ಪುಟ:ದಕ್ಷಕನ್ಯಾ .djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧o೪ ಸ ತಿ ಹಿ 3 ಷಿ ಅವರು ನಮ್ಮನ್ನು ಕಂಡುಹಿಡಿದಾರು !” ಹೀಗೆ ಹೇಳಿ, ನನ್ನನ್ನು ಅಲ್ಲಿಂದ ಆಗಲೇ ಹೊರಡಿಸಿ, ತಾವೂ ಹೊರಟುಹೋದರು, ನಾನು ಅಲ್ಲಿಂದ ಹೊರಟವನು, ಆ ಊರಲ್ಲಿ ಮತ್ತೆಲ್ಲಿಯೂ ನಿಲ್ಲಲು ಧೈರ್ ವಿಲ್ಲದೆ, ಅದೇ ಮುಖದಿಂದಲೇ ಹೊರಟುಬಂದೆನು. ಯುವಕ-ಸಂಶಯದಿಂದ-* ಅದಿರಲಿ ; ಇದೇಕೆ ? ನಿನ್ನ ಗಂಟಲು ಹೀಗೆ ಒಡೆದು, ನಾಲ್ಕಾರು ಕ೦ರಗಳಾಗಿ ತೋರುತ್ತಿದೆ ?' ನರಸಿಂಗ ಸ್ವಾಮಾ ! ಗಂಟಲು ಒಡೆಯುವುದು ಹೆಚ್ಚೇ ? ಮೂರು ದಿನಕ್ಕೂ 200 ಮೈಲಿ ನಡೆಯುವುದು ಸುಮ್ಮನಾಗುವುದೇ ? ಅದರಲ್ಲಿ ಅನ್ನ ನೀರು ಇಲ್ಲದೆ, ಒಂದೆಡೆ ನಿಲ್ಲಲಿಕ್ಕಾದರೂ ಆಗದೆ, ನಿದ್ದೆಯನ್ನು ತೊರೆದು, ಸಿಕ್ಕಿದ ನೀರು ಕುಡಿದು, ಬಿಸಿಲಲ್ಲಿ-ಗಾಳಿ ಯಲ್ಲಿ ಸುತ್ತಿ ಬಂದರೆ, ಗಂಟಲು ಒಡೆಯದಿದ್ದೀತೇ ! ಹೊಟ್ಟೆಯ ಲೆಲ್ಲಾ ಹುಣ್ಣಾಗಿಹೋಗಿದೆ. ಯುವಕ-ತಲೆಗೆ ಸುತ್ತಿರುವುದೇನು ? ಮುಖದಮೇಲೆ ಪಟ್ಟಿಯೇಕೆ ? ನರಸಿಂಗ-ಬರುವಾಗ ಬಾಯಾರಿಕೆ ಹೆಚ್ಚಾಗಿದ್ದುದರಿಂದ, ದಾರಿಯಲ್ಲಿದ್ದ ಕೆರೆಯಲ್ಲಿಳಿದು ನೀರುಕುಡಿಯ ಹೋದೆನು, ತಲೆಸುತ್ತಿ ಕೆಳಗೆ ಬಿದ್ದು ಬಹಳ ಹೊತ್ತು, ಮೈಮರೆದಿದ್ದು, ಆ ಬಳಿಕ ಎಚ್ಚೆತ್ತು ನೋಡಿದೆನು, ಮೈಯೆಲ್ಲಾ ಗಾಯವಾಗಿತ್ತಲ್ಲದೆ ತಲೆಯಲ್ಲಿಯೂ, ಮುಖದಲ್ಲಿಯೂ ಎರಡೆರಡು ಕಡೆಗಳಲ್ಲಿ ದೊಡ್ಡ ದೊಡ್ಡ ಗಾಯ ಗಳಾಗಿದ್ದು, ರಕ್ತವು ಸುರಿಯುತ್ತಿತ್ತು. ರಕ್ತವನ್ನು ತಡೆಗಟ್ಟಿ ಲಿಕ್ಕೆಂದು ಬಟ್ಟೆಯನ್ನು ಹರಿದು, ಕಾಡುಸೊಪ್ಪಿನ ರಸದಲ್ಲಿ ಅದ್ದಿ, ಗಾಯಕ್ಕೆ ಪಟ್ಟಿ ಹಾಕಿದೆನು, ಅದರಿಂದ ಬಾಧೆ ಹೆಚ್ಚಾಗದಿದ್ದರೂ ಜ್ವರವೇನೋ ಬಲವಾಗಿ ಬಂದಿದೆ. ಕರಾಳ-ಹಾಗಿದ್ದರೆ, ಹೋಗಿ ಗುಣವಾಗುವವರೆಗೂ ಇದ್ದು, ಸುಧಾರಿಸಿ ಕೊಂಡ ಬಳಿಕ ಬಾ.