ಪುಟ:ದಕ್ಷಕನ್ಯಾ .djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೧ ದ ಕ ಕ ನ್ಯಾ ಣನು) ಮನೆಗೆ ಬಂದುದನ್ನು ತಿಳಿದ ರಾವ್ ಬಹದ್ದುರನು ಕಿರು ನಗೆಯಿಂದ, ' ವಾಸುದೇವಾ ! ಇತ್ತ ಬಾ, ' ಎಂದು ಕೂಗಿದನು. ವಾಸುದೇವನು ಬಹದ್ದುರನ ಕೂಗಿಗೆ ಮತ್ತೂ ಎವರ್ಣನಾಗಿ ನಡುಗಿದನು ; ಆದರೂ, ಅನಿರ್ವಾಹಕ್ಕಾಗಿ ಬಂದು ತಲೆಬಾಗಿ ನಿಂತನು. ಸುಹೃದರೇ ! ಸಹವಾಸದ ಬಲವಾದರೂ ಎಂತಹುದು ? ಸತ್ಯ, ಧರ್ಮ, ದಯೆ, ಭಕ್ತಿ, ಶ್ರದ್ಧೆಗಳಿ೦ದ ಅಭ್ಯುದಿತನಾಗುತ್ತಿದ್ದ ಈ ತರುಣ ವಿದ್ಯಾವಂತನು, ದುಸ್ಸಹವಾಸ ಬಲದಿಂದ, ಎಷ್ಟು ಬೇಗ ಈಯವಸ್ಥೆಗೆ ಗುರಿಯಾದನು ! ಇನ್ನಿ ವನು ಸನ್ಮಾರ್ಗವನ್ನು ಹಿಡಿಯಬೇಕೆಂದರೆ ಸಾಧ್ಯವೆ ? ವಿದ್ಯಾ ವಿನಯಾ ದಿಗಳಿಂದ ಕಾಂತಿಪೂರ್ಣವಾಗಿದ್ದ ಈತನ ಮುಖವು ಈ ಬಗೆಯಲ್ಲಿ ಕಪ್ಪಾಗಿ ಹೋಗಿರುವುದನ್ನು ನೋಡಿ, ಯಾರಿಂದ ಸಹಿಸಲಾದೀತು ? ರಾವ್ ಬಹದ್ದು ರನ ಇದಿರಿಗೆ ನಿಂತಿರುವ ಈತನನ್ನು ನೋಡಿದರೆ, ನ್ಯಾಯಾಧೀಶನಮುಂದೆ ನಿಲ್ಲಿಸಲ್ಪಟ್ಟ ಅಪರಾಧಿಯು ಮರಣದಂಡನೆಗೆ ಗುರಿಯಾಗುವ ವೇಳೆಯಲ್ಲಿ, ಅವನ ಮುಖವು ಹೇಗಾಗುವುದೋ ಹಾಗೆಯೇ ಇವನಿಗೂ ಆಗುವಂತೆ ಕಾಣುತ್ತಿದೆ ! ಹೀಗಾದುದೇ ತರಿಂದ ? ಇವನ ದುರಾಶೆಯ ಫಲದಿಂದಲ್ಲವೆ ! ಹಾಗಾದರೆ, ಕರ್ಮಫಲವನ್ನು ಅನುಭವಿಸಲೇಬೇಕು. ಆ ಕರ್ಮವು ನಮಗೆ ಮಾತ್ರ ಎಚ್ಚರವನ್ನು ೦ಟುಮಾಡುತ್ತಿರಲಿ. ಬಹದ್ಗುರ-ವಾಸುದೇವ ! ಈಗ ನಾಲ್ಕಾರು ದಿನಗಳಿಂದ ನೀನು ಕಾಣಿಸಿ ಕೊಳ್ಳಲಿಲ್ಲವೇಕೆ ? ವಾಸುದೇವ-ಈಗ ಒಂದು ವಾರದ ಕೆಳಗೆ ಇ೯ಸ್ಪೆಕ್ಟರು, ದಂಗೆಕೋರ ರನ್ನು ಕಂಡುಹಿಡಿಯಬೇಕೆಂದು ಕಟ್ಟು ಮಾಡಿದರು. ಅದು ನನ್ನ ಪಾಲಿಗೆ ಬಂದ ಕೆಲಸವಾದುದರಿಂದ, ಅದರಲ್ಲಿ ನಿರತನಾ ಗಿದ್ದೆನು.