ವಿಷಯಕ್ಕೆ ಹೋಗು

ಪುಟ:ದಕ್ಷಕನ್ಯಾ .djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನ್ಯಾ ೧೦೫ ನರಸಿಂಗ-ಹಾಗೆಯೇ ಮಾಡಬೇಕು ; ಆದರೆ, ಪುಟ್ಟಮ್ಮಣ್ಣಿಯವರು, ಮಗಳಿಗೆ ಹೇಳಿರುವ ಮಾತನ್ನೂ ಹೇಳಿ ಹೋಗಬೇಕಾಗಿದೆ, ಯಾರಾದರೂ ಜತೆಗೆ ಬಂದರೆ ಹೇಳಿ ಹೋಗುತ್ತೇನೆ ಕರಾಳ-ಯುವಕನನ್ನು ನೋಡಿ,-' ಮಗು, ಸುಪಂಧ ! ನಡೆ ; ನೀನೇ ಹೋಗಿ ಬಾ.” ಯುವಕನು, ನರಸಿಂಗನನ್ನು ಜತೆಗೊಂಡು, ಗುಡ್ಡದಿಂದಿಳಿದು, ಗುಡ್ಡದ ಕೆಳಗಿನ ಗುಹೆಯನ್ನು ಪ್ರವೇಶಿಸಿ, ಅಲ್ಲಿಂದ ಹೊರಟು, ಒಂದು ಸಣ್ಣ ತೋಟವನ್ನು ಸೇರಿ, ತೋಟದಲ್ಲಿದ್ದ ಕಲ್ಲುಕಟ್ಟಡದ ಹಳೆಯಮನೆಯ ಬಳಿಗೆ ಬಂದುನಿಂತನು ಮನೆಬಾಗಲಿಗೆ ಹೊರಗಡೆಯಿಂದ ಬೀಗಹಾಕಿದ್ದಿತು. ಸುಪಂದನು ಬೀಗವನ್ನು ತೆಗೆದು ಬಾಗಲನ್ನು ತಳ್ಳಿದನು ; ತೆರೆಯಲಿಲ್ಲ. ಒಳಗೆ ಅಗಣಿ ಹಾಕಿದ್ದಿತು, ಕುತೂಹಲದಿಂದ ಕಿಟಿಕಿಯ ಕದಗಳನ್ನು ಬಲವಾಗಿ ತಟ್ಟಿದನು. ಹಳೆಯದಾಗಿದ್ದುದರಿಂದ, ಅದು ಸೀಳಿ ಕೆಳಗೆ ಬಿದ್ದಿತು ಸುಸಂಧನು ಕಿಟಿಕಿಯಲ್ಲಿ ಮುಖವಿಟ್ಟು ನೋಡಿದನು. ಮನೆಯೊಳ ಗಡೆ ಮಂಚದಮೇಲೆ ಯಾರೋ ಮುಸುಕಿಟ್ಟು ಮಲಗಿದ್ದಂತೆ ಕಂಡುಬರಲು, ಮೆಲ್ಲನೆ ಕೂಗಿದನು,-' ಹೂಂ ! ಏಳು, ಏಳು ; ಬಾಗಿಲನ್ನು ತೆಗೆ ! ನಿನ್ನನ್ನು ನೋಡಲು, ನಿಮ್ಮ ರಿನವನು ಬಂದಿರುವನು.” ಉತ್ತರವ ಹೊರಡುವ ಮಾತು ಹಾಗಿರಲಿ ; ಮಲಗಿದ್ದ ವ್ಯಕ್ತಿಯು ಕದಲಿದಂತೆಯೂ ಕಾಣಲಿಲ್ಲ. ಮತ್ತೆ ಮತ್ತೆ ಕೂಗಿದನು, ಆದರೂ ಉತ್ತರವಿಲ್ಲದಿದ್ದುದರಿಂದ, ದಿಗಿಲು ಬಿದ್ದು ಹೇಳಿದನು,-' ನರಸಿಂಗ ! ಇದೇನೋ ಎಷಲ್ಯಾಸವಾಗಿದೆ.' ನರಸಿಂಗ-ತಲೆದೂಗಿ.- ಸ್ವಾಮಿಾ ! ದುಡುಕಿ ಗಲಭೆಮಾಡಬೇಡಿರಿ ; ನಾನೇ ಕೂಗಿ ನೋಡುತ್ತೇನೆ ; ಇರಲಿ.” ಎಂದು ತಡೆದು ನಿಲ್ಲಿಸಿ, ತಾನೇ ಕಿಟಿಕಿಯ ಬಳಿಗೆ ಬಂದು ಕೂಗಿಹೇಳಿದನು,-' ತಾಯಿಾ ? ಭಯಪಡಬೇಡಿರಿ, ನಾನು ವಿಷ ಹರಪುರದಿಂದ ಬಂದವನು, ತಮ್ಮ ತಾಯಿ, ಸುನಂದಾದೇವಿಯವರೇ ನನ್ನನ್ನು ಕಳಿಸಿದ್ದಾರೆ. ನಿಮ್ಮ