ಪುಟ:ದಕ್ಷಕನ್ಯಾ .djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನ್ಯಾ ರ್೮ ನಾನು ಜಡನಂತಾಗಿ ಹೋಗಿರುವೆನು. ಇದರ ಅರ್ಧವನ್ನು ಗ್ರಹಿ ಸಲಿಕ್ಕಾದರೂ ನನ್ನ ಮಿದುಳಿಗೆ ರಸವಿಲ್ಲವೆಂದು ಕಾಣುತ್ತಿದೆ. ನೀನೇ ಓದಿಹೇಳಿದರೆ, ತಿಳಿದುಕೊಳ್ಳುವೆನು.' ದಳವಾಯಿ-ಆಗಬಹುದೆಂದು ಕಾಗದವನ್ನು ತೆಗೆದುಕೊಂಡು, ಕೆಳಗೆ ವಿವರಿಸುವಂತೆ ಓದಿದನು: - ನಮ್ಮನ್ನು ಕಂಡುಹಿಡಿಯಬೇಕೆಂದು ಮಹಾಪ್ರಯತ್ನದಲ್ಲಿರುವ ಸರ್ಕಾರದವರ ಕಣ್ಣಿಗೆ ಮಣ್ಣೆರಚಿ, ಉದ್ದೇಶಕ್ಕೊಳಪಟ್ಟ ಜೀವರತ್ನ ವನ್ನು ಅಪಹರಿಸಿದೆವು. ಇನ್ನೂ ಉಳಿದಿರುವ ಸಂಕಲ್ಪವನ್ನಾದರೂ ಈಡೇರಿಸಿಕೊಳ್ಳದಿರಲಾರೆವು. ನಮ್ಮನ್ನು ಹಿಡಿಯಬೇಕೆಂದು ಮಾಡುವ ಕಾರುಗಳಾವುವೂ ನಮಗೆ ಗಣನಾರ್ಹವಾಗಿಲ್ಲವೆಂದೂ, ಸಿಂಹ ಶಾರ್ದೂಲಾದಿ ಕ್ರೂರಮೃಗ ಸಂಕೀರ್ಣವಾದ ನಮ್ಮ ದುರ್ಗಮೂಲವನ್ನು ಕಂಡುಹಿಡಿಯಬೇ ಕೆಂಬ ದುರಾಶೆಯು, ಈ ಕಲ್ಪದಲ್ಲಿ ಫಲಕಾರಿಯಾಗದೆಂದೂ ಇದುಂದ ಚೆನ್ನಾಗಿ ತಿಳಿದಿರಲಿ 1 ? ಬಹದ್ಗುರ-ಖತಿಯಿಂದ “ ಅಯ್ಯಾ ! ನಮ್ಮ ಪ್ರಯತ್ನವು ಹೆಚ್ಚಿದಂ ತೆಲ್ಲಾ ಅವರ ಪುಂಡಾಟವೂ ಹೆಚ್ಚುತ್ತಿದೆಯೆಂದರೆ, ಹೇಳಿ ಕೇಳು ವುದೇನು ? ದಳವಾಯಿ-ರಾವಬಹದ್ದುರ್‌ ! ಪ್ರಜೆಗಳ ಸುಖ, ಮಾನ, ಧನಗಳನ್ನು ಕಾಪಾಡುವುದಕ್ಕಾಗಿ ಗೊತ್ತಾಗಿರುವವರೇ ವಿಚಾರಶೂನ್ಯತೆಯಿಂದ ದುರಾಶೆಯಲ್ಲಿ ಬಿದ್ದರೆ, ಹೇಗಾಗಬೇಕು ? ಬಹದುರ-ಆತುರದಿಂದ-' ಏಕೆ ? ಪೊಲೀಸು ಇಲಾಖೆಯವರ ಕೆಲಸ, ಗಳು ತೃಪ್ತಿಕರವಾಗಿಲ್ಲವೆ ? ದಳವಾಯಿ ಇಲಾಖೆಯನ್ನೇ ನಿಂದಿಸುವಂತಿಲ್ಲವಾದರೂ, ಕ್ಷುದ್ರ ಜನರ ದ್ರೋಹಚಿಂತನೆಗಳಿಂದ ಅಪವಾದವೇನೋ ತಪ್ಪುವಂತಿಲ್ಲ. ಬಹದ್ದು-ಹಾಗೆಂದರೆ, ಅಭಿಪ್ರಾಯವೇನು ?