ವಿಷಯಕ್ಕೆ ಹೋಗು

ಪುಟ:ದಕ್ಷಕನ್ಯಾ .djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೨ ಸ ೨ ಹಿತ್ಯ ಷಿ ಣಿ ಯಿತು, ಹಾಗೆ ನಿಂತವರನ್ನು ನೋಡಿ, ದಾರಿಗನಿಗೆ ಮತ್ತೂ ನಗುವುಂಟಾ ಯಿತು. ತಲೆಯನ್ನು ಕುಣಿಸುತ್ತ ಹೇಳಿದನು,-' ಸರಿಸು ; ಬಿಡಿಬಿಡಿ. ನೀವೇನಪ್ಪ ! ಎಲ್ಲರೂ ಚೆನ್ನಾಗಿ ಕುಡಿದು, ಮಲೆತುಹೋಗಿರುತ್ತೀರಿ. ನಿಮಗೆ ಮೈಮೇಲೇನಾದರೂ ನೆನಪಿದ್ದರಲ್ಲವೆ, ನನ್ನ ಗುರುತಾಗುತ್ತಿದ್ದಿತು ! ನಿಮ್ಮ ಜತೆಗಾರನಾಗಿದ್ದರೂ, ಮೂರುದಿನ ಅಗಲಿದ್ದ ಮಾತ್ರಕ್ಕೆ ಮರೆ ತಿರಿ ; ಹೇಳುವುದೇನು !? ರೈತರು ಮತ್ತೆ ನೋಡಿ,-' ಯಾರೋ ? ನರಸಿಂಗನೇನೋ ? ಸರಿಸರಿ, ಈಗ ಗೊತ್ತಾಯಿತು !' ದಾರಿಗ-ಹೂಂ ! ಅವನೇ ನಾನು. ರೈತರು-ವಿಷಹರಪುರಕ್ಕೆ ಹೋಗಿದ್ದೆಯಲ್ಲ ; ಈಗಲೇ ಹ್ಯಾಗೆ ಬಂದೆ ? ದಾರಿಗೆ ಕೆಲಸವು ಹಾಗಿತ್ತು ; ನಿಲ್ಲದೆ ಓಡಿಬಂದೆ. ರೈತರು--ಅಲ್ಲಿ ಪಟ್ಟಮ್ಮಣ್ಣಿಯವರನ್ನು ನೋಡಿದ್ದೆಯಾ ? ಏನೆಂದರು ? ದಾರಿಗ-ನೋಡಿದ್ದೆ ; ಉಳಿದ ವಿಚಾರವನ್ನು ಇಲ್ಲಿ ಹೇಳಲಿಕ್ಕಾಗದು. ರೈತರು-ಹಾಗಾದರೆ, ನಡೆ ; ಧಣಿಯ ಹತ್ತಿರದಲ್ಲೇ ಹೇಳುವೆ. ದಾರಿಗನು ಮುಂದಾದನು, ರೈತರು ದಾರಿಗನಾಗಿ ಬಂದ ನರ ಸಿಂಗನೊಡನೆ, ಚೌಕಕ್ಕೆ ಈಶಾನ್ಯ ದಿಕ್ಕಿಗೆ ತಿರುಗಿ ಮುಳ್ಳು, ಕಲ್ಲು, ಹಳ್ಳ, ತಿಟ್ಟು, ಬಂಡೆ, ಮೆಳೆಗಳಿಂದ ಅಸಹ್ಯವಾಗಿದ್ದ ದಾರಿಯಲ್ಲಿ ಸುತ್ತಿ ಸುತ್ತಿ ನಡೆಯುತ್ತ, ಚೌಕಕ್ಕೆ ಅರ್ಧಮೈಲಿ ದೂರದಲ್ಲಿದ್ದ ಗುಡ್ಡವನ್ನು ಹತ್ತಿ ಬಂದರು. ಗುಡ್ಡದ ಮೇಲಿನ ಕಲ್ಲುಮಂಟಪದಲ್ಲಿ, ಎತ್ತರವಾದುದೊಂದು ಜಗಲಿಯ ಮೇಲೆ ಕುಳಿತಿದ್ದ ಕರಾಳವದನನನ್ನೂ, ಅವನ ಮುಂದೆ ನಿಂತು, ಬೆಸನೇನೆಂದು ಕೇಳುತ್ತಿದ್ದ ಸುಂದರ ಯುವಾಪುರುಷನನ್ನೂ ಕಂಡು, ಮುಂದೆ ಬಂದುನಿಂತು ಕೈಮುಗಿದರು. ಕರಾಳ-ಕುತೂಹಲದಿಂದ, ಯಾರೋ ? ನರಸಿಂಗನೇ ? ಇದೇನಿಷ್ಟು ಅವಸರದಿಂದ ಬಂದೆ ? ಸಮಾಚಾರವೇನು ??