ಮಹಾಮಹೋಪಾಧ್ಯಾಯರಾದ ವಿದ್ಯಾಧೀಶ ಪಂಡಿತರು ಸ್ನಾನ ತೀರಿಸಿಕೊಂಡು ಇನ್ನು ದೇವತಾರ್ಚನಕ್ಕೆ ಕೂಡತಕ್ಕವರು. ದೇವತಾಯತನವನ್ನು ಪ್ರವೇಶ ಮಾಡುತ್ತೆ ಮಾಡುತ್ತೆ ಅವರು "ಪ್ರದ್ಯುಮ್ನನೆಲ್ಲಿ ಕಾಣುವದಿಲ್ಲ ?" ಎಂದು ತಮ್ಮ ಪತ್ನಿಯಾದ ನರಸಮ್ಮನನ್ನು ಕೇಳಿದರು.
"ನಾನೇನು ಬಲ್ಲೆ? ಎಲ್ಲಿಗಾದರೂ ಮೆರೆಯಲಿಕ್ಕೆ ಹೋಗಿರುವನಾದೀತು," ಎಂದು ನರಸಮ್ಮನು ತಿರಸ್ಕಾರದಿಂದ ನುಡಿದಳು.
ಮಹಾಮಹೋಪಾಧ್ಯಾಯರ ಪೂಜೆಯು ಎರಡು ಗಳಿಗೆಯವರೆಗೆ ಒಳ್ಳೇ ವಿಧಾನಪೂರ್ವಕವಾಗಿ ನಡೆಯಿತು ಒಬ್ಬ ಶಿಷ್ಯನು ಗಂಧತೇಯತ್ತಿದ್ದನು, ಮತ್ತೊಬ್ಬನು ಸಾಲುದೀಪಗಳನ್ನು ಹಚ್ಚಿಡುತ್ತಿದ್ದನು. ಪಂಡಿತರು ದೇವರಿಗೆ ತುಲಸಿಯನ್ನು ಏರಿಸುವಾಗ ಮೂರನೆಯವನು ನಾಮಾವಳಿಯನ್ನು ಹೇಳುತ್ತಿದ್ದನು. ಜಾಗಟಿ, ಗಂಟೆ, ತಾಲಗಳ ಘನವಾದ ಸಪ್ಪಳದೊಂದಿಗೆ ದೇವರಿಗೆ ಮಂಗಳಾರತಿಯಾದ ಬಳಿಕ ವಿದ್ಯಾಧೀಶರು ಮತ್ತೆ "ಪ್ರದ್ಯುಮ್ನನೆಲ್ಲಿ?" ಎಂದು ಆಡಿಗೆಯವನನ್ನು ಕೇಳಿದರು.
"ಎಲ್ಲಿಗೆ ಹೋಗಿರುವರೋ ಕಾಣೆನು ಸ್ವಾಮಿ. ಪ್ರಹರ ಹೊತ್ತೀರಿದಾಗಿನಿಂದ ಪ್ರದ್ಯುಮ್ಮು ಪಂಡಿತರು ಮನೆಯಲ್ಲಿಯೇ ಇಲ್ಲ” ಎಂದು ಅಡಿಗೆಯನನು ಬಹು ವಿನೀತನಾಗಿ ಹೇಳಿದನು
'ಏನೇ? ” ಎಂದು ಹೆಂಡತಿಯನ್ನು ಕುರಿತು "ಏನೇ, ಪ್ರದ್ಯುಮ್ನನ ಸ್ನಾನವಾದರೂ ಆಗಿರುವದೇನು ?"
"ಏನಾಗಿದೆಯೋ, ಏನು ಬಿಟ್ಟಿದೆಯೋ ಇಪ್ಪತ್ತು ವರ್ಷದ ಟೊಣಪನಾದ ನಿಮ್ಮ ಮಗನನ್ನು ಯಾರೂ ಓಡಿಸಿಕೊಂಡು ಹೋಗುವದಿಲ್ಲ ಕಂಡಿರಾ! ಯಾಕೆ ಹಾಗೆ ಸೊಲ್ಲಿಗೊಮ್ಮೆ ಪ್ರದ್ಯುಮ್ನ ಪ್ರದ್ಯುಮ್ನನೆಂದು ಕೂಗುವದು?” ಎಂದು ಪ್ರದ್ಯುಮ್ನನ ಮಲತಾಯಿಯಾದ ನರಸಮ್ಮನು ಕ್ರುದ್ಭಳಾಗಿ ನುಡಿದಳು.
ಪಂಡಿತರು ಸುಮ್ಮನಾದರು. ನೈವೇದ್ಯ ವೈಶ್ವದೇವಗಳಾದ ಬಳಿಕ