ಪುಟ:ದಕ್ಷಕನ್ಯಾ .djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೨ ಸ ತಿ ಹಿ ತ ಷಿ ಣಿ ಬಹದ್ದುರ-ಹಾಗಾದರೆ, ಏಷ್ಟು ಮಂದಿಯನ್ನು ಹಿಡಿದಿರುವೆ ? ವಾಸುದೇವ-ಇನ್ನೂ ಸಿಕ್ಕಿರುವುದಿಲ್ಲ ; ಸಿಕ್ಕುವ ಸ್ಥಿತಿಯಲ್ಲಿ ಇಲ್ಲ. ಬಹದ್ಗುರ-ಮೊನ್ನೆಯಿಂದ ಮನೆಗೇಕೆ ಬರಲಿಲ್ಲ ? ವಾಸುದೇವ....ಮೊನ್ನೆ ಯ ಸಾಯಂಕಾಲ ಪೊಲೀಸುತಾಣಕ್ಕೆ (Police - Station) ಹೋಗಿದ್ದ ವೇಳೆಯಲ್ಲಿ ಗೊಲ್ಲರ ಪಾಳ್ಯದಬಳಿ, ಕೊಲೆ ಸುಲಿಗೆಗಳಾದುವೆಂದು ವರ್ತಮಾನಬರಲು, ಅಲ್ಲಿಗೆ ಹೋಗಿದ್ದೆನು. ಬಹದ್ದು--ಏನಾಯಿತು ? ವಾಸುದೇವ-ಜಮಾನ್ದಾರರ ಪತ್ನಿ ಯು ಬರುತ್ತಿದ್ದ ವೇಳೆಯಲ್ಲಿ, ಕಳ್ಳರು ದಾರಿಗಟ್ಟಿ ಹುಡುಗಿಯನ್ನು ಕದ್ದೊಯ್ದರೆಂದೂ, ಆ ವೇಳೆಯಲ್ಲಿ ಯೇ ಹಿಂದಿನಿಂದ ಬಂದ ರಾಜಭಟರು ಹೊಡೆದ ಗುಂಡಿನೇಟಿನಿಂದ ಕಳ್ಳರಲ್ಲಿ ಕೆಲವರು ಸತ್ತು ಹೋದರೆಂದೂ, ಜಾನ್ದಾರರ ಪತ್ನಿ ಪುತ್ರರು ಬಂದರೆಂದೂ ತಿಳಿದುಬಂದಿದೆ. ದಳವಾಯಿ-ನಿನಗೆ ಹೇಗೆ ತಿಳಿಯಿತು ? ವಾಸುದೇವ-ನಾನು ಸುದ್ದಿಯನ್ನು ಕೇಳಿದೊಡನೆಯೇ ನಿಲ್ಲದೆ ಹೋಗಿ ನೋಡಿದೆನು, ಈ ಅತ್ಯಾಚಾರವು ನಡೆದುಹೋಗಿದ್ದುದರಿಂದ ಅಲ್ಲಲ್ಲಿ ಹುಡಕುತ, ಒಬ್ಬ ದಾರಿಗನನ್ನು ವಿಚಾರಿಸಿ ತಿಳಿದೆನು, ಕಳ್ಳರು ಮಾತ್ರ ಸಿಕ್ಕಲಿಲ್ಲ. ದಳವಾಯಿ-ಪ್ರಯತ್ನ ಪರರಿಗೆ ಅಸಾಧ್ಯವಾವುದೂ ಇರಲಾರದು ; ಹ ಗೂ ಧೈರ್ಯ-ಸೈರ್ಯ-ಸಾಹಸಾದಿಗಳೂ, ಸತ್ಯನಿಷ್ಠೆಯ ಇದ್ದರೆ ವಿಫಲವೆಂದಿಗೂ ಆಗದು. ಇರಲಿ. ವಾಸುದೇವ ತಾವು ಹೇಳುವುದು ಯುಕ್ತವೇ ಆಗಿರಬಹುದಾದರೂ ವಿಧರ್ಮಿಗಳು ಸಾಮಾನ್ಯರಲ್ಲವೆಂದೂ, ಚತುರೋಪಾಯ ವಿಶಾರ ದರೆಂದೂ ನನಗೆ ತೋರುತ್ತಿದೆ.