ವನ್ನು ಕಲಿಸದಿದ್ದರೆ ನಾನು ಈ ಸಚಿತ್ರ ಭಾರತದ ಸಂಚಿಕೆಯನ್ನಾಗಲಿ, ಅದರಲ್ಲಿ ನೀನಿಟ್ಟಿರುವ ಈ ಪತ್ರವನ್ನಾಗಲಿ ಎತ್ತಿಕೊಂಡು ಹೋಗುತ್ತಿದ್ದಿಲ್ಲ ಸರಿ."
ಮುಂದೆ ಯಥಾಕಾಲವಾಗಿ ಯುನಿವರ್ಸಿಟಿಯ (ವಿಶ್ವವಿದ್ಯಾಲಯದ) ಪರೀಕ್ಷೆಗಳಾದವು. ಒಟ್ಟಿನಲ್ಲಿ ಶಾರದಾ ಪ್ರಸಾದ ಕಾಲೇಜದ ಬೆಳಕು ಬಹಳಾಯಿತು. ಎಮ್. ಏ ಪರೀಕ್ಷೆ ಪಾಸಾದವರಲ್ಲಿ ಧ್ರುವರಾಯನಿಗೆ ಪ್ರಥಮ ಸ್ಥಾನವು ಸ್ತ್ರೀ ವಿದ್ಯಾರ್ಥಿಗಳಲ್ಲಿ ನಾಲ್ವರು ಬೀ. ಏ. ಪಾಸಾಗಿದ್ದರು ಇಂದುಮತಿ, ಚಂದ್ರಾವಳಿ, ರಮಾಸುಂದರಿಯರು ಎಫ್. ಎ ದಲ್ಲಿ ಪಾಸಾದವರು ಅಂದು ಡಾಕ್ಟರ ಚೌಧರಿಯವರಿಗೆ ಪರಮಾನಂದವು ಜಾನಕೀ ದೇವಿಯರಾದರೂ ಪಾಸಾಗಿರುವ ತಮ್ಮ ಶಿಷ್ಯಯರನ್ನು ಕೂಡಿಸಿಕೊಂಡು ಸಂತೋಷಪ್ರದರ್ಶನವನ್ನು ಮಾಡಿದರು. ಧುವರಾಯನು ಸೊರಗಿದಂತೆ ತೋರಿದರೂ ಒಣಗಿದ ದ್ರಾಕ್ಷದಂತಿರುವ ಆವನ ಮುಖವು ಸ್ವಾದಿಷ್ಟವಾಗಿ ತೋರಿತು. ರಮಾಸುಂದರಿಯು ಮಾತ್ರ ಬಾಡಿದ ಕಲಿಕೆಯಂತ ವಿಷಾದಾಸ್ಪದಳಾಗಿ ಕಂಡಳು.
"ಹೀಗೇನು ? ಈ ಮಾತು ನನಗೆ ನೀನು ಮೊದಲೆ ಯಾಕೆ ತಿಳಿಸಲಿಲ್ಲ?" ಎಂದು ಜಾನಕೀದೇವಿಯರು ಇಂದುಮತಿಯನ್ನು ಕುರಿತು ಮಾತಾಡಿದರು.
"ಆ ಮಾತಿಗೆ ನೀವು ಒಪ್ಪುವಿರೋ ಕೋಪಿಸಿಕೊಳ್ಳುವಿರೋ ನನಗೆಂತು ತಿಳಿಯಬೇಕು? ಕೋಪಿಸಿಕೊಂಡರೆ ಅನರ್ಥವಾಗುವದೆಂದು ತಿಳಿದು ನಾನು ಹಲ್ಲಲ್ಲಿ ನಾಲಿಗೆಯನ್ನಿಟ್ಟುಕೊಂಡು ಸುಮ್ಮನಿದ್ದೆನು"
"ಹಾ: ! ಹಾ: ! ಹಾ: ! ರಮಾಸುಂದರಿಯು ಧ್ರುವರಾಯನ ಪ್ರಾಯಶ್ಚಿತ್ತವನ್ನು ಚನ್ನಾಗಿ ಮಾಡಿದಳು.” ಎಂದು ದೇವಿಯವರು ನಕ್ಕು ನುಡಿದರು.
"ಅಮ್ಮನವರೆ, ವಿನೋದವು ಹಾಗಿರಲಿ. ಇನ್ನು ಮೇಲೆ ಮಾಡುವ ಬಗೆಯೇನು? ರಮಾಸುಂದರಿಯು ಎರಡು ಬಗೆಯ ಚಿಂತೆಯಿಂದ ಸೊರಗುತ್ತಿರುವಳು ಕಾಣಿರಾ ?"
"ಓಹೋ, ವೆಂಕಟೇಶ್ವರನಿಗೆ ಕಲ್ಲಿಲೊಗೆದ ಪದ್ಮಾವತಿಯು ಈಗ ಆತನ ಪಾದಗಳನ್ನು ನಂಬಲು ಒಪ್ಪಿರುವಳೆ ? ”