ರಮಾಸುಂದರಿಯು ತನ್ನ ಭವರ್ತಿಮಾತೆಗೆ ಅಭಿವಚನವನ್ನಿತ್ತಳು.
"ಆಗಲಿ ಓದುಬರಹಕ್ಕಾದರೂ ಸಮಯಾಸಮಯದ ವಿಚಾರವಿರ ಬೇಕು, ಮಗುವೆ, ಗಡಿಯಾರವನ್ನು ನೋಡಬಾರದೆ ? ಸರಿರಾತ್ರಿ ಮಿರಿ ಹೋಗಿದೆ ನೋಡು, ಹಾಸಿಗೆಯನ್ನು ಕೂಡ ಬಿಚ್ಚಿಲ್ಲ” ಎಂದು ಜಾನಕೀ ದೇವಿಯರು ರಮಾಸುಂದರಿಯ ಮಂಚದ ಮೇಲಿದ್ದ ಹಾಸಿಗೆಯನ್ನು ಉರುಳಿ ಸಿದಳು.
"ಆಯೋ ಪಾಪನೆ ! ನನ್ನ ಕೈಗಳೇನು ಮುರಿದಿವೆಯೇನು ? ತಾವೇಕೆ ಹಾಸಿಗೆಯನ್ನು ಉರುಳಿಸಿದಿರಿ ? " ಎಂದು ರಮಾಸುಂದರಿಯು ಖಿನ್ನಳಾಗಿ ನುಡಿದಳು, ಮತ್ತೂಂದು ಮಾತಾಡದೆ ಮಲಗಿಬಿಡು ಇನ್ನು ಇಂದಿನಿಂದ ರಾತ್ರಿಯ ಹತ್ತು ಗಂಟೆಯ ತಿರುವಾಯದಲ್ಲಿ ನಿನ್ನ ಕೋಣೆಯಲ್ಲಿ ದೀಪವು ಉರಿದದ್ದು ಜರೆ ನಾನು ನಿನ್ನನ್ನು ಕ್ಷಮಿಸಿದವಳಲ್ಲ! ?” ಎಂದು ಹೇಳಿ ಜಾನಕೀ ದೇಏಯರು ಹೊರಟಳೋದರು. ರಮಾಸುಂದರಿಯಾದರೂ ದೀಪಕ್ಕೆ ಅಪ್ಪಣೆಕೊಟ್ಟು ಮಲಗಿಕೊಂಡಳು,
ಮರುದಿವಸ ರಮಾಸುಂದರಿಯು ನಿನ್ನೆ ರಾತ್ರಿ ನಡೆದ ಸಂಗತಿಯನ್ನೆಲ್ಲ ಇಂದುಮತಿ ಚಂದಾವಲಿಯರಿಗೆ ತಿಳಿಸಿ ಜಾನಕೀದೇಏಯರ ಶಿಷ್ಯ ವಾತ್ಸಲ್ಯ ವನ್ನು ಕಂಡಾಡಿದಳು.
"ಸರಿ ಸರಿ, ರಮಾ ಸುಂದರಿ, ನೀನು ಧುವರಾಯನಿಗೆ ಬರೆದ ಪತ್ರ ದಲ್ಲಿ ಲೇಖವನ್ನು ಕಳಿಸಿಕೊಡೆಂದು ಇಷ್ಟೆಯ ಬರೆದಿದ್ದೆಯೋ ಮತ್ತೇನಾ ದರೂ ಬರೆದಿದ್ದೆಯೋ ?"
"ತಲೆ ಇಲೆ ನಿನ್ನದು ! ಮತ್ತೇನು ಬರೆಯುತ್ತಾರೆ ? * ಎಂದು ಧನಾ ಸುಂದರಿಯು ಕ್ರುದ್ಧಳಾಗಿ ಕೇಳಿದಳು.
"ಇಲ್ಲವಾದರೆ ಇಲ್ಲವೆನ್ನು, ಕೊಪವೇಕೆ ? ” ಎಂದು ಚಂದ ಪಳಿಯು ನಕ್ಕು ನುಡಿದಳು.
"ಸುಸ್ವಭಾವದವರಾದ ಸ್ತ್ರೀ ಪುರುಷರೀರ್ವರನ್ನು ಒಟ್ಟಿಗೆ ಇದು ಬಹುದಂತೆ. ಆದರೆ ಸಮಾನವಯಸ್ಕರಾದ ಮಿಂಡೆಯರೀರ್ವರನ್ನು ಒಪ್ಪ ಟ್ಟಗೆ ಇಡಚಣಡದೆಂದು ಹಿರಿಯರಾಡುವದು ಅನುಭವಸಿದ್ಧವಾದ ಮಾತು"