ಸಂಕೋಚಗೊಂಡಿದ್ದರಿಂದ ಹಾಗೆಯೇ ಹೊರಟುಹೋದೆನು ಪ್ರಾಯವು ಚತುರೆಯಾದ ನಿನಗೆ ಅವಶ್ಯವಾಗಿ ವಿದಿತವಾಗಿರಲಿಕ್ಕೆ ಬೇಕು. ಸಂದೇಹಕ್ಷೇದವಾಗದಿದ್ದಲ್ಲಿ ಈ ಪತ್ರದ ಮೊದಲನೆಯ ವಳಿಯಲ್ಲಿಯ ಸಂಬೋಧನವು ಸೂಚಕವಾಗಿರುವದು ನಾಳಿಗೆ ನಾನು ಮತ್ತೆ ನಿನ್ನ ಸನ್ನಿ ಧಾನಕ್ಕೆ ಬಂದು ನನ್ನ ಮನಸ್ಸನ್ನು ನಿನ್ನ ಮುಂದೆ ತೋಡಿಕೊಳ್ಳುವೆನು, ಇದು ನಾಳಿನ ಸಂದರ್ಶನದ ಪೂರ್ವಪೀಠಿಕೆಯು.
ಧ್ರುವರಾಯ
ಭ್ರಮಿಷ್ಟಳಂತೆ ರವಾಸುಂದರಿಯ ಉಪವನದಲ್ಲಿ ಆಸ್ತಿ ಅಡ್ಡಾಡಿದಳು. ಸ್ನಿಗ್ಧವಾದ ತರಚ್ಛಾಯೆಯಲ್ಲಿರುವ ಶಿಲುಶಲದಲ್ಲಿ ವಿಶ್ರಮಿಸಿಕೊಳ್ಳಬೇಕೆಂದು ಹೊರಟವಳು ಅದನ್ನು ಮರೆತು ಕಾರಂಜಿಯ ಪುಟಿಯು ಇರುವ ಸ್ಥಳಕ್ಕೆ ಬಂದಳು. "ಈ ಸ್ಥಳಕ್ಕಾದರೂ ಏನಾಗಿದೆ ? ” ಎಂದು ಸಮಾಧಾನ ಹೊಂದಿ ಆ ಸುಂದರಿಯು ಅಲ್ಲಿರುವ ಅಂದವಾದ ಚಿಕ್ಕ ಹೊಂಡದಲ್ಲಿ ಕೈ ಕಾಲು ಮೋರೆಗಳನ್ನು ತೊಳೆದು ಬಳೆಯಲ್ಲಿಯೇ ಇರುವ ಕಟ್ಟಿಯ ವೇಳೆ ಕುಳಿತು ವಿಚಾರ ನಡಿಸಿದಳು.
ಇದಕ್ಕೂ ವ್ಯಕ್ತವಾಗಿ ಅವರು ಇನ್ನೆಂತು ಬರೆಯಬೇಕು? ನಾಳಿಗೆ ಬಂದು ಎರತರಲ್ಲಿ ಒಂದು ಹೇಳಿದರೆ ಏನು ಹೇಳಲಿ ? ಅನುಮತಿಸಲೆ? ಅನುಮತಿಸಲು ನಾನು (ತಂತ್ರಳಲ್ಲ; ತಂದೆ ತಾಯಿಗಳು ಕೊಟ್ಟ ಮನೆಗೆ ಹೋಗತಕ್ಕವಳು, ಒಲ್ಲೆನೆಂದು ಹೇಳಲಿಕ್ಕಾದರೂ ನಾನೆಲ್ಲಿ ಸ್ವತಂತ್ರಳು? ಮನಸ್ಸು ಮೊದಲೇ ಅವರ ಸ್ವಾಧೀನವಾಗಿ ಹೋಗಿದೆ," ಎಂದು ವಿಚಾರಿಸುತ್ತೆ ರಮಾಸುಂದರಿಯು ಫಕ್ಕನೆ ಎದ್ದು ಪ್ರಫುಲ್ಲಿತವಾದ ದವನದ ದಳವನ್ನು ಚಿವುಟ ಮೂಸಿನೋಡಿ "ದವನದ ಸುಗಂಧವೇ ಇದು, ನನಗೆ ಮುಖಭ್ರಮವಿನ್ನೂ ಆಗಿಲ್ಲ” ಎಂದು ಒಳಿತಾಗಿ ನಕ್ಕು, ಮತ್ತೆ ನೋ ವಿಚಾರಸು ಅಡ್ಡಾಡಿ ಮತ್ತೆ ಮೊದಲಿನ ಸ್ಥಳದಲ್ಲಿ ಬಂದು ಕುಳಿತಳು. ಬ್ರಹ್ಮನುಕೂಲವಿದ್ದಂತೆ ಆದೀತು. ಆದರೆ ಇಂದಿಗೆ ನನ್ನ ವಿದ್ಯಾಭ್ಯಾಸಕ್ಕೆ ಕೃಷ್ಣಾರ್ಪಣವಂದಂತಾಯಿತು, ಗಡಿಯಾರದ ಅಂದೋಲನದಂತೆ ಏಚಾಳಗಳು ಸಂತತವಾಗಿ ನನ್ನ ತಲೆಯಲ್ಲಿ ಹೊಯ್ದಾಡುತ್ತಿರುವಾಗ ನಾನು ಓದುವದೇನು