ಪ್ರಣಯವನ್ನು ನೀನು ಸ್ವೀಕರಿಸುವಿಯಾ ?” ಎಂದು ಭಕ್ತನ ಗುಡಿಯಲ್ಲಿಯ ಮೂರ್ತಿಯ ಮುಂದೆ ಕೈಜೋಡಿಸಿಕೊಂಡು ನಿಂತಂತೆ ನಿಂತು ಧ್ರುವರಾಯನು ಬೆಸಗೊಂಡನು
ರಮಾಸುಂದರಿಗೆ ನಗೆ ತುಂಬಿ ಬಂದಿತು. ಅವಳು ತನ್ನ ಎರಡೂ ಕೈಗಳಿಂದ ಮೋರೆಯನ್ನು ಮುಚ್ಚಿಕೊಂಡು ನಗೆಯನ್ನು ಅಡಗಿಸಿಕೊಂಡಳು. ಧ್ರುವರಾಯನ ಪ್ರಾರ್ಥನೆಗೆ ಉತ್ತರವನ್ನು ಕೊಡುವ ಗೋಜಿಗೆ ಅವಳು ಹೋಗಲಿಲ್ಲ. ಮತ್ತೆ ಅವಳು ಗಾಂಭೀರ್ಯವನ್ನು ತಳೆದು, "ಶಿಕ್ಷಕರೆ, ನೀವು ಸಂಬೋಧನಗಳನ್ನು ಉಪಯೋಗಿಸುವಾಗ ವಿಚಾರ ತಿಳಿದು ಉಪಯೋಗಿಸಿರಿ ನಿಮ್ಮಂಧವರಿಗೆ ಅಬಲೆಯಾದ ನಾನು ಬುದ್ಧಿಯ ಮಾತು ಹೇಳಲು ವಿಷಾದಪಡುತ್ತೇನೆ. ”
ಧ್ರುವರಾಯನು ಚಟ್ಟನೆ ತನ್ನ ಆಸನವನ್ನು ಬಿಟ್ಟಿದ್ದು "ರಮಾ ಸುಂದರೀಬಾಯಿ, ನಿಮಗೆ ತೊಂದರೆ ಕೊಟ್ಟಿದ್ದಕ್ಕಾಗಿ ಕ್ಷಮಿಸಿರಿ ಪ್ರೇಮನಿರ್ಜಿತನಾದ ನಾನು ಮರ್ಯಾದೆಯನ್ನು ಉಲ್ಲಂಘಿಸಲಿಲ್ಲವೆಂದು ನಂಬುತ್ತೇನೆ. ಇರಲಿ, ನಾಳಿನಿಂದ ನಾನು. ಕಾಲೇಜದಲ್ಲಿರುವದರಿಂದ ನಿಮಗೆ ಸಂಕೋಚವಾಗುತ್ತಿದ್ದರೆ ಹಾಗೆ ಹೇಳಿರಿ, ನಾನು ಹೊರಟು ಹೋಗುತೇನೆ ” ಎಂದು ಸಂಕ್ಷುಬ್ಧನಾಗಿ ಕೇಳಿದನು
"ಹಾಗೆ ಮಾತ್ರ ಮಾಡಬೇಡಿರಿ ಹೀನಸತ್ವರ ವಿಚಾರವಿದು. ನೀವು ಇಲ್ಲಿ ಇರುವದರಿಂದ ನನ್ನ ಸಮಭಾವವು ಕೆಡಲಾರದು. ಅಷ್ಟು ಮಾನಸಿಕ ಧೈರ್ಯವು ನನ್ನಲ್ಲಿದೆ" ಎಂದು ಆ ಪ್ರೌಢೆಯು ತಾಳ್ಮೆಯಿಂದ ನಗುತ್ತೆ ನುಡಿದಳು
ಮತ್ತೊಂದು ಮಾತಾಡದೆ ಧ್ರುವರಾಯನು ಆ ಸ್ಥಳವನ್ನು ಬಿಟ್ಟು ರಭಸದಿಂದ ಹೊರಗೆ ನಡೆದನು. ಆ ಸುಂದರಾಂಗನ ಮೂರ್ತಿಯು ಕಣ್ಮರೆಯಾದ ಕೂಡಲೆ ದಮಾಸುಂದರಿಯ ಕಣ್ಣುಗಳೊಳಗಿಂದ ಅಶ್ರುಧಾರೆಗಳ ಜೀಕಳಿಗಳು ಪುಟಿದವು ಚಟ್ಟನೆ ಮಂಚದಿಂದಿಳಿದು ಅವಳ ಕಿಟಕಿಯಲ್ಲಿ ಬಂದು ನಿಂತು ತನ್ನ ಮನೋರಮಣನ ವ್ಯಾಪಾರಗಳನ್ನು ನೋಡುವ ಕುತೂ ಹಲವುಳ್ಳವಳಾಗಿ ನಿಂತುಕೊಂಡಳು ಅಶ್ವತ್ಥಾಮನ ಸೆಟಿಯಿಂದ ಎದೆಯುಬ್ಬಿಸಿಕೊಂಡು ಅಡ್ಡಾಡುವ ಆ ತರುಣನು, ಈ ಸಮಯದಲ್ಲಿ ಮುಪ್ಪಿನಿಂದ