ಪುಟ:ತೊಳೆದ ಮುತ್ತು.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಥನು ದರ್ಶನದ ಪ್ರೇಮ

೧೭

ಸಲು ಬಂದಿದ್ದನೇನು ?ಆಗಿದ್ದಿತು. ನಾನೋರ್ವಳೇ ಸರ್ವಗುಣ ಸಂಪನ್ನಯಾದ ಚದುರೆಯೇನು ?” ಈ ಪ್ರಶ್ನಕ್ಕೆ ಅವಳ ಆತ್ಮವಿಶ್ವಾಸದ ನಗೆಯ ಸಮರ್ಪಕವಾದ ಉತ್ತರವಾಗಿತ್ತು.

ಪ್ರಾತಃಸ್ತಾನ, ಅಭ್ಯಾಸ, ಭೋಜನ, ಕಾಲೇಜದಲ್ಲಿಯ ಶಿಕ್ಷಣ, ಸಖೀ ಜನರ ಸಹವಾಸಗಳು ಚಕ್ರನೇ ವಿಕ್ರಮದಿಂದ ನಡೆಯುತ್ತಿದ್ದರೂ ಧ್ರುವನ ನಿಶ್ಚಲವಾದ ಮೂರ್ತಿಯ ರವಾಸುಂದರಿಯ ಕಣ್ಣು ಮುಂದೆ ಕಟ್ಟಿಯೇ ಇರುತ್ತಿತ್ತು ಏಕಾಂತವಾಸದಲ್ಲಿದ್ದರಂತೂ ಆ ವಿಚಾರದಲ್ಲಿ ಅವಳು ಸವಗ್ರವಾಗಿ ಮುಳುಗಿಹೋಗುತ್ತಿದ್ದಳು. ಅದಕ್ಕಾಗಿ ಅವಳು ಸಹಸಾ ಏಕಾಕಿನಿಯಾಗಿರುತ್ತಲೇ ಇದ್ದಿಲ್ಲ ಒಂದು ದಿನ ಅವಳ ಈ ಸ್ಥಿತಿಯಲ್ಲಿ ಅಂಚೆವನು ಅವಳ ಕೈಯಲ್ಲಿ ಒಂದು ಪತ್ರ ವನ್ನು ತಂದುಕೊಟ್ಟನು. ಮೇಲ್ವಿಳಾಸವು ಧ್ರುವರಾಯನ ಹಸ್ತಾಕ್ಷರದ್ದು. ಹಶ್ರದ ಅಭಿಪ್ರಾಯವು ಆಗಲೆ ಅವಳಿಗೆ ಹುಟ್ಟಿನಲ್ಲಿ ಜೇನಿರುವದೆಂಬದನ್ನು ಹಿಂಡಿ ತೋರಿಸಲೆಬೇಕೆ ? ರಮಸುಂದರಿಯು ಆ ಪತ್ರವನ್ನು ಮೇಜಿನ ಮೇಲಿಟ್ಟು ಓದುವಷ್ಟು ಮನಃಸ್ವಾಸ್ಥವಾಗಲೆಂದು ಎರಡೂ ಕೈಗಳಿಂದ ಕಣ್ಣು ಮುಚ್ಚಿಕೊಂಡು ಒಳಿಕಾಗಿ ಉಸುಕಾಡಿ ಸುತ್ತಿ ಕುಳಿತುಕೊಂಡಳು.

ಅಂಥ ಪತ್ರವನ್ನು ಹಾಗೆ ಇಟ್ಟು ಕೊಂಡರೆ ಅದು ಸುಮ್ಮನೆ ಕುಳ್ಳಿರ ಕೊಡಿಸುವದೆ? ಎರಡು ಮೂರು ನಿಮಿಷಗಳಲ್ಲಿಯೇ ಅವಳು ಅದನ್ನು ಒಡೆದು ಓದಿದಳು. ಓದುವಾಗಲೆ ಅವಳ ಸರ್ವಾಭಿಗವೆಲ್ಲ ಬೆವತಿತು. ಅವಳ ಮುಖದಲ್ಲಿ ಒಮ್ಮೆ ದರ್ಷವೂ ಒಮ್ಮೆ ಮಂದಹಾಸವೂ ಒಮ್ಮೆ ಲಟ್ಟೆಯ ರಕ್ತಜೆಯ ಒಮ್ಮೆ ವಿಚಾರದ ಗಾಂಭೀರ್ಯವೂ ಕ್ರಮಕ್ರಮವಾಗಿಯ ಸಂಬಬಿತವಾಗಿಯೂ ಘೋರಿದವು, ಓದುವದಾದ ಕೂಡಲೆ ಆವಳು ಆ ಪತ್ರವನ್ನು ತನ್ನ ಉಡಿಯಲ್ಲಿಟ್ಟು ಕೊಂಡು, ಉಪವನದಲ್ಲಿ ಅಚ್ಚಾಡ ಹೋದಳು. ಅಕೋಳಿ, ಅವಸರದಲ್ಲಿ ಆ ಪತ್ರವು ಇಲ್ಲಿ ಜಾರಿ ಬಿದ್ದಿದೆಇದೇ ಸಮಯ ಕೊಳ್ಳಿರಿ.

ಪ್ರಿಯ ರಮಾಸುಂದರಿ,

ನನ್ನಲ್ಲಿ ಜನಿಸಿದ ಕೆಲವೊಂದು ಅಭಿಪ್ರಾಯವನ್ನು ನಿನಗೆ ನಿವೇದಿಸಲೆಂದು ಮೊನ್ನೆ ದಿನ ಬಂದಿದ್ದನು. ಆದರೆ ಆಗ ನನ್ನ ಮನಸ್ಸು ಯಾಕೋ