ಪುಟ:ದಕ್ಷಕನ್ಯಾ .djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೭ M) ದ ಕ ಕ ನಾ. ಬಂದಿಲ್ಲ. ಇದನ್ನು ಚೆನ್ನಾಗಿ ಪರಿಶೀಲಿಸಿದ ಬಳಿಕ, ನಿಮ್ಮಲ್ಲಿ ಹೇಳ ಬೇಕೆಂದು ಸುಮ್ಮನಿದ್ದೆನು. ರಾಧಾನಾಧ-ಅಹುದಹುದು ! ಈಗ ನಮಗಾಗಿರುವ ಸಂಶಯವೂ ಇದೇ ! ಆದರೆ, ನಿನ್ನ ತಮ್ಮನ ದೋಷಗಳನ್ನು ನಿನ್ನಲ್ಲಿಯೇ ಹೇಳ ಬಾರದೆಂದು ಸುಮ್ಮನಿದ್ದೆನು. ಸುಕನ್ಯಾ ತಮ್ಮಲ್ಲಿ ಈ ಭೇದಭಾವನೆಗೆ ಕಾರಣವಾದರೂ ಯಾವುದು ? ನನ್ನ ಚಿತ್ತವೃತ್ತಿಯು ತಮ್ಮ ಚಿತ್ತವೃತ್ತಿಗೆ ಭೇದಿಸಿದ್ದರೆ, ನಮ್ಮ ದಾಂಪತ್ಯಕ್ಕೆ ಫಲವೇನಾದ ಹಾಗಾಯಿತು ? ಈ ಬಗೆಯ ಲೋಭ ಮೋಹಗಳಿಗೆ ನಾನು ಅಧೀನಳಾಗುವ ಪಕ್ಷದಲ್ಲಿ, ನ್ಯಾಯ ಮೂರಿಯಾಗಿರುವ ನಿಮಗೆ, ನಾನು ಸಹಧರ್ಮಿಣಿಯೆನ್ನಿ ಸಬಲ್ಲೆನೆ? ಇನ್ನು ಮುಂದೆ ಈ ಬಗೆಯ ಸಂಶಯವನ್ನು ಬಿಟ್ಟು ಕೊಟ್ಟು, ನನ್ನಲ್ಲಿ ಭರವಸೆಯಿಡಬೇಕು, ಇದನ್ನು ನಾನು ಇಷ್ಟಕ್ಕೆ ಬಿಡುವೆ ನೆಂದು ತಿಳಿಯಬಾರದು, ಧರ್ಮವನ್ನು ತಪ್ಪಿದವರು, ಹೊಟ್ಟೆ ಯಲ್ಲಿ ಹುಟ್ಟಿದ ಮಕ್ಕಳಾಗಿರಲಿ, ಒಡಹುಟ್ಟಿದವರಾಗಿರಲಿ, ಕಡೆಗೆ ಹೆತ್ತ ತಂದೆತಾಯಿಯರೇ ಆಗಿರಲಿ-ಯಾರಾಗಿದ್ದರೂ ಅವರು ತ್ಯಾಜ್ಯರೇ ಸರಿ, ಅಂತವರಲ್ಲಿ ಅನುಕಂಪವು ಹೇಗೂ ಸಲ್ಲದು. ಅದು ಹಾಗಿರಲಿ ; ವಿಧರ್ಮಿಗಳ ಸೊಕ್ಕು ಮುರಿಯುವುದರಲ್ಲಿ ನಿಸ್ಸಮನೆ ಸಿರುವ ನಮ್ಮ ಕುಮಾರನಿಗೇಕೆ ಇದನ್ನು ತಿಳಿಸಿಲ್ಲ ? ರಾಧಾನಾಧ-ಅವನಿಗೆ ತಿಳಿಯದುದಲ್ಲ, ಅವನೇ ಇಲ್ಲಿಗೆ ಈಗ ನಾಲ್ಕು ದಿನಗಳ ಕೆಳಗೆ ಬಂದಿದ್ದು, ಜಮಾನ್ದಾರರನ್ನು ಕಂಡು, ಸುನಂ ದೆಯ ಜೀವಿತವೃತ್ತಾಂತವನ್ನು ಹೇಳಿ ಹೋದನು. ಸುಕನ್ಯಾ-ಆತುರದಿಂದ-• ಏನು ? ಇಲ್ಲಿಗೆ ಬಂದಿದ್ದನೇ ? ನನ್ನನ್ನೇಕೆ ನೋಡಲಿಲ್ಲ ?