ವಿಷಯಕ್ಕೆ ಹೋಗು

ಪುಟ:ತೊಳೆದ ಮುತ್ತು.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಪ್ರಥಮ ದರ್ಶನದ ಪ್ರೇಮ

ಭಾಗೀರಥೀ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಬಿಕ್ಕದಾದ ನಗರವಿತ್ತು ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ ಮಾಲತೀ, ಪುನ್ನಾಗ, ಗುಲಾಬ, ಸೇವಂತಿ ಮುಂತಾದ ಸಕಲ ಪುಪ್ಪಜಾತಿಗಳಿಗೂ ವಿಲಕ್ಷಣವಾದ ಸುಗಂಧವಿರುವದರಿಂದ ಆ ನಗರಕ್ಕೆ ಕುಸುಮವುರವೆಂಬ ಹೆಸರು ಈ ವಿಶೇಷವಾದ ಗುಣಕ್ಕಾಗಿಯೇ ಚಿತ್ರರಧಾದಿ ಗಂಧರ್ವರು ಮೆಚ್ಚಿ ಆ ಸ್ಥಳದಲ್ಲಿ ಮನಸೋತು ವಿಹಾರ ಮಾಡುತ್ತಿದ್ದರೆಂದು ಗ್ರಾಮ ಪುರೋಹಿತರು ಹೇಳುವುದುಂಟು, ಆ ಕುಸನಪುರದ ಪೂರ್ವದಿಕ್ಕಿಗೆ ಗೋಪುರಾಕಾರದ ದಿನ್ನೆಯು ವಿವಿಧವಾದ ವೃಕ್ಷಲತೆಗಳಿಂದ ಆಚ್ಛಾದಿತವಾಗಿ ಅದೊಂದು ಪಚ್ಚ ಮಣಿಗಳ ಅಗಾಧವಾದ ರಾಶಿಯೇ ಆಗಿ ತೋರುತ್ತಿತ್ತು. ಆ ಮರಳಘಗಿರಿ ಬದಿಯ ಮೇಲಿರುವ ವಿಸ್ತಾರವಾದ ತಪ್ಪಲಿನ ಮೇಲೆ ಕಾರಜಾಪ್ರಸಾದ ಕಾಲೇಜದ ಶೋಭಾನುಯವಾದ ಮಂದಿರಗಳು ಉಳಿದು ತೋರಣ ಬಾಳೆಗಂಬಗಳಿಂದ ಅಲಂಕೃತವಾದ ಹೆದ್ದೇರಿನ ತುದಿಗಿರುವ ಪ್ರೇಕ್ಷಣೀಯವಾದ ಕಳಸಗಳ ಮೆರೆಯುತ್ತಿದ್ದವು ಕಾಲೇಜದ ಮಂದಿರ ಗಳಿಂದ ದಿನೈ ಯನ್ನಿಳಿದು ಕೆಳಗೆ ಬಗಬೇಕಾಗಿ ಮಲಸೂತ್ರದಾಕಾರವುಳ್ಳ ವಿಸ್ತಾರವಾದ ಬೀದಿಯಿದ್ದು, ಈ ಬೀದಿಗೆ ಕೆ೦ಪುಗಸಿನ ನೆಲಗಟ್ಟು ಮಾಡಿರುವದರಿಂದ ಆ ಪ್ರದೇಶಕ್ಕೆ ಅದೊಂದು ವಿಲಕ್ಷಣವಾದ ಅಲಂಕಾರವೇ ಆಗಿ ತೋರುತ್ತಿತ್ತು, ಕಾಲೇಜದ ಉನ್ನತವಾದ ಮಂದಿರಗಳಲ್ಲಿ ಇಂತು ನೋಡಿದರೆ ಆನೇಕ ಯೋಜನೆಗಳವರೆಗೆ ಹಬ್ಬಿ ಕೊಂಡಿರುವ ಭೂಶೋಭೆಯು ಜಗ್ಗನೆ ಹೊಳೆದು ತೋರಿ ಪ್ರೇಕ್ಷಕರ ಚಿತ್ರಗಳನ್ನು ಬಲವತ್ತರವಾಗಿ ಆಕರ್ಷಿಸಿ ಕೊಳ್ಳುತ್ತಿತ್ತು. ಎತ್ತ ನೋಡಿದ ನೆಲ್ಲು ಹುಲ್ಲುಗಳ ಗದ್ದೆಗಳ ಹೂದೋಟಗಳೂ ಹಣ್ಣು ಗಿಡಗಳ ತೋಪುಗಳೂ ಅವಿಚ್ಛಿನ್ನವಾಗಿ ಕಂಗೊಳಿಸುವವು. ಭವನಿತೆಯು ಉಟ್ಟಿರುವ ಮರಕತಮಯವಾದ ಮಹಾವಸ್ತ್ರದ ಮೇಲೆ ಚಿತ್ರ ವಿಚಿತ್ರವಾಗಿ ಭೆಗೆದಿರುವ ಕಶೀದೆಗಳಂತೆ ಅಲ್ಲಲ್ಲಿ ಮೆರೆಯುವ ಹಳ್ಳಿಪಳ್ಳಿ