ಪುಟ:ತೊಳೆದ ಮುತ್ತು.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸಂಪೂರ್ಣ-ಕಥೆಗಳು

ಪ್ರಸಾದ ಕಾಲೇಜದಲ್ಲಿ ಕಲಿಯಲಿಕ್ಕೆ ಬಂದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮದ ಮೇಲ್ವಿಚಾರಣೆಯನ್ನು ಆ ಸಾದ್ವಿಯರು ಮನಃಪೂರ್ವಕವಾಗಿ ಅಂಗೀಕರಿಸಿ ದ್ವಲ್ಲದ, ಆ ವಿದ್ಯಾರ್ಥಿನಿಯರ ವ್ಯಾಯಾಮ ಮನೋರಂಜನ ಸ್ನಾನ ಭೋಜ ನಾದಿಗಳಲ್ಲಿಯಾದರೂ ಅವರು ದಕ್ಷತೆಯಿಂದ ಲಕ್ಷವನ್ನಿಟ್ಟಿದ್ದರು. ಗೃಹಿಣ ಜನೋಡಿ ಶವಾದ ಕರ್ತವ್ಯ ಜಾಗ್ರತಿಯು ಅಲ್ಲಿಯ ವಿದ್ಯಾರ್ಥಿನಿಯರಲ್ಲಿ ಈಗ ಭತವಾಗಿರಬೇಕೆಂದು ನೆನಿಸಿ ಪ್ರತಿ ರವಿವಾರ ಇಬ್ಬರು ವಿದ್ಯಾರ್ಥಿನಿಯರನ್ನು ಜಾನಕೀದೇವಿಯರು ತಮ್ಮ ಮನೆಗೆ ಕರೆಸಿಕೊಂಡು ತಾವು ಮಾಡುತ್ತಿರುವ ಮನೆಕೆಲಸಗಳ ವ್ಯವಸ್ಥೆಯನ್ನೂ ಅತಿಧಿಗಳ ಆದರಾತಿಥ್ಯವನ್ನೂ, ಪತಿ ಕುಶೂಷೆಯ ಕ್ರಮವನ್ನೂ ನಿತ್ಯ ನಿಯಮ ದೇವತಾರಾಧನಗಳನ್ನೂ ಅವರಿಗೆ ತೋರಿಸಿಕೊಡುತ್ತಿದ್ದರು.

ಶಾರದಾ ಕಾಲೇಜದಲ್ಲಿ ಇಪ್ಪತ್ತು ಇಪ್ಪತ್ತೈದು ಜನ ಹೆಣ್ಣು ಮಕ್ಳಿ ದ್ದರು. ಅವರಲ್ಲಿ ರಮಾಸುಂದರಿಯೂ ಓರ್ವಳಾಗಿದ್ದಳು ರಿಯು ದಕ್ಷಿಣ ದೇಶದಲ್ಲಿರುವ ಕನಕಗಿರಿಯಂಬ ಊರಿನ ಜಾಗೀರದಾರನ ಮಗಳು: ಅವಳ ತಂದೆಯು ಸುಸಂಸ್ಕೃತವಾದ ಆಚಾರ ವಿಚಾರಗಳುಳ್ಳ ವನ ವಿದ್ಯಾ ಪಕ್ಷಪಾತಿಯ ದೇಶ ಸಂಚಾರ ಮಾಡಿದವನ ಆಗಿರುವದರಿಂದ ಅವನು ರಮಾಸುಂದರಿಗೆ ಉಚ್ಚ ಪ್ರತಿಯ ಶಿಕ್ಷಣವನ್ನು ಕೊಡಿಸುತ್ತಿರುವದು ಆಶ್ಚರ್ಯವಿಲ್ಲ. ಉತ್ತರ ದೇಶದಲ್ಲಿ ಸಂಚಾರ ಮಾಡುತ್ತಿರುವಾಗ ಅವನು ಶಾರದಾ ಕಾಲೇಜದ ಖ್ಯಾತಿಯನ್ನು ಕೇಳಿ ಅದನ್ನು ನೋಡಹೋಗಿ, ಅಲ್ಲಿ ರಾಮಕಿಶೋರ ಜಾನಕೀದೇಏಯರ ಪರಿಚಯವನ್ನು ಮಾಡಿಕೊಂಡು, ತನ್ನ ಪ್ರೀತಿಯ ಮಗಳಾದ ರಮಾಸುಂದರಿಯನ್ನು ಜಾನಕೀದೇವಿಯರ ಈಡಿ ಯಲ್ಲಿ ಹಾಕಿದಂತೆ ಮಾಡಿ ಅವಳನ್ನು ಶಾರದಾ ಕಾಲೇಜದಲ್ಲಿ ಕಲಿಯಲಿಕ್ಕೆ ಇದ್ದನು,

ರಮಾಸುಂದರಿಯ ನಿರುಪಮವದ ರೂಪವತಿಯ, ವಿನಯ ಶೀಲೆಯ, ಪಾಪಭೀರುವೂ, ಬುದ್ಧಿಮತಿಯು ಆಗಿರುವದರಿಂದ ಅವಳು ಜಾನಕೀದೇವಿಯ ಪ್ರೀತಿಪಾತ್ರಳಿಗಿದ್ದಳು, ಇಂದುಮತಿ ಬಾನರ್ಜಿ, ಕಂದಾವರೀ ತ್ರಿವೇದಿ ಹಾಗೂ ರಮಾಸುಂದರಿಯರು ಎಫ್, ಏ, ತರಗತಿ ಯಲ್ಲಿ ಕಲಿಯುತ್ತಿರುವದರಿಂದ ಅವರೆಲ್ಲರೂ ಒಟ್ಟಿಗೆ ಒಂದೇ ಕೋಣೆಯಲ್ಲಿ