ವಿಷಯಕ್ಕೆ ಹೋಗು

ಪುಟ:ತೊಳೆದ ಮುತ್ತು.pdf/೩೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

CH ಬೆಳ್ಳಿ-ಚಿಕ್ಕೆ ಮಾತ್ರ ಕೇಳಬೇಡಿರಿ. ಕುವರಬಾಯಿಯು ಚಹ ಉಪಹಾರಗಳನ್ನು ತರಿಸಿ ನಮ್ಮೆಲ್ಲರಿಗೆ ತೆಗೆದು ಕೊಳ್ಳ ಹೇಳಿದಳು. ಅದಾದ ಬಳಿಕ ನಾವೆಲ್ಲರೂ ರಥದಲ್ಲಿ ಕುಳಿತು ಸ ಭೇ ದಾರರ ಮನೆಗೆ ಬಂದವು ಬಂದ ಕೂಡಲೆ ಹುಲಿಮೀಸೆಯು ಗಂಟು ಕಟ್ಟಿಸಿ ಕೊಂಡು ರಾಜಧಾನಿಗೆ ಹೊರಡಲು ಸಿದ್ಧನಾಗಿ ನಿಂತುಕೊಂಡನು. ಭೋಜನ ತೀರಿಸಿಕೊಂಡು ಹೋಗಿರೆಂದು ಸುಭೇದಾರನು ಹೇಳಿಕೊಂಡರೂ ಕೇಳಲಿಲ್ಲ. ರೈಲಿನ ಸಮಯವೇ ಆಗಿತ್ತಾದ್ದರಿಂದ ಭೋಜನಕ್ಕೆ ಅವಕಾಶವಿರಲಿಲ್ಲ • ಬರುತ್ತೇನೆ ಸುಭೇದಾರ, ನಾಳಿನ ಶರ್ಯನ ದಿವಸ ನಾನಿಲ್ಲಿಗೆ ನಿಶ್ಚಯವಾಗಿ ಬರುವೆನು, ಬೆಳ್ಳಿ ಚಿಕ್ಕೆಯ ಹೆಸರು ಬಹಳ ಹೇಳುತ್ತಾರೆ. ಅದರ ಓಡಾಟವನ್ನು ನೋಡುವ ಕುತೂಹಲವು ನನಗಾಗಿದೆ ?” ಎಂದು ಹೇಳಿ ದವನೇ ಹುಲಿಮೀಸೆಯು ರಥದಲ್ಲಿ ಕುಳಿತನು ಬಸವನ ಹಿಂದೆ ಬಾಲ ವೆಂಬಂತೆ ನಾನೂ ಅವನೊಡನೆ ನಡೆದನು.

  1. f

ವಾತಾಪಿಪುರದ ಗುಡ್ಡದ ಓರೆಯಲ್ಲಿರುವ ಬಯಲಿನಲ್ಲಿ ಗಾಲಿಯು ಅಂಚಿನಂತೆ ವರ್ತೂಲಾಕಾರವಾಗಿ ಒಂದು ಬೀದಿಯನ್ನು ಮಾಡಿದ್ದರು. ಆ ಬೀದಿಯ ಸುತ್ತಲೂ ಕಣಗಟ್ಟಿ ಜನಜಾತ್ರೆ ನೆರೆದಿತ್ತು. ಬೀದಿಯ ಒಳ ಮಗ್ಗಲಿಗಿರುವ ಮಂಡಲಾಕಾಶವುಳ್ಳ ಪ್ರದೇಶದ ಮಧ್ಯಭಾಗದಲ್ಲಿ ನಾಲ್ಕಾರು ಭವ್ಯವಾದ ತಂಬುಗಳನ್ನು ಹೊಡೆದಿದ್ದರು. ಗರ್ಭ ಶ್ರೀಮಂತರಾದ ನರನಾರಿ ಯರು ಮನದುಬ್ಬಿನಿಂದ ತಂಬುಗಳ ಸುತ್ತಲೂ ಎಡೆಯಾಡುತ್ತಿದ್ದರು. ಬೀದಿಯ ಒಂದು ಮಗ್ಗಲಿಗೆ ಜನಸಂದಟ್ಟಣಿಯಿದ್ದರೆ ಈಚೆಯ ಮಗ್ಗಲು ಕಟ್ಟಿರುವ ಮಂಚಿಕೆಗಳ ಮೇಲೆ ಧನಸಂಪನ್ನರಾದ ಜನರು ಕುಳಿತುಕೊಂಡು ಇನ್ನು ಮೇಲೆ ನಡೆಯತಕ್ಕ ಶರತ್ತುಗಳನ್ನು ನೋಡತಕ್ಕವರು, ನೆಲದ ಮೇಲೆ ನಿಲ್ಲಲೊಲ್ಲದೆ ಸ್ಫೂರ್ತಿಯಿಂದ ಅಂತರಗಾಲಿಟ್ಟು ಕುಣಿಯುವ ಕುದುರೆ ಗಳನ್ನೇರಿಕೊಂಡು ರಾವುತರು ಶರತ್ತಿನ ಸಮಯನಿರೀಕ್ಷಣವನ್ನು ಬಹು ಕಷ್ಟ ದೊಂದಿಗೆ ಮಾಡುತ್ತಿದ್ದರು << ಅದೆ ನೋಡಿರಿ 1 ಗಾಳಿಯ ಮಿಂಡ, 4 ಅದು ಕಡಿದ ಬಂಟ ", < ಎಂಥ ಉತ್ತಮವಾದ ತೇಜಿಯಿದು ?, ( ಬೆಳ್ಳಿ ಚಿಕ್ಕೆ ಎಲ್ಲಿಯೂ ಕಾಣುವದಿಲ್ಲ' * ಹೀಗೆ ನೆರೆದವರಲ್ಲಿ ಅನೇಕರು ಅನೇಕವಾದ