ಪುಟ:ದಕ್ಷಕನ್ಯಾ .djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೮ ಸ ತಿ ಹಿ ತ ಷಿ ಣಿ ಶ್ರೀದತ್ತ-ಕಾಗದವನ್ನು ಸ್ವಲ್ಪಮಟ್ಟಿಗೆ ನೋಡಿ, ಗರ್ವದಿಂದ ನಗುತ್ತೆ

  • ಕಿಸೆಯಲ್ಲಿರಿಸಿಕೊಂಡನು. ದಳವಾಯಿ-ಇದಕ್ಕೆ ಪ್ರತೀಕಾರವೇನು ? ಶ್ರೀದತ್ತ-ನೊಣವನ್ನು ಹಿಡಿದು ತೀಡಲಿಕ್ಕೆ ಗಾಣವನ್ನೂ ಹುಡುಕ

ಬೇಕೋ ? ದಳವಾಯಿ-ಗಾಣದ ಸವಿಯು ಧರ್ಮಪಾಲನಲ್ಲಲ್ಲದೆ, ಮತ್ತಾರಲ್ಲಿಯೂ ಇರಲಾರದು ! ಶ್ರೀದತ್ತ-ಸಿಂಗಜೀ ! ನೀವು ನನಗೆ ಬಾಲ್ಯವಿದ್ಯಾ ಗುರುಗಳಾಗಿಯೂ, ನಮ್ಮ ಮಾತು ನಿಗೆ ಬಾಲ್ಯ ಸಖರಾಗಿಯೂ ಇರುವಿರಾದುದರಿಂದ, ಪೂಜ್ಯರಾದ ನಿಮ್ಮಲ್ಲಿ ನಾನು ಯಾವ ವಿಚಾರವನ್ನೂ ಮರೆಮಾಜ ಲಾರೆನು, ಸುನಂದಾದೇವಿಯು ಹೊರಟ ಸುದ್ದಿಯನ್ನೂ, ಗೊಲ್ಲರ ಪಾಳ್ಯದಲ್ಲಿ ಅವರನ್ನು ಕೊಲ್ಲಬೇಕೆಂದು ನಡೆಯಿಸಿದ್ದ ಕುಹಕ ವನ್ನೂ ತಿಳಿದ ನಾನು, ನನ್ನವರೊಡನೆ ವಿಳಂಬಿಸದೆ ಹೊರಟು, ಅಲ್ಲಿಗೆ ಹೋದೆನು. ಆದರೆ, ಕಾಲವಿಶೇಷದಿಂದ ಅಷ್ಟರಲ್ಲಿಯೇ ವಿಂದೆಯು ಅಪಹೃತಳಾಗಿದ್ದುದರಿಂದ, ಆಗಲೇ ಸಿಕ್ಕಲಿಲ್ಲ ಮೋಹ ನಕುಮಾರನನ್ನು ಮತ್ತೆ ಲಭಿಸುವಂತೆ ಮಾಡಿದ ಭಗವತ್ಸೆಯು ಚಿರಸ್ಮರಣೀಯವಾಗಿದೆ ! ಮತ್ತೂ ಹೇಳುವೆನು ಕೇಳಿರಿ, ಎಂದುನಾನು ವಿದ್ರೋಹಿಮತಖಂಡನ ವ್ರತದಲ್ಲಿ ದೀಕ್ಷೆಯನ್ನು ವಹಿಸಿನಿಂ ದೆನೋ, ಎಂದು-ಜಮಾನ್ದಾರರ ಪತ್ನಿಗೆ ನಾನು ವಾಗ್ದಾನವಿ ತೆನೋ ಅಂದೇ-ಆ ಘಾತುಕರು ಮೃತ್ಯು ಸಧದಲ್ಲಿ ಬಿದ್ದಂತಾಯಿ ತೆಂದು ತಿಳಿಯಬೇಕು. ಆಗಲೇ ಅವರಲ್ಲಿ ಆರೇಳುಮಂದಿ ನನ್ನ ಕೋಪಕ್ಕೆ ಬಲಿಯಾಗಿರುವರು. ಇನ್ನು ಮುಂದೆ ಹೇಳುವುದೇನು ! 'ಆದರೆ, ಈ ವಿಚಾರವನ್ನು ನಮ್ಮ ಮಾತುಲನಿಗೆ ವಿವರವಾಗಿ ಹೇಳ ಬಾರದು, ಏಕೆಂಬುದನ್ನು ನಾನು ಹೇಳಬೇಕಾದುದಿಲ್ಲವಷ್ಟೆ ?