ಪುಟ:ದಕ್ಷಕನ್ಯಾ .djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೦. ಸ ಹಿ ತ್ಯ ಷಿ ಣಿ ದಳವಾಯಿ-ಮತ್ತೇನೂ ಅಲ್ಲ ; ನಿಮ್ಮ ಮೈದುನರ ಕೈ ಕೆಳಗಿನವರನ್ನು ಕುರಿತು ಹೇಳುವ ಮಾತು. ಬಹದ್ಗುರ-ನಿಜ ; ನನಗೂ ಅದೇ ಸಂಶಯವಾಗಿದೆ. ಆದರೆ, ಈಗಲೇ - ಅವರನ್ನು ಕೆಲಸದಿಂದ ಬಿಡಿಸಿ, ಬೇರೆಯವರನ್ನು ಗೊತ್ತು ಮಾಡ ಬಾರದೋ ? ದಳವಾಯಿ-ಹೇಗಾದೀತು ? ಸಕಾರಣವಾಗಿ ಕೆಲಸಮಾಡಬೇಕಲ್ಲದೆ, ಕಾರಣವಿಲ್ಲದೆ ಮಾಡಬಾರದು. ಈಗವರ ತಪ್ಪಿತವೇನೆಂಬುದೇ ಹೊರಪಡುವಂತಿಲ್ಲವಾದುದರಿಂದ, ಆ ಮಾತನ್ನು ಎತ್ತುವುದೂ ಸರಿಯಾಗಿಲ್ಲ. ಹಾಗೂ ಒಂದುವೇಳೆ, ಇವರನ್ನು ಕೆಲಸದಿಂದ ಬಡಿಸಿದೆವಾದರೆ, ಅವರ ಅತ್ಯಾಚಾರಕ್ಕೆ ಅನುಕೂಲವೇ ಆಗುವುದ ರಲ್ಲಿ ಸಂಶಯವಿಲ್ಲ. ಬಹದ್ದುರ-ನಿಜ ! ಸ್ವಚ್ಚಂದಗಾಮಿಗಳನ್ನು ತಕ್ಕ ಷ್ಟೂ ಬಂಧನದಲ್ಲಿರಿಸ ಬೇಕಾದುದು ಅಗತ್ಯವೇ. ಆದರೆ, ಈಗ ನಾವೇನನ್ನು ಮಾಡ ಬಹುದು ? ದಳವಾಯಿ-ವಿದ್ರೋಹಿಗಳನ್ನು ದುರ್ಗಸಹಿತವಾಗಿ ಹಿಡಿಯಲು ಪ್ರಯ ತೃ ಪಡಬೇಕು. ಬಹುರ-ಅಹುದು ; ಆದರೆ, ಅಂತಹ ಸಾಹಸಪರನಾದ ಚಾಣಾಕ್ಷ ನೊಬ್ಬನಾಗಬೇಕಷ್ಟೆ ? ದಳವಾಯಿ-ಕಿರುನಗೆಯಿಂದ ' ಚಾಣಾಕ್ಷನು ಗೋಚರನಾಗಿಯೇ ಇರುವನು. ನಾವು ಹೇಳದೆಯೇ ಈ ಕೆಲಸವನ್ನು ಮಾಡಲು, ಅವನು ಸಂಕಲ್ಪಿಸಿರಬಹುದೆಂದೂ ಹೇಳಬಲ್ಲೆನು.' ದಳವಾಯಿಸಿಂಗನ ಮಾತು ಮುಗಿಯುವುದರೊಳಗಾಗಿಯೇ ಬಾಡಿದ ಮುಖದಿಂದ ನಿಟ್ಟುಸಿರಿಡುತ್ತಿದ್ದ ಜಮಾದಾರ ವಾಸುದೇವ ರಾಯನು (ಈತನೇ ನಮ್ಮ ಪಾಠಕರಿಗೆ ಪೂರ್ವಪರಿಚಿತನಾದ ತರು