ಪುಟ:ದಕ್ಷಕನ್ಯಾ .djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ೧೦೧ ದ ಕ ಕ ನ್ಯಾ ಕಳ್ಳರಿಗೂ ಬಹು ಅನುಕೂಲತೆಯನ್ನು ಕಲ್ಪಿಸಿದ್ದಿ ತು, ಇಲ್ಲಿ ಕಳ್ಳಕಾಕರ ಅವಾಂತರವು ಅಷ್ಟಿಷ್ಟೆಂದು ಹೇಳಲಾಗುತ್ತಿರಲಿಲ್ಲ, ರಾತ್ರಿಯವೇಳೆಯ ಲ್ಲಿಯಾಗಲೀ, ಹಗಲುವೇಳೆಯಲ್ಲಿಯಾಗಲೀ ಈ ದಾರಿಯಲ್ಲಿ ಯಾರೂ ಬಬ್ಬಿಬ್ಬರಂತೆ ಪ್ರಯಾಣಮಾಡಿ ಬರುತ್ತಿರಲಿಲ್ಲ, ದುರ್ಗಾಪುರಕ್ಕೂ ವಿಷಹರಪುರಕ್ಕೂ ನಡುವೆ ಇರತಕ್ಕ ಗೊಲ್ಲರಪಾಳ್ಯದ ಕಳ್ಳರಕಾಡೇ ಇದಾಗಿರುವುದು. ಇಂತಹ ಪ್ರದೇಶದಲ್ಲಿ, ಹಾಗೂ ಈ ವೇಳೆಯಲ್ಲಿ ಏಕಾಂಗಿಯಾದ ದಾರಿಗನೊಬ್ಬನು, ಗೊಲ್ಲರ ಪಾಳ್ಯಕ್ಕೆ ಅಭಿಮುಖನಾಗಿ ಬರುತ್ತಿದ್ದನು. ದಾರಿಗನು ಒಂದು ಬಿಳಿಯ ಬಟ್ಟೆಯನ್ನು ಟ್ಟು, ಮೊಣಕಾಲವರೆಗೂ ಬೀಳು ವ ಕರಿಯಬಣ್ಣದ ನಿಲುವಂಗಿಯನ್ನು ತೊಟ್ಟು, ತಲೆಗೆ ಕೆಂಬಣ್ಣದ ಪಾರು ಸುತ್ತಿ, ಕೈಯಲ್ಲಿ ದಪ್ಪ ದೊಣ್ಣೆಯನ್ನು ಹಿಡಿದು ಒಬ್ಬ ಗಣ್ಯನಾದ ರೈತ ನಂತೆ ಕಾಣುತ್ತಿದ್ದನು, ಈತನು ಅತ್ತಿತ್ತ ನೋಡದೆ, ನೆಲವನ್ನೇ ನೋಡುತ್ತ ಮಂದಗಮನದಿಂದ ನಡೆಯುತ್ತಿದ್ದನು. ಬರುತ್ತಿದ್ದಾತನಿಗೆ ಮುಂದೆ ವಿಸ್ತಾ ರವಾದ ಕಳ್ಳರ ಚೌಕವು ಕಂಡುಬಂದಿತು. ದಾರಿಗನು, ಅವಸರದಿಂದ ಬಂದು ಚೌಕದ ಮಧ್ಯಪ್ರದೇಶದಲ್ಲಿ ನಿಂತು, ಸುತ್ತಲೂ ನೋಡುತ್ತ ಮೆಲ್ಲನೆ ಒಂದುಬಾರಿ ಕೈತಟ್ಟಿದನು. ಕೂಡಲೇ ಪೊದರುಗಳಿಂದ ಒಂದು ಬಗೆಯ ಸಾಂಕೇತಿಕಶಬ್ದವು ಹೊರಟಿತು. ದಾರಿಗನು ತಲೆದೂಗಿ, ಅದೇ ಬಗೆಯ ಶಬ್ದದಿಂದ ಉತ್ತರವನ್ನು ಹೇಳಿ, ಮತ್ತೊಮ್ಮೆ ಕೈತಟ್ಟಿದನು. ಈತನ ಕರಾಸ್ಸಾಲನದ ಶಬ್ದವು ನಿಲ್ಲುವುದರೊಳಗಾಗಿ, ಇವನಂತೆಯೇ ವೇಷಧರ ರಾಗಿದ್ದ ಎಂಟುಮಂದಿ ರೈತರು ದೊಣ್ಣೆಗಳನ್ನು ಹಿಡಿದು ಕುಣಿಯುತ್ತ ಓಡಿಬಂದು ದಾರಿಗನನ್ನು ಸುತ್ತಿ ಮುತ್ತಿ, ಕುತೂಹಲದಿಂದ ರೆಪ್ಪೆ ಮುಚ್ಚದೆ ಬಿಡುಗಣ್ಣಿನಿಂದ ನೋಡುತ್ತ ನಿಂತರು. ದಾರಿಗನು ವ್ಯಂಗ್ಯವಾಗಿ ನಕ್ಕು, ಮತ್ತೊಮ್ಮೆ ಗಟ್ಟಿಯಾಗಿ ಕೈ ತಟ್ಟಿ ದನು, ಈತನ ಪರಿಹಾಸಕ್ಕೆ ರೈತರು ಕಳೆಗುಂದಿ ತಲೆಬಾಗಿ ನಿಲ್ಲಬೇಕಾ