ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

91 ಪ್ರಿಗೆ ಸಾಧಕಗಳಾಗುವಂತೆ ಮಾಡಿಕೊಂಡರು, ಸಮುದ್ರದ ಮೇಲೆ ನಂಚಾರ ಮಾಡುವುದು ಅಪಾಯಕಗವೆಂದು ಜನಗಳು ಭಾವಿಸುತ್ತಿದ್ದಾಗ, ಫಿನೀಷಿರ್ಯರು ಅದನ್ನು ವೇಗವಾದ ಅಶ್ವಗಳನ್ನು ಹೇಗೋ ಹಾಗೆ ಉಪಯೋಗಿಸುವುದಕ್ಕೆ ಉಪಕ್ರಮಿಸಿದರು. ಸಮುದ್ರದ ನೀರಿನಿಂದ ಯಂತ್ರಗಳನ್ನು ನಡೆಸುವುದಕ್ಕೆ ಉಪಕ್ರಮಿಸಿದರು, ನೀರಿನ ಆವಿಯ ಯಂತ್ರಗಳನ್ನು ನಡೆಸುವುದಕ್ಕೆ ಆರಂಭ ವಾಯಿತು. ನೀರಿನಿಂದ ನಿರ್ಮಾಣ ಮಾಡಲ್ಪಟ್ಟ ವಿದ್ಯುಚ್ಛಕ್ತಿಯು ಈಗ ಹೇಗೆ ಉಪಯೋಗಿಸಲ್ಪಡುತ್ತದೊ ಅದಕ್ಕೂ ಅವರು ಅಸ್ತಿಭಾರವನ್ನು ಹಾಕಿದರು. ಈಜಿಪ್ಟ್ ಮತ್ತು ಬ್ಯಾಬಿಲೋನಿರ್ಯ ಶಾಸ್ತ್ರಗಳನ್ನು ಅವರು ಅನುಷ್ಠಾನಕ್ಕೆ ತಂದುಕೊಂಡರು. ನಕ್ಷತ್ರಗಳ ಸಹಾಯದಿಂದ ಸಮುದ್ರದ ಮೇಲೆ ದೇಶಾಂತರ ಗಳಿಗೆ ದಾರಿಯನ್ನು ಗೊತ್ತು ಮಾಡಿದರು, ಸಮುದ್ರದಿಂದ ವಿಭಕ್ತವಾದ ಜನಾಂ ಗಗಳನ್ನೆಲ್ಲಾ ಪರಸ್ಪರ ಸಂಬಂಧವುಳ್ಳವರನ್ನಾಗಿ ಮಾಡಿದರು. ಈ ಜನಗಳು ಬಹಳ ಬುದ್ಧಿಶಾಲಿಗಳು, ವಿಶೇಷ ಸಾಹಸಿಗಳು, ಬೇಜಾರಿಲ್ಲದೆ ಕೆಲಸ ಮಾಡ ತಕ್ಕವರು.” ಕೈಗಾರಿಕೆಗಳಲ್ಲಿ ನಿಪುಣರು, ಯಾವುದರಲ್ಲಿಯೂ ಮಿತಿಮೀರಿ ನಡೆ ಯತಕ್ಕವರಲ್ಲ, ಇವರಲ್ಲಿ ದುಂದುಗಾರಿಕೆಯು ಇರುವುದಿಲ್ಲ, ಧರ್ಮಶಾಸ್ತ್ರಗ ಳಿಗೆ ಅನುಸಾರವಾಗಿ ನಡೆದುಕೊಳ್ಳುವುದರಲ್ಲಿ ಇವರು ವಿಶೇಷ ಆಸಕ್ತರು, ಐಕ ಮತ್ಸವು ಇವರಲ್ಲಿ ಮೂರ್ತಿಭವಿಸಿರುವುದು, ದೇಶಾಂತರದವರಲ್ಲಿ ಇವರಿಗೆ ಬಳಿಕೆಯು ವಿಶೇಷವಾಗಿರುವುದು, ಇವರು ಎಲ್ಲರಲ್ಲಿಯೂ ಸ್ನೇಹವುಳ್ಳವರಾಗಿ ಯೂ, ಮತ್ಯಾದೆಯುಳ್ಳವರಾಗಿಯೂ, ನಂಬಿಕೆಯುಳ್ಳವರಾಗಿಯೂ ಇರುತ್ತಾರೆ. ಎಲ್ಲರಿಗೂ ಉಪಕಾರವನ್ನು ಮಾಡಿ, ಅವರಿಂದ ಪ್ರತಿಫಲವಾಗಿ ಬರತಕ್ಕ ಲಾಭ ವನ್ನು ಇವರು ಹೊಂದುವರು. ಇವರ ಸಂಪತ್ತಿಗೆ ಇದೇ ಮುಖ್ಯ ಕಾರಣ. ಎಲ್ಲರಿಗೂ ನಷ್ಟವಾಗಿ ತಾವು ಬದುಕಬೇಕೆಂಬ ಅಭಿಲಾಷೆಯು ಇವರಿಗೆ ಲೇಶವೂ ಇರುವುದಿಲ್ಲ. ' ಸಕಲರೂ ಸುಖವಾಗಿರಲಿ, ಅವರ ಸಹಾಯದಿಂದ ನಾವೂ ಬದುಕೊಣ ' ಎಂಬ ಅಭಿಪ್ರಾಯವು ಇವರಲ್ಲಿ ನಿಸರ್ಗವಾಗಿರುವುದು, ಇದ ರಿಂದ ಎಲ್ಲೆಲ್ಲಿ ಹೋದಾಗ್ಯೂ, ಇವರನ್ನು ಎಲ್ಲರೂ ಸಮಿಾಪಕ್ಕೆ ಕರೆಯವರು. ಇವರಲ್ಲಿ ಯಾರಿಗೂ ಹೊಟ್ಟೆ ಕಿಚ್ಚು ಇರುವುದಿಲ್ಲ, ಎಲ್ಲರೂ ಬದುಕಲೆಂಬ ಅಭಿ ನಿವೇಶವು ಇವರಿಗೆ ಇರುವುದರಿಂದ, ಇವರನ್ನು ನೋಡಿ ಯಾರೂ ಹೊಟ್ಟೆ ಕಿಚ್ಚು ಪಡುವುದಿಲ್ಲ. ಇವರಲ್ಲಿ ಆಬಾಲವೃದ್ಧರೂ ಉದ್ಯೋಗಿಗಳಾಗಿರುವುದರಿಂದಲೂ, ತಾವು ಸಂಪಾದಿಸಿದ ಸಮಸ್ತವನ್ನೂ ಇವರು ಯಾರಿಗೂ ಅನ್ಯಾಯವಾಗದಂತ ಅವರವರ ಮೆಹನತ್ತಿಗನುಸಾರವಾಗಿ ಎಲ್ಲರೂ ಒಪ್ಪಿ ಹಂಚಿಕೊಳ್ಳುವುದರಿಂದಲೂ, ಯಾವ ಮನಸ್ತಾಪಕ್ಕೂ, ದ್ವೇಷಕ್ಕೂ ಇವರಲ್ಲಿ ಅವಕಾಶವೇ ಇರುವುದಿಲ್ಲ.