಿನ್ನಲ್ಲಿ ಅತ್ಯಂತ ಪ್ರೀತಿಯು ಉಂಟಾಗಿರುವುದು, ಈಗ ಪಿಗ್ಮೇಲಿಯನ್ನ ನನ್ನು ನೀನು ನೋಡುವ ಸಂಭವು ಉಂಟಾಗುವುದು. ನೀನು ಯ ಲಿಸೆಸ್ಸನ ಮಗ ನೆಂಬದಾಗಿಯೂ, ಟೆಮಾಕಸ್ಥನೆಂಬದಾಗಿಯೂ ಹೇಳಿಕೊಳ್ಳಬೇಡ, ಹಾಗೆ ಹೇಳಿಕೊಂಡರೆ, ತಕ್ಷಣದಲ್ಲಿಯೇ ನಿನ್ನನ್ನು ರೈಲಿನಲ್ಲಿಟ್ಟು, ನಿಮ್ಮ ತಂದೆಯಿಂದ ಭಾರಿ ವಿಮೋಚನ ದ್ರವ್ಯವನ್ನು ಅಪೇಕ್ಷಿಸುವನು. ಪುನಃ ಬಂದೀಖಾನೆಯಲ್ಲಿ ರುವ ಅವಸ್ಥೆ ಯು ನಿನಗೆ ಬರುವುದು, ದೇವರು ನಿನಗೆ ಮಂಗಳವನ್ನು ಮಾಡ

ಬೇಕು.” ಈ ರೀತಿಯಲ್ಲಿ ನಾರ್ ಬಿನು ಹೇಳಿದ ಕೂಡಲೆ ನನಗೆ ಆಶ್ಚರವಾ ಯಿತು. ಪಿಗ್ಮೇಲಿಯನ್ನನು ಅಸಾಧಾರಣವಾದ ರಾಜಭಕ್ತಿಯುಳ್ಳವನಾದಾ ಗ್ರೂ, ನನ್ನಲ್ಲಿ ಇವನಿಗೆ ವಿಶೇಷವಾದ ಕರುಣೆಯ, ಪ್ರೀತಿಯ ಹುಟ್ಟುವುದಕ್ಕೆ ಜಗದೀಶ್ವರನೇ ಕಾರಣನಾಗಿರಬೇಕೆಂದು ನಾನು ತಿಳಿದುಕೊಂಡೆನು. ಇವನ ಉಪದೇಶದಂತೆ ನಡೆಯಬೇಕೆಂದು ನಿಷ್ಕರ್ಷೆ ಮಾಡಿಕೊಂಡೆನು. ಆದಾಗ್ಯೂ ಪೂರ್ವಾಪರಜ್ಞಾನವಿಲ್ಲದೆ ಪಿಗ್ಮೇಲಿಯನ್ನನು ಈ ಅವಸ್ತೆಗೆ ಬಂದಿರುವುದನ್ನು ಪರಾಲೋಚಿಸಿ, ನಾನು ತುಂಬಾ ವಿಷಾದ ಪಡುತ್ತಿದ್ದೆನು. ಇವನಲ್ಲಿ ನನಗೆ ತುಂಬಾ ಕನಿಕರವುಂಟಾಯಿತು. • ಈ ಪಿಗ್ಮೇಲಿಯನ್ನನು ಬಹಳ ಅದ್ರಷ್ಟಹೀನನು. ಅಪ್ರತಿಹತವಾದ ಅಧಿಕಾರದಲ್ಲಿಯೂ, ಅಮಿತವಾದ ಧನಕನಕಾದಿಗಳಲ್ಲಿಯೂ ಸೌಖ್ಯವು ಇರುವು ದೆಂದು ಇವನು ತಿಳಿದುಕೊಂಡಿರುವನು. ಈ ಅಧಿಕಾರವೂ, ಐಶ್ವರವೂ ಇವನ ಅನಿರ್ವಚನೀಯವಾದ ಕ್ಷೇಶಕ್ಕೆ ಕಾರಣವಾಗಿ ಪರಿಣಮಿಸಿರುವುವು. ಈಗ ಕೆಲ ವು ದಿವಸಗಳ ಕೆಳಗೆ ನಾನು ಕುರುಬನಾಗಿದ್ದೆನು. ಒಂದು ಕಾಸಿನ ಆಸ್ತಿಯೂ, ಲೇಶ ಅಧಿಕಾರವೂ ನನಗೆ ಇರಲಿಲ್ಲ. ಆಗ ನನಗಿದ್ದ ಷ್ಟು ಸೌಖ್ಯವೂ, ಸಂತೋ ಪವೂ, ತೃಪ್ತಿಯೂ, ದೇವೇಂದ್ರನಿಗೂ ಕೂಡ ಲಭ್ಯವಾಗಲಾರದು. ನನಗೆ ವಿಷ