ಈ ಪುಟವನ್ನು ಪ್ರಕಟಿಸಲಾಗಿದೆ
ಪ್ರಥಮ ದರ್ಶನದ ಪ್ರೇಮ
೨೭
ವಿದ್ಯಾಭ್ಯಾಸಕ್ಕೆ ಆತಂಕವೆ? ಜೋಯಿಸನ ಮಗನ ಮದುವೆಗೆ ಮುಹೂರ್ತ ತೆಗೆದು ಕೊಡುವವರನ್ನು ಹುಡುಕಿದ್ದುಂಟೆ ?
ಶಾರದಾ ಪ್ರಸಾದ ಕಾಲೇಜದ ಭಾವೀ ನಿಯಾಮಕರಾದ ಪ್ರೊಫೆಸರ್ ಧ್ರುವರಾವ್ ಹಾಗೂ
ರಮಾಸುಂದರೀದೇವಿಯರು ಡಾಕ್ಟರ್ ಚೌಧರಿ ಹಾಗೂ ಜಾನಕೀದೇವಿಯರಿಗೆ ಸಮಾನಾಧಿಕಾರಿಗಳಾಗಿದ್ದುಕೊಂಡು ಆ ವೃದ್ಧ ದಂಪತಿಗಳ ಮೇಲಿನ ಭಾರವನ್ನು ಸಾವಕಾಶವಾಗಿ ಇಳಿಸುತ್ತಲೂ ಉಚ್ಚ ಪ್ರತಿಯ ಶಿಕ್ಷಣದೊಂದಿಗೆ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉಚ್ಚ ಪ್ರತಿಯ ಧಾರ್ಮಿಕ ಹಾಗೂ ನೈತಿಕ ಬೋಧಾಮೃತವನ್ನು ನೀಡುತ್ತಲೂ ದೇಶದ ರಾಜಕೀಯ ಸಾಮಾಜಿಕ ಉನ್ನತಿಗಾಗಿ ಶ್ರಮಪಡುತ್ತಲೂ ಶಾರದಾ ಪ್ರಸಾದ ಕಾಲೇಜದ ಹೆಸರನ್ನ ಅಜರಾಮರವಾಗಿ ಮಾಡಿದರು
ಪ್ರಥಮ