ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

86 ಇಲ್ಲದಿದ್ದರೆ, ಸಂಸಾರದಲ್ಲಿರತಕ್ಕ ಹೆಂಡತಿ, ಮಕ್ಕಳು, ಬಂಧುಮಿತ್ರರೇ ಮೊದ ಉಾದ ನೆರೆಹೊರೆಯವರು, ಇವರ ಪ್ರೀತಿಗೆ ಪಾತ್ರನಾಗಿ ಕುರುಬನಾಗಿರುವುದು ಮೇಲು, ವಿಗ್ಮೇಲಿಯನ್ನನ ವಿಷಯದಲ್ಲಿ ನಾರ್‌ ಬಲ್‌ನು ಹೇಳಿರುವುದೆಲ್ಲಾ ನಿಜವಾದ ಪಕ್ಷದಲ್ಲಿ, ಇವನು ಮಹಾ ಪಾಪಿಯು, ಇವನ ಸಂದರ್ಶನವೂ, ಇವ ಕಡನೆ ಸಂಭಾಷಣವೂ ಇನೆರಡೂ ಅಪೇಕ್ಷಣೀಯವಾದವುಗಳಲ್ಲ. ಬಲಾತ್ಕಾ ಇಟಾಗಿ ಇವುಗಳು ಸಂಭವಿಸಿದ ಪಕ್ಷದಲ್ಲಿ, ಉಪಾಯದಿಂದ ಪಾಪದ ಸೊಂಕನ್ನು ತಸಿಕೊಂಡು, ದೇವರ ಧ್ಯಾನದಿಂದ ಆ ಪಾಪವನ್ನು ಪರಿಹಾರ ಮಾಡಿಕೊ ಇಬೇಕು, ಪಿಗ್ಮೆ°ಲಿಯನ್ನನನ್ನು ನೋಡುವುದಕ್ಕೆ ಮುಂಚೆ ನನ್ನ ಅಭಿಪ್ರಾ ಹವು ಈ ರೀತಿಯಲ್ಲಿತ್ತು. - ಇವನನ್ನು ನೋಡುವುದು ಯಾರಿಗೂ ಸಾಧ್ಯವಾಗಿರಲಿಲ್ಲ, ಇವನಲ್ಲಿ ಎಲ್ಲರಿಗೂ ಭಯವಿತ್ತು, ದೂರದಿಂದ ಅವನನ್ನು ನೋಡುತ್ತಿದ್ದ ರು. ಇವನ ಸಾನ್ನಿಧ್ಯಕ್ಕೆ ಹೋಗುವುದೇ ಅಸಾಧ್ಯವಾಗಿತ್ತು. ಯಾವಾಗ್ಯೂ ಬಿಚ್ಚು ಕತ್ತಿ ವಹರೆಯವರ ಮಧ ದಲ್ಲಿ ಇರುತ್ತಿದ್ದನು, ಸಸಾಟ್ರಸ್ ನೊಡನೆ ಇವನನ್ನು ಹೋಲಿಸಿದೆನು, ಸಸಾಟಿಸ್ಟನು ಶಾಂತನಾಗಿದ್ದನು. ತಾಯಿಯ ಸುತ್ತ ಆ ಮಕ್ಕಳು ಪ್ರೀತಿಯಿಂದ ಸೇರುವಂತೆ ಇವನಲ್ಲಿ ಪ್ರಜೆಗಳು ಸೇರು ಆದ್ದರು, ಯಾವ ಕಾಲದಲ್ಲಿ ಯಾರು ಬೇಕಾದರೂ ಇವನ ಬಳಿಗೆ ಹೋಗುವು ಚಕ್ಕೆ ಅವಕಾಶವನ್ನು ಹೊಂದುತ್ತಿದ್ದರು. ಇವನು ಎಲ್ಲರಲ್ಲಿಯೂ ವಿಶ್ವಾಸವುಳ್ಳ ಸನಾಗಿದ್ದನು. " ನನ್ನು ಎಲ್ಲರೂ ವಿಶ್ವಾಸದಿಂದ ಕಾಣುತ್ತಿದ್ದರು. ಈಜಿಪ್ಟ್ ಹೇಶದಲ್ಲಿ ಇವನ ಸ್ನೇಹವೂ, ಪರಿಚಯವೂ ಇಲ್ಲದೆ ಇದ್ದ ವರೆ ಇರಲಿಲ್ಲ. ಪರ ಹೇಶೀಯರಿಗೂ ಕೂಡ ಇವನು ಭೇಟಿಯನ್ನು ಕೊಡುತ್ತಿದ್ದನು. ಅವರ ಯೋ ಗಕ್ಷೇಮುಗಳನ್ನು ಕೆತ್ತಿ, ಅವರ ಇಷ್ಟಾರ್ಥಗಳಲ್ಲಿ ಸಾಧ್ಯವಾದವುಗಳನ್ನೆಲ್ಲಾ ನೆರ ವೇರಿಸುತ್ತಿದ್ದನು ಈತನಿಗೆ ಬಿತ್ತು ಕತ್ತಿ ಪಹರೆಗಳು ಇರಲಿಲ್ಲ. ಈತನ ಸನ್ನಿ ಧಿಗೆ ಹೋಗಬೇಕೆಂದು ಅಪೇಕ್ಷಿಸಿದವರಿಗೆ ಯಾವ ಅಡ್ಡಿಯೂ ಇರಲಿಲ್ಲ, ಇವ ,ನಿಗೆ ಅಂಗರಕ್ಷಣೆಯ ಸೈನಗಳು ಇರಲಿಲ್ಲ. ಸಕಲ ಪ್ರಜೆಗಳೂ ಅವನಿಗೆ ಅಂಗ ರಕ್ಷಕರಾಗಿದ್ದರು. ಅವನಿಗೆ ಯಾರ ಭಯವೂ ಇರಲಿಲ್ಲ, ಯಾರಿಗೂ ಅವನ ಭಯವೂ ಇರಲಿಲ್ಲ, ಹೆಂಡತಿ ಮಕ್ಕಳಲ್ಲಿ ಎಷ್ಟು ಸೌಲಭ್ಯವುಳ್ಳವನಾಗಿದ್ದ ನೋ ಪ್ರಜೆಗಳಲ್ಲಿ ಅಷ್ಟು ಸೌಲಭ್ಯವುಳ್ಳವನಾಗಿದ್ದನು, ಇವನಿಗೂ, ಪಿಗ್ಮೇಲಿಯನ್ನ ನಿಗೂ ಯಾವ ಭಾಗದಲ್ಲಿಯೂ ಹೋಲಿಕೆಯಿರಲಿಲ್ಲ, ದುಷ್ಟವೇಶ್ಯವಾದ ಅರಮನೆ ಯಲ್ಲಿ ಅಂಗರಕ್ಷಕರಾದ ಪಹರೆಯವರಿಂದ ಆವರಿಸಲ್ಪಟ್ಟಿದ್ದಾಗ್ಯೂ, ಯಾವಾಗ ಯಾರು ತನ್ನನ್ನು ಸಂಹರಿಸುವರೋ ಎಂಬ ಭಯವು ಪಿಗ್ಮೇಲಿಯನ್ನನಿಗೆ ಇತ್ತು.