ಪುಟ:ದಕ್ಷಕನ್ಯಾ .djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿ ಣ ತಿ. ದೇಶಬಾಂಧವರೇ ! ತಮ್ಮೆಲ್ಲರ ಉದಾರಾಶ್ರಯ ಬಲದಿಂದ ಸತೀಹಿತೈಷಿಣಿಯು, ತನ್ನ ಜನ್ಮ ವ್ರತವಾದ ದೇಶಮಾತೃ ಸೇವೆಯಲ್ಲಿ, ಮೊದಲನೆಯ ವರ್ಷವನ್ನು ಯಥೋಚಿತರೀತಿಯಲ್ಲಿ ವಿನಿಯೋಗಿಸಿ, ದ್ವಿತೀಯವರ್ಷದ ಪರಿಸಮಾಪ್ತಿ ಯೊಳಗಾಗಿ, ನಿರ್ದಿಷ್ಟ ಕಾರವನ್ನೂ ಸಮರ್ಪಕವಾಗಿ ನೆರೆವೇರಿಸುವಂತೆ ಮಾಡುವ ಉತ್ಸುಕತೆಯಿಂದ ಕಾರ್ ತತ್ಪರಳಾಗಿಯೇ ಇರುವಳು. ಆದರೆ, ಕೆಲವು ಅನಿವಾರ [ಹೇಗೆಂಬುದು, ' ಕ್ಷಮಾಪಣ ' ಲೇಖ ನದಲ್ಲಿ ವಿವರಿಸಲ್ಪಟ್ಟಿರುವುದು.] ಗಳಿಂದ ಹಿತೈಷಿಣಿಯು, ಈವರೆಗೂ ಹೊರ ಹೊರಡಲಿಕ್ಕಾಗದಿದ್ದು, ಈಗಲೇ ದೊರೆತಿರುವ ಸರ್ವಮಂಗಳೆಯ ಅನುಗ್ರ ಹದಿಂದ, ನೂತನ ಶಕ್ತಿ ಸಂಪನ್ನಳಾಗಿ, ತನ್ನ ಸುತ್ತಮುತ್ತಲೂ ಆಕ್ರಮಿಸಿ ಕೊಂಡಿದ್ದ ವಿಘ್ನ ಪರಂಪರೆಗಳನ್ನು ಬಡಿದೋಡಿಸಿ, ಮುಂದೆ ಬರುವಂತಾ ದಳು. ಇನ್ನು ಮುಂದೆಯಾದರೂ ಇದೇ ಮಾತೆಯ ವರಪ್ರಸಾದವು ತನ್ನಲ್ಲಿ ಪೂರ್ಣವಾಗಿದ್ದು, ತನ್ನ ಗಮನಾಗಮನ ವಿಚಾರಗಳಿಗೆ, ಯಾವ ಬಗೆಯ ಕಂಟಕಗಳಾಗಲೀ ಅಡ್ಡಯಿಸಿ ಬರುವುದಿಲ್ಲವೆಂದು ಧೈರ್ಯದಿಂದ ಸಾರಿಸಾರಿ ಹೇಳುತ್ತಿರುವಳು. ಅಲ್ಲದೆ, ಈವರೆಗೆ ದೊರೆತಿರುವ ಬಹುಮಂದಿ ಮಹಿಳೆಯರ ಸಲ ಹೆಯಂತೆಯೇ, ಇನ್ನು ಮುಂದೆ ಸತೀಹಿತೈಷಿಣಿಯ ಅಂತರ್ಬಾಹ್ಯಂಗಗಳೂ, ಸುಲಲಿತವೂ, ಸರಸ-ಸುಮನೋಹರ ಪದಬಂಧುರವೂ ಆಗಿ, ನಮ್ಮ ಸೋದ ರಿಯರ ಕೋಮಲವಾದ ಕೃತ್ಯು ಸುಮಗಳು ವಿಕಸನವಾಗುವಂತೆ ಮಾಡುವ ಪ್ರಯತ್ನವೂ ನಡೆದು-ನಡೆಯುತ್ತಿರುವುದು, ಪ್ರಯತ್ನವು, ಸಫಲವಾ ದಂತೆಲ್ಲಾ, ಹಿತೈಷಿಣಿಯೊಡನೆ ತಿಂಗಳು-ತಿಂಗಳಿಗೂ ಕರ್ಣಾಟಕ ನಂದಿ ನಿಯೂ ಹೊರಹೊರಟು, ಸೋದರಿಯರ ಸೇವೆಯನ್ನು ಮಾಡಬೇಕೆಂಬ