ಪುಟ:ದಕ್ಷಕನ್ಯಾ .djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

KL ಸ ತಿ ಹಿ ತ ಷಿ ಣಿ ಗಿದ್ದ ತನ್ನ ಹೆಂಡತಿಯನ್ನೂ ಬಿಟ್ಟು, ಪರಲೋಕಕ್ಕೆ ತೆರಳಿದನು. ಪತಿ ವಿಯೋಗವಾದ ಬಳಿಕ, ಸತೀಮಣಿಯಾದ ಕುಮಾರನ ತಾಯಿಯ ಪತಿ ಯ ಗತಿಯನ್ನೇ ಅನುಸರಿಸಿದಳು. ಅಂದಿನಿಂದೀಚೆಗೆ ಕುಮಾರನ ದೇಹ ಪೋಷಣೆಗೆ ಆತನ ಸೋದರತ್ತೆಯೇ ನಿಲ್ಲಬೇಕಾಯಿತು. - ಕುಮಾರನು, ತಂದೆಯ ಮರಣಕಾಲದಲ್ಲಿ ಬಿ.ಎ., ತರಗತಿಯಲ್ಲಿ ವ್ಯಾಸಂಗಿಸುತ್ತಿದ್ದನು. ತಂದೆಯು ಸತ್ಯ ಒಂದೆರಡು ವರ್ಷಗಳೊಳಗಾ ಗಿಯೇ ಬಿ. ಎ., ಪ್ರಶಸ್ತಿಯನ್ನು ತಾಳಿ, ತನ್ನ ವಿದ್ಯಾಗೌರವಕ್ಕೆ ತಕ್ಕಂತೆ * ವಿದ್ಯಾನಿಧಿ ' ಎಂಬ ಬಿರುದನ್ನು ಪಡೆದನು. ಆ ತರುವಾಯದಲ್ಲಿಯೂ, ಮಾತುಲನಾದ ರಾಧಾನಾಧನ ಸತ್ಪರಾಮರ್ಶದಂತೆಯೂ, ತನ್ನ ತಂದೆಯ ಕುಲದ ಗೌರವಕ್ಕೆ ತಕ್ಕಂತೆಯ ದಂಡನೀತಿಶಾಸ್ತ್ರಗಳಲ್ಲಿ ತಕ್ಕಷ್ಟು ಪರಿ ಶ್ರಮವನ್ನು ಹೊಂದಿದನು ಅಲ್ಲದೆ, ತನ್ನ ಕಲ್ಪನಾಶಕ್ತಿ ಬಲದಿಂದ ಇತರ ಯಂತ್ರನಿರ್ಮಾಣ, ಕೈಗಾರಿಕೆ, ಕುಶಲವಿದ್ಯೆಗಳನ್ನು ಪರಿಶೋಧಿಸುತ್ತ ಬಂದನು. ಸ್ವಾಭಿಮಾನ, ಸ್ವಾವಲಂಬನ, ಸ್ವಾತಂತ್ರ, ಸ್ವದೇಶಭಕ್ತಿ, ಸ್ವಕರ್ತವ್ಯನಿಷ್ಠೆಗಳೆಂಬ ಶಕ್ತಿ ಸಂಚಕಗಳೂ ಇವನಲ್ಲಿ ಚೆನ್ನಾಗಿ ನೆಲೆಗೊಂ ಡಿರುವುದರಿಂದ, ದೇಶಕ್ಕೊಭೆಗೆ ಕಾರಣಭೂತರಾದ ವಿಧರ್ಮಿಗಳ ಹುಟ್ಟ ನ್ನು ಅಡಗಿಸಿ, ದೇಶಸೇವೆಯನ್ನು ಮಾಡಬೇಕೆಂಬ ಸಂಕಲ್ಪವು, ಇವನನ್ನು ಸೇರಿರುವುದೂ ಸಹಜವಲ್ಲವೇ ? ಹೆಚ್ಚೇಕೆ, ಕುಮಾರನು ತನ್ನ ಪ್ರತಿಭಾ ವಿಶೇ ಷಗಳಿಂದ ದಿನಂಪ್ರತಿಯಲ್ಲಿಯೂ ಅಹಿತವಾತವನ್ನು ಕಂಡುಹಿಡಿದು ರಾಜಾ ಜ್ಞೆಗೆ ಗುರಿಪಡಿಸುತ್ತಿದ್ದುದಲ್ಲದೆ ತನ್ನ ಈ ತರುಣವಯಸ್ಸಿಗಾಗಲೇ ನಾಲ್ಕಾರು ದರೋಡೆಗುಂಪಿನವರನ್ನೂ ಹಿಡಿದುದರಿಂದ, ಈತನ ಸಾಹಸಕಾ ರಕ್ಕೆ ಸುಪ್ರೀತನಾದ ಶ್ರೀನಗರದರಸನು, ಈತನಿಗೆ ' ಸರದಾರ ಧರ್ಮ ವಾಲ' ಎಂಬ ಬಿರುದನ್ನು ಕೊಟ್ಟು, ಈತನನ್ನು ಇನ್ನೂರು ಮಂದಿ ವೀರ ಭಟರಿಗೆ ಅಧಿಕಾರಿಯನ್ನಾಗಿಮಾಡಿದ್ದನು. ಇದರಿಂದ ಕುಮಾರನು ಮತ್ತೂ ಉತ್ಸಾಹದೊಂದಿ, ತನ್ನ ಕರ್ತವ್ಯವನ್ನು ದಕ್ಷತೆಯಿಂದ ನಡೆಯಿಸುತಿರುವನು.