ಪುಟ:ದಕ್ಷಕನ್ಯಾ .djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

TV ಸ ತಿ ಹಿ ತ ಷಿ ಣಿ ದರೆ, ಅದು ಲಕ್ಷ್ಮಿದೇವಿಯ ವಿಲಾಸಸ್ಥಾನವೆಂದೇ ಹೇಳಬಹುದು, ಮನೆ ಯಮುಂದಿನ ವಿಸ್ತಾರವಾದ ಹಜಾರದಲ್ಲಿ ಒಂದೆಡೆಯಲ್ಲಿ ಬಿಲ್ಲೆ ಯವರೂ, ಮತ್ತೊಂದೆಡೆಯಲ್ಲಿ ಆಯುಧಪಾಣಿಗಳಾದ ವೀರಭಟರೂ ಕುಳಿತು, ಎಚ್ಚ ರಿಕೆಯಿಂದ ಕಾದಿದ್ದರು. ಮನೆಯು, ಅಂತರ್ಬಹಿಪ್ರದೇಶಗಳಲ್ಲಿಯೂ ಅರಸುತನದವರ ನಿವಾಸದಂತೆಯೇ, ಅಲಂಕೃತವಾಗಿ ಕಂಗೊಳಿಸುತ್ತಿದ್ದಿತು. ಇದಕ್ಕೂ ಹೆಚ್ಚಾಗಿ ವಿವರಿಸುತ್ತ ಕುಳಿತರೆ, ಪಾರಕರ ಬೇಸರಕ್ಕೆ ಕಾರಣ ವಾದೀತೆಂಬ ಭೀತಿಯಿಂದ ಹೆಚ್ಚಿನ ವಿಚಾರಕ್ಕೆ ಕೈಹಾಕದೆ ಬಿಟ್ಟಿರುವೆವು. ನಮ್ಮ ವಾಚಕರ ಚಿರಪರಿಚಿತನಾದ ದಳವಾಯಿಸಿಂಗನು, ಅಶ್ಯಾ ರೋಹಿಯಾಗಿ ಬಂದು, ಮೇಲೆವಿವರಿಸಲ್ಪಟ್ಟಿರುವ ರಮಾವಿಲಾಸಭವನದ ಮುಂದಿಳಿದು, ಹಾಲಿನಲ್ಲಿ ಬಂದು ನಿಂತನು. ಕುಳಿತಿದ್ದವರೆಲ್ಲರೂ ಎದ್ದು ವಿನಯದಿಂದ ಪ್ರಣಾಮಮಾಡಿದರು. ದಳವಾಯಿಸಿಂಗನು ಭಟರನ್ನು ಕುರಿತು “ ಅಯ್ಯಾ! ಸರ್ದಾರ್‌ಧರ್ಮಪಾಲರ ಸಮಯವೇನು ? ಮಲಗಿರು ವರೋ ?” ಎಂದು ಕೇಳಿದನು. ಭಟರು' ಸ್ವಾಮಿ ' ಸರ್ದಾರರು ಇಷ್ಟು ಬೇಗ ಮಲಗುವ ಪದ್ದತಿಯಿಲ್ಲ. ಆದರೂ, ಒಂಭತ್ತು ಗಂಟೆಯಾದ ಬಳಿಕ ಮನೆಯೊಳಗೆ, ಯಾರ ನ್ಯೂ ಬಿಡಕೂಡದೆಂದು ಕಟ್ಟಪ್ಪಣೆ ಮಾಡಿರುವರು. ದಳವಾಯಿ ಸಂತೋಷ ! ಈ ದಂಡವನ್ನು ತೆಗೆದುಕೊಂಡು ಹೋಗಿ ಸರದಾರರಿಗೆ ತೋರಿಸಿ, ಅವರ ಅಪ್ಪಣೆಯೇನೆಂಬುದನ್ನು ತಿಳಿದು ಬಂದು ಹೇಳು.' ಎಂದು ಕೈಯಲ್ಲಿದ್ದ ಬೆಳ್ಳಿಯ ಕಟ್ಟಿನಿಂದ ಹೊಳೆ ಯುತ್ತಿದ್ದ ಕೋಲನ್ನು ಭಟನ ಕೈಗಿತ್ತನು. ಭಟನು ದಂಡಸಹಿತ ನಾಗಿ ಭವನದೊಳಹೊಕ್ಕು, ಸ್ವಲ್ಪ ಹೊತ್ತು ಕಳೆದಬಳಿಕ, ಮತ್ತೆ ಬಂದು ದಳವಾಯಸಿಂಗನಿಗೆ ಕೋಲನ್ನೊಪ್ಪಿಸಿ, ವಿನಯದಿಂದ ಹೇಳಿದನು- ' ಸ್ವಾಮಿಾ! ಸರ್ದಾರರು ಕಲಾಶಾಲೆಯಲ್ಲಿರುವರು ; ಅಲ್ಲಿಗೆ ದಯೆಯಿಟ್ಟು ಬರಬೇಕೆಂದು ಹೇಳಿರುವರು.'