ನುಡಿಗಳನ್ನು ನಿರೀಕ್ಷಿಸುವದೂ, ಅವನ ಹಿತಾಹಿಕಗಳ ವಿಷಯವಾಗಿ ವಿಚಾರ ಮಾಡುವದೂ ಸ್ತ್ರೀಯರಲ್ಲಿ ಪ್ರೇಮದ ಪ್ರಥಮ ಲಕ್ಷಣವೆಂದು ಅನುಭವಿಕರ ಅಭಿಪ್ರಾಯವು ಇದೊಂದೇಕೆ, ಮೊನ್ನೇದಿನ ಆ ಹೊಯ್ಮಾಲೆಯಾದ ಇಂದುಮತಿಯ ಪ್ರೇಮದ ಮಿಮಾಂಸೆಯನ್ನು ಕುರಿತು ಹರಟಿ ಕೊಚ್ಚುತ್ತಿರುವಾಗ ಅಂದದ್ದು : 'ರಮಾಸುಂದರಿ, ಪ್ರಿಯನಲ್ಲಿ ನಿನ್ನ ಪ್ರೇಮವಿನ್ನೂ ಫಲಿಸಿಲ್ಲವೆಂದು ತಿಳಿ; ಆದರೆ ನಿನ್ನ ತಂದೆಯವರು ನಿನ್ನನ್ನು ವಿಜಯಪುರದ ಧ್ರುವರಾಯನಿಗೆ ಕೊಡುವೆವೆಂದು ಸಂಕಲ್ಪ ಮಾಡಿದರೆ ಒಲ್ಲೆನೆನ್ನಲು ನೀನು ಸಿದ್ಧಳಾಗಿರುವೆಯೇನು ? ಒಲ್ಲೆನೆಂದು ಸಹಸಾ ಹೇಳುವದಾಗದಿದ್ದರೆ ಅಲ್ಲಿಯೇ ಪ್ರೇಮದ ಉತ್ಪತ್ತಿಯು.' ಆ ಗೈಯಾಳಿಯ ವಾದವು ಇನ್ನೂ ನನ್ನ ಎದೆಯಲ್ಲಿ ಕಟೆಯುತ್ತಲಿದೆ. ವಿಚಾರ ಮಾಡಿಮಾಡಿದ ಹಾಗೆ ಪ್ರೇಮದ ಬೇರು ಹೆಚ್ಚು ಹೆಚ್ಚಾಗಿ ತಳವೂರಿಕೊಂಡಂತೆ ಕಾಣುತ್ತದೆ?
"ಸಾಕು ಸಾಕು ! ಈ ವಿಚಾರವೇ ಬೇಡ" ಹೀಗೆ ಪ್ರತಿಜ್ಞೆ ಮಾಡಿಕೊಂಡು ರಮಾಸುಂದರಿಯು ಒಳ್ಳೆ ಆಧ್ಯತೆಯಿಂದ ತಲೆ ಎತ್ತಿ ಎಡೆಯಾಡಲಾರಂಭಿಸಿದಳು. ಒಳ್ಳೆ ವೇಗದಿಂದ ಭ್ರವಿಸುತಿರುವ ವಿಚಾರಚಕ್ರವನ್ನು ತಟ್ಟನೆ ತಡೆದು ನಿಲ್ಲಿಸುವನೆಂದರೆ ಯೋಗಿಯಾದವನಿಗೆ ಅಸಾಧ್ಯವು. ರಮಾಸುಂದರಿಯ ಮನಸ್ಸು ಮತ್ತೆ ಆ ವಿಚಾರಚಕ್ರದ ಗಿರಕಿಗೆ ಸಿಕ್ಕಿ ಸುತ್ತಿಕೊಂಡು ನಡೆಯಿತು.
"ಇಲ್ಲಿಗೆ ಧ್ರುವರಾಯನು ಬಂದ ಉದ್ದೇಶವೇನು ? ಲೇಖವನ್ನು ಮರಳಿ ತೆಗೆದುಕೊಳ್ಳಲಿಕ್ಕೆಯ ? ಹಾಗೆ ತೋರುವದಿಲ್ಲ. ಕಾಲೇಜದಲ್ಲಿ ನನಗೆ ಸಮಕ್ಷಮವಾಗಿ ಹಾಗೆ ಹೇಳಿದ್ದರೆ ನಾನು ಅದನ್ನು ಕಳಿಸಿಕೊಡುತ್ತಿದ್ದೆನು; ಇಲ್ಲವೆ, ಜವಾನನೊಡನೆ ಹೇಳಿ ಕಳಿಸಿದ್ದರೂ ಆಗುವಂತಿತ್ತು. ಈ ಸಂಸ್ಥೆಯ ಕಾರ್ಯಕ್ರಮವನ್ನು ಓದಿದವರಿಗೆ ಇಂದು ಈ ಕೋಣೆಯಲ್ಲಿ ನಾನೋರ್ವಳೇ ಇರುವೆನೆಂಬ ಮಾತು ಇಳಿಯದೆ ಇರದು. ಈ ಸಂಗತಿಯನ್ನರಿತು ಧ್ರುವರಾಯನು ಹೊತ್ತು ಸಾಧಿಸಿಕೊಂಡು ಬಂದಿದ್ದನೇನು ? ಇರಬಹುದು. ಆದರೆ ಆ ಸುಶೀಲನು ದುರ್ವಿಚಾರಪ್ರೇರಿತನಾಗಿ ಬರಲಿಲ್ಲ. ಅವನ ಆಚರಣವೇ ತಾನಾಗಿ ಹೇಳುತ್ತದಲ್ಲ ! ಹಾಗಾದರೆ ಆ ಅವಿವಾಹಿತನಾದ ತರುಣನು ಪ್ರೇಮಪರವಶನಾಗಿ ತನ್ನ ಮನೋಗತವನ್ನು ನನಗೆ ತಿಳಿ