ಪುಟ:ದಕ್ಷಕನ್ಯಾ .djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೭ ದ ಕ ಕ ನ್ಯಾ ಈಗ ಈತನಿಗೆ 21ನೆಯ ವರ್ಷವು ನಡೆಯುತ್ತಿರುವುದು, 25 ವರ್ಷವಾಗು ವುದಕ್ಕೆ ಮೊದಲು ವಿವಾಹಮಾಡಿಕೊಳ್ಳಲಾರೆನೆಂದು ಹೇಳಿ, ಬಂದ ಬಂದ ಕನೈಯರನ್ನೆಲ್ಲಾ ಕಡೆಗಣಿಸಿ, ಈತನಿನ್ನೂ ಅವಿವಾಹಿತನಾಗಿಯೇ (ಬ್ರಹ್ಮಚಾರಿ) ಇರುವನು. ಇರಲಿ, ಇನ್ನು ಇಲ್ಲಿಗೆ ಸಾಕುಮಾಡುವ. - ಸರದಾರನ ಅಭಿನಂದನಕ್ಕೆ ಕುಮಾರನು, ಕಿರುನಗೆಯಿಂದ ತಲೆದೂಗಿ ಹೇಳಿದನು- ಸಿಂಗವೇ ! ತಮ್ಮ ಅನುಗ್ರಹವುಂಟಾದರೆ, ಕೊರತೆ ಯೋನು ? ಅದರಲಿ; ಎಲ್ಲರೂ ಕುಶಲಿಗಳಷ್ಟೆ ?' ದಳವಾಯಿ-ಎಲ್ಲರೂ ಕುಶಲಿಗಳೇ ಆಗಿರುವರು; ಜಮೀನ್ದಾರರ ಮನೋರಾಜ್ಯದಲ್ಲಿ ಮಾತ್ರ ಕುಶಲತೆಗೆ ಕೊರತೆ. ಶ್ರೀದತ್ತ-ಹೇಗೆ ? ಪುತ್ರನೊಡನೆ ಜಮೀನ್ದಾರರ ಜೇಷ್ಟ ಪತ್ನಿ ಯು ಬರಲಿಲ್ಲವೇ ? ದಳವಾಯಿ-ಭಗವದನುಗ್ರಹದಿಂದ ಬಂದು ಸೇರಿದಳು ಆದರೇನು ? ಅವರ ಪ್ರೇಮಪುತ್ರಿಯು ಕಳ್ಳರಪಾಲಾದಳು ! ಶ್ರೀದತ್ತ-ಹುಡುಗಿಯು ಮಾತ್ರ ಕಳುವಾಗಿ, ಉಳಿದವರು ಹೇಗೆ ಬಂದು ಸೇರಿದರು ? ದಳವಾಯಿ-ಹುಡಗನೂ ದುರಾತ್ಮರ ಕೈಸೇರಿಹೋಗಿದ್ದನು. ಆದರೆ, ಆಪದ್ಬಂಧುವಾಗಿ ಬಂದು ಸಂರಕ್ಷಿಸಿದ ಒಬ್ಬ ಮಹನೀಯನ ದಯೆಯಿಂದ ಮತ್ತೆ ಸಿಕ್ಕಿದನು. ಶ್ರೀದತ್ತ ಕಿರುನಗೆಯಿಂದ ಹಾಗೆಯೇ ಹುಡುಗಿಯೂ ದೊರೆಯ ಬಹುದು, ಇರಲಿ ; ನೀವು ಬಂದುದೇನು ?' ದಳವಾಯಿ ಕಿಸೆಯಲ್ಲಿರಿಸಿಕೊಂಡಿದ್ದ ಕಾಗದವನ್ನು ತೆಗೆದು ಮುಂದಿಟ್ಟು “ ಕುಮಾರ ! ಇದು ನಿನ್ನೆ ಯು ಅಂಚೆಯಲ್ಲಿ ಬಂದಿತು. ಇದರಿಂ ದಲೇ ವಿಚಾರವನ್ನು ತಿಳಿಯಬೇಕು.'