ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

90 ಇದ್ದ ವು. ಇವರ ಹಡಗುಗಳ ಧ್ವಜಸ್ತಂಭಗಳು ದೂರಕ್ಕೆ ವಿಶಾಲವಾದ ಕಾಡಿ ನಂತೆ ಕಾಣುತ್ತಿದ್ದವು. ಈ ಪಟ್ಟಣದ ಜನಗಳಲ್ಲಿ ಅನೇಕರು ವರ್ತಕರಾಗಿದ್ದ ರು. ಅಲ್ಲಿನ ಕೈಗಾರಿಕೆಗಳು ಅತ್ಯಂತ ಪ್ರಸಿದ್ಧವಾಗಿದ್ದವು ಸಾಮಾನ್ಯವಾದ ಮಜರ್ಲಿ ಬಟ್ಟೆಗಳು ಮೊದಲ್ಗೊ೦ಡು, ಶೋಭಾಯಮಾನವಾದ ಧಳಧಳಿಸುವ ಚಿತ್ರವಿಚಿತ್ರ ವಾದ ಅಂಚುಗಳಿಂದ ಪ್ರಜ್ವಲಿಸುವ ಪೀತಾಂಬರಗಳವರೆಗೂ ಅನೇಕ ವಿಧವಾದ ಬಟ್ಟೆಗಳು ಈ ಪಟ್ಟಣದಲ್ಲಿ ತಯಾರಾಗುತ್ತಿದ್ದವು. ಈ ಸಣ್ಣದಲ್ಲಿ ನೇಯಲ್ಪಟ್ಟ ಬಟ್ಟೆಗಳು ಎಲ್ಲಾ ಖಂಡಗಳಲ್ಲಿಯೂ, ಪ್ರಭುಗಳ ಅರಮನೆಗಳಲ್ಲಿಯೂ, ಉಪಪನ್ನ ರಾದವರ ಪ್ರಾಸಾದಗಳಲ್ಲಿಯೂ ಅನೇಕರಿಂದ ಧರಿಸಲ್ಪಡುತ್ತಿದ್ದವು, ಇಲ್ಲಿನ ವರ್ತಕರಲ್ಲಿ ಚಿನ್ನ, ಬೆಳ್ಳಿ ಮೊದಲಾದ ಲೋಹಗಳೂ, ರತ್ನ ಪಡಿಗಳೂ, ಸುಗಂಧ ದ್ರವ್ಯಗಳೂ, ನಾನಾವಿಧವಾದ ಪ್ರಾಣಿಗಳೂ ಎಲ್ಲೆಲ್ಲಿಯೂ ವಿಸ್ತಾರವಾಗಿ ದ್ದವು. ಇವುಗಳನ್ನೆಲ್ಲಾ ನೋಡಿ, ನನಗೆ ತುಂಬಾ ಸಂತೋಷವಾಯಿತು, ಈ ಪಟ್ಟ ಣದ ಬೀದಿಗಳನ್ನೂ, ಸಂದಿಗಳನ್ನೂ, ಸಮಸ್ತ ಭಾಗಗಳನ್ನೂ ಪರಿಶೀಲಿಸಿ ನೋಡಿ ದೆನು, ಸೋಮಾರಿಗಳು ಎಲ್ಲಿಯೂ ಇರಲಿಲ್ಲ. ಆಬಾಲವೃದ್ಧರೂ ಕೂಡ ಯಾವುದಾದರೂ ಒಂದು ಲಾಭಕರವಾದ ಕೆಲಸವನ್ನು ಮಾಡುತ್ತಿದ್ದರು, ಅನೇಕ ದೇಶಗಳಲ್ಲಿ ಜನಗಳು ಗುಂಪುಗುಂಪಾಗಿ ಸೇರುವುದುಂಟು, ಇಲ್ಲಿಯೂ ಗುಂಪು ಗಳನ್ನು ನೋಡಿದೆನು, ಒಗ್ಗಟ್ಟಾಗಿ ಸೇರಿ ಕೆಲಸ ಮಾಡತಕ್ಕವರ ಗುಂಪುಗಳು ನನ್ನ ನೇತ್ರ ಪಧಕ್ಕೆ ಬಿದ್ದ ವೇ ಹೊರತು, ಸೋಮಾರಿಗಳ ಗುಂಪು ನನ್ನ ದೃಷ್ಟಿಗೆ ಎಲ್ಲಿಯೂ ಬೀಳಲಿಲ್ಲ, ಹೆಂಗಸರೂ ಕೂಡ ಹತ್ತಿಯನ್ನು ನೂಲುತ್ತಾ, ಕಸೂತಿ ಮೊದಲಾದ ಕೆಲಸಗಳನ್ನು ಮಾಡುತ್ತಾ, ಬದಳ ಬೆಲೆಯುಳ್ಳ ಉಡಿಗೆಗಳನ್ನು ತಯಾರಾಡುತ್ತಾ ಇದ್ದ ರು. ನಾರ್‌ಬಲ್‌ನನ್ನು ಕುರಿತು, “ ಎಲೈ ನಾರ್ ಬಲ್‌ನೇ-ಈ ಪ್ರಪಂಚದ ಸಂಪತ್ತೆಲ್ಲಾ ಈ ಪಟ್ಟಣದಲ್ಲಿ ಸೇರಿರುವಂತೆ ತೋರು ತದೆ. ಇಷ್ಟು ಸಂಪತ್ತು ಈ ದೇಶದಲ್ಲಿ ಸೇರುವುದಕ್ಕೆ ಕಾರಣವೇನು ?” ಎಂದು ಕೇಳಿದೆನು. ಅದಕ್ಕೆ ಅವನು ಹೇಳಿದ್ದೇನೆಂದರೆ :- ಈ ಪಟ್ಟಣವು ಸಮುದ್ರದ ತೀರದಲ್ಲಿರುವುದು, ಹಡಗುಗಳು ಇಳಿಯ. ವುದಕ್ಕೂ, ಹೋಗುವುದಕ್ಕೂ ಆನುಕೂಲ್ಯಗಳಿರುವುವು. ಇದರಿಂದಲೇ ಈ ಫಿನಿ ಏರ್ಯರು ವರ್ತಕರಲ್ಲಿ ಮುಖಂಡರಾದರು, ಇತರ ದೇಶೀಯರು ಪ್ರಸಿದ್ಧಿಗೆ ಬರುವುದಕ್ಕೆ ಮುಂಚೆಯೇ ಈ ವಿನೀಷಿರ್ಯರು ಪ್ರಸಿದ್ಧಿಗೆ ಬಂದರು, ಸಂಚ ಭೂತಗಳು ದೇವತೆಗಳೆಂದು ಅನೇಕ ಜನಾಂಗದವರು ಅವುಗಳನ್ನು ಪೂಜಿಸುವು ದುಂಟು. ಈ ಫಿನೀಷಿರ್ಯರು ಈ ಭೂತವಸ್ತುಗಳನ್ನು ತಮ್ಮ ಇಷ್ಟಾರ್ಥಪ್ರಾ